Featured

ಕಟಪಾಡಿ : ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿ ಹೊರೆಕಾಣಿಕೆ ಮೆರವಣಿಗೆ ಸಂಪನ್ನ – Vishwanews24

ಕಟಪಾಡಿ : ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿ ಹೊರೆಕಾಣಿಕೆ ಮೆರವಣಿಗೆ ಸಂಪನ್ನ..

ಮೇ 13 ರಂದು ಸಂಪನ್ನಗೊಳ್ಳಲಿರುವ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ..

ಮೇ 21 ರಿಂದ ನಡೆಯಲಿರುವ ಶ್ರೀ ಬ್ರಹ್ಮ ಬೈದೇರುಗಳ ಹಾಗೂ ಪರಿವಾರ ಶಕ್ತಿಗಳ ನೇಮೋತ್ಸವ..

ಸಮಗ್ರವಾಗಿ ಜೀರ್ಣೋದ್ಧಾರಗೊಂಡಿರುವ ಕಟಪಾಡಿ ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿಯಲ್ಲಿ ಮೇ ೧೩ ರಂದು ಸಂಪನ್ನಗೊಳ್ಳಲಿರುವ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಹಾಗೂ ಮೇ ೨೧ ರಿಂದ ನಡೆಯಲಿರುವ ಶ್ರೀ ಬ್ರಹ್ಮ ಬೈದೇರುಗಳ ಹಾಗೂ ಪರಿವಾರ ಶಕ್ತಿಗಳ ನೇಮೋತ್ಸವ ಕಾರ್ಯಕ್ರಮದ ಪ್ರಯುಕ್ತ ನಗನಾಣ್ಯ, ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ ಭಾನುವಾರ ಸಂಪನ್ನಗೊ0ಡಿತು. ಮೂಡಬೆಟ್ಟು ಚೌಟರಕಟ್ಟೆ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಗರಡಿಯ ಪೂಜಾ ಪೂಜಾರಿ ಶ್ರೀ ಇಂಪು ಪೂಜಾರಿ ಅವರು ಶೋಭಾ ಯಾತ್ರೆಗೆ ಚಾಲನೆ ನೀಡಿದರು.

ಮೂಡಬೆಟ್ಟು ಚೌಟರಕಟ್ಟೆಯಿಂದ ಗರಡಿಯ ಸನ್ನಿಧನದವರೆಗೆ ನಡೆದ ಮೆರವಣಿಗೆಯಲ್ಲಿ ಕೊಲ್ಲೂರು ಶ್ರೀ ಮುಖಾಂಬಿಕಾ ದೇವಸ್ಥಾನ, ಉಚ್ಚಿಲ ಶ್ರೀ
ಮಹಾಲಕ್ಷ್ಮೀ ದೇವಸ್ಥಾನ,ಎಲ್ಲೂರು ಶ್ರೀ ವಿಶ್ವನಾಥ ದೇವಸ್ಥಾನ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರಗಳ ವತಿಯಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು. ಮೊಗವೀರ ಸಮಾಜ, ಪರಿಯಾಳ ಸಮಾಜ, ದೇವಾಡಿಗ ಸಮಾಜ, ಸವಿತಾ ಸಮಾಜ, ಬಿಲ್ಲವ ಸಮಾಜ ಸಹಿತ ವಿವಿಧ ಸಮಾಜ ಸಂಘಟನೆಗಳು ಊರ ಪರವೂರ ವಿವಿಧ ಸಂಘಸ0ಸ್ಥೆಗಳು, ಕೂಡುಕಟ್ಟುಗಳು ಹಾಗೂ ಆರು ಮಾಗಣೆಯ ಭಕ್ತಾಧಿಗಳು ಹೊರಕಾಣಕೆ ಸೇವೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಗರಡಿಯ ಸ್ವಾಗತ ಗೋಪುರ, ತೀರ್ಥಭಾವಿ ಹಾಗೂ ಉಗ್ರಾಣಗಳ ಉದ್ಘಾಟನೆ ನೆರವೇರಿಸಲಾಯಿತು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಡಾ. ರಾಜ್‌ಶೇಖರ್ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್ ಎನ್. ಪೂಜಾರಿ, ಸಮಿತಿಯ ಗೌರವಾಧ್ಯಕ್ಷರಾದ ಗಂಗಾಧರ ಸುವರ್ಣ, ಪ್ರೇಂ ಕುಮಾರ್, ಗೌ. ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್, ಕೋಶಾಧಿಕಾರಿ ದುಗ್ಗಪ್ಪ .ಜಿ. ಬಂಗೇರ, ಗೌರವ ಸಲಹೆಗಾರ ಉಮೇಶ್ ಕೋಟ್ಯಾನ್ ಯಾನೆ ಬಗ್ಗ ಪೂಜಾರಿ, ಆರ್.ಜಿ ಕೋಟ್ಯಾನ್, ಜೊತೆ ಕೋಶಾಧಿಕಾರಿ ಚಂದ್ರಹಾಸ ಕೋಟ್ಯಾನ್, ಕಾರ್ಯದರ್ಶಿಗಳಾದ ಕಾಮರಾಜ್ ಸುವರ್ಣ, ರಿತೇಶ್ ಕೋಟ್ಯಾನ್, ಉಪಾಧ್ಯಕ್ಷರುಗಳಾದ ಗೀತಾಂಜಲಿ ಸುವರ್ಣ, ಜಗನ್ನಾಥ್ ಕೋಟೆ, ಮಹೇಶ್ ಪೋಜಾರಿ, ಗರಡಿ ಜವನೆರ್ ತಂಡದ ಅಧ್ಯಕ್ಷ ಸುಧೀರ್ ರಾಜ್ ಪೂಜಾರಿ, ಮುಂಬಯಿ ಸಮಿತಿಯ ಅಧ್ಯಕ್ಷ ಗೋಪಾಲ ಕಾಂಚನ್, ಸ್ಥಳವಂದಿಗರಾದ ರತ್ನಾಕರ ಕರ್ಕೇರ, ರಂಗ ಪೂಜಾರಿ, ಶೀನ ಪೂಜಾರಿ, ಸದಾನಂದ ಪೂಜಾರಿ, ಮೋಹನ್ ಪೂಜಾರಿ, ರಮೇಶ್ ಜತ್ತನ್, ಭೋಜ ಪೂಜಾರಿ, ಕೃಷ್ಣಪ್ಪ ಪೂಜಾರಿ, ರಾಘು ಕೋಟ್ಯಾನ್,ಮುದ್ದು ಪೂಜಾರಿ, ಸುಂದರ ಗುರಿಕಾರ, ದೇವಾಡಿಗ ಸಂಘದ ಅಧ್ಯಕ್ಷ ಮನೋಹರ್ ದೇವಾಡಿಗ, ಪರಿಯಾಳ ಸಂಘದ ಅಧ್ಯಕ್ಷ ಶಂಕರ್ ಸಾಲ್ಯಾನ್, ಮೂಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಿಜಯ ಶೆಟ್ಟಿ ಕುದ್ರಾಡಿ,ಶ್ರೀ ವಿಶ್ವನಾಥ ಕ್ಷೇತ್ರದ ಗೌ.ಪ್ರ. ಕಾರ್ಯದರ್ಶಿ ಶಿವಾನಂದ ಯು, ಕೋಟೆ ಗ್ರಾ.ಪಂ ಅಧ್ಯಕ್ಷ ಕಿಶೋರ್ ಅಂಬಾಡಿ, ಕಟಪಾಡಿ ಗ್ರಾ.ಪಂ ಅಧ್ಯಕ್ಷೆ ಇಂದಿರಾ ಅಚಾರ್ಯ, ಕಳತ್ತೂರು ಗರಡಿಯ ವಿಶ್ವನಾಥ ಪೂಜಾರಿ, ಪ್ರಮುಖರಾದ ಶಿಲ್ಪಾ ಜಿ ಸುವರ್ಣ, ಕಟಪಾಡಿ ಶಂಕರ ಪೂಜಾರಿ, ನಿರಂಜನ್ ಪೂಜಾರಿ, ಮಾಧವ ಪಾಲನ್ ಶೇಖರ್ ಕೋಟ್ಯಾನ್, ನವೀನ್ ಅಮೀನ್ ಶಂಕರಪುರ, ಮಹೇಶ್ ಅಂಚನ್, ಭಾಸ್ಕರ್ ಪೂಜಾರಿ, ಪ್ರಸಾದ್ ಬಂಗೇರ ಹಾಗೂ ವಿವಿಧ ಸಮಿತಿಗಳ ಸದಸ್ಯರು, ಗರಡಿಮನೆ ಕುಟುಂಬಸ್ಥರು, ಗರಡಿ ಜವನೆರ್ ತಂಡದ ಸದಸ್ಯರು, ಸ್ಥಳವಂದಿಗರು ಆರು ಮಾಗಣೆಯ ಹತ್ತು ಸಮಸ್ತರು ಉಪಸ್ಥಿತರಿದ್ದರು.

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 days ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

2 days ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

2 days ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

2 days ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

2 days ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

2 days ago