ಕಟಪಾಡಿ : ಕೆನ್ ಈ ಮಾಬುನಿ ರಿಯೋ ಕರಾಟೆ ಸ್ಕೂಲ್ ಆಫ್ ಇಂಡಿಯಾ ಉಡುಪಿ ಜಿಲ್ಲೆ ದ್ವಿತೀಯ ಬಾರಿಗೆ ರಾಷ್ಟ್ರೀಯ ಮಟ್ಟದ ಆಹ್ವಾನಿತ ತಂಡಗಳ ಕರಾಟೆ ಚಾಂಪಿಯನ್ ಶಿಪ್ “ಕೋಂಪಿಟ್ 4.0 ಇದರ ಉದ್ಘಾಟನಾ ಸಮಾರಂಭ ಆದಿತ್ಯವಾರ ನಡೆಯಿತು.
ಕಾರ್ಯಕ್ರಮವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ”ಮಕ್ಕಳಲ್ಲಿರುವ ನೈಜ ಪ್ರತಿಭೆಯನ್ನು ಗುರುತಿಸಿ ಹೊರತೆಗೆಯುವ ಮುಖೇನ ಬೆಂಬಲಿಸಿಬೇಕಾಗಿದೆ ಅದರ ಜತೆಗೆ ದೈಹಿಕ ಆರೋಗ್ಯ ಶ್ರೀಮಂತಿಕೆ ಕ್ರೀಡೆಯಿಂದ ಸಿಗಲು ಸಾಧ್ಯವಿದೆ ಅದ್ದರಿಂದ ನೈಜ ಪ್ರತಿಭೆಗೆ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೋಷಕರು,ಶಿಕ್ಷಕರು ಕಾರ್ಯ ಪ್ರವೃತರಾಗಬೇಕೆಂದರು.
ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಕರಾಟೆ ಎಂಬುದು ಸ್ವಯಂ ರಕ್ಷಣೆಗೆ ಇರುವಂತಹ ವಿದ್ಯೆ ವಿನಹ ಮತ್ತೊಬ್ಬರಿಗೆ ಆಕ್ರಮಣ ಮಾಡುವುದಲ್ಲ , ರಾಷ್ಟ್ರೀಯ ಮಟ್ಟದ ಈ ಕಾರ್ಯಕ್ರಮ ಮಾಡುವುದು ಸುಲಭದ ಮಾತಲ್ಲ ಅದೊಂದು ಛಲ ಎಂದರು.ಹಿಂದುಳಿದ ವರ್ಗದ ಸಚಿವನಾಗಿದ್ದ ಸಮಯದಲ್ಲಿ ರಾಜ್ಯದ ನಾಲ್ಕುವರೆ ಸಾವಿರ ಹಾಸ್ಟೆಲ್ನಲ್ಲಿನ ವಿಧ್ಯಾರ್ಥಿನಿಯರಿಗೆ ಉಚಿತ ಕರಾಟೆ ತರಬೇತಿ ನೀಡುವ ಕೆಲಸಕ್ಕೆ ಚಾಲನೆ ನೀಡಿದ್ದೆ ಆದರೆ ಸದ್ಯ ನೆನೆಗುದಿಗೆ ಬಿದ್ದಿದೆ ಸಂಬಂದ ಪಟ್ಟ ಸಚಿವರಿಗೆ ಮತ್ತೊಮ್ಮೆ ಮನವರಿಕೆ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿತೇಂದ್ರ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ , ಶಾಸಕ ಯಶ್ಪಾಲ್ ಸುವರ್ಣ,ಭಾರತ್ ಕೋ ಆಪರೇಟಿವ್ ಬ್ಯಾಂಕ್ ನ ಚೆಯರ್ ಮ್ಯಾನ್ ಸೂರ್ಯಕಾಂತ್ ಜಯ ಸುವರ್ಣ, ನವೀನ್ ಅಮೀನ್ ಶಂಕರಪುರ, ಸುಭಾಷ್ ಎಂ ಸಾಲ್ಯಾನ್,ಸಂತೋಚ್ ಆಚಾರ್ಯ,ರೋಹಿತಾಕ್ಷ ಉದ್ಯಾವರ,ಕಿರಣ್ ಕುಂದಾಪುರ, ಅಜಿತ್ ಕುಮಾರ್,ನದೀಮ್ ಮಂಗಳೂರು, ವಾಮನ್ ಪಾಲನ್, ಯೋಗಿಶ್ ಕೋಟ್ಯಾನ್, ಮೊದಲಾದವರು ಉಪಸ್ಥಿತರಿದ್ದರು.
ಶ್ರೀಷ ನಾಯಕ್,ಪುರುಷೋತ್ತಮ ಶೆಟ್ಟಿ, ಡಾ ಭಾಸ್ಕರ ಎಂಎನ್,ದಯಾನಂದ್ ಹೆಜ್ಮಾಡಿ, ಗಣೇಶ್ ಕುಮಾರ್ ಮಟ್ಟು,ಸದಾಶಿವ ಕಟ್ಟೆಗುಡ್ಡೆ,ಶರಣ್ ಕುಮಾರ್ ಮಟ್ಟು,ರೋಶನ್ ಆಲನ್,ಪ್ರವೀಣ್ ಪೂಜಾರಿ,ಅಜಿತ್ ಕುಮಾರ್,ಯೋಗಿಶ್ ಕೋಟ್ಯಾನ್, ಸಂದೀಪ್ ಶೆಟ್ಟಿ, ಗೋಪಾಲಕೃಷ್ಣ ರಾವ್,ನದೀಮ್ ಮಂಗಳೂರು, ಲಕ್ಷ್ಮೀ ನಾರಾಯಣ ಆಚಾರ್ಯ, ಸತೀಶ್ ಬೆಳ್ಮಣ್,ರಾಜೇಶ್ ಡಿ ಸುವರ್ಣ, ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯಧ್ಯಕ್ಷ ರವಿ ಸಾಲಿಯಾನ್ ಪ್ರಸ್ತಾವಿಕ ಮಾತುಗಳನ್ನಾಡಿದರು,ಯತೀಶ್ ಕೋಟ್ಯಾನ್ ಸ್ವಾಗತಿಸಿ ವಂದಿಸಿದರು.
ಪರಪ್ಪನ ಆಗ್ರಹಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಫೋನ್, ಸಿಮ್ಕಾರ್ಡ್ ಗಳು ಪತ್ತೆ ಬೆಂಗಳೂರು: ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್…
ಎಂಆರ್‌ಪಿಎಲ್ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ ಮಂಗಳೂರು: ಎಂಆರ್‌ಪಿಎಲ್‌ನಲ್ಲಿ ನಿನ್ನೆ (ಸೆ.30ರ ಬುಧವಾರ) ನಡೆದ…
ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ : ಭರತ್ ಶೆಟ್ಟಿ ಆಗ್ರಹ ಮಂಗಳೂರು: ಸ್ಫೋಟದ ನಿಖರ ಕಾರಣ…
ಮಡ್‌ಗಾಂವ್ - ಮಂಗಳೂರು 'ವಂದೇ ಭಾರತ್' ರೈಲು ಬೆಂಗಳೂರಿಗೆ ವಿಸ್ತರಣೆ ಮಂಗಳೂರು/ಉಡುಪಿ: ಈ ಹಿಂದೆ ಮಂಗಳೂರು ಸೆಂಟ್ರಲ್-ಮಡ್‌ಗಾಂವ್ ನಡುವೆ ಓಡುತ್ತಿದ್ದ…
ಅಕ್ಟೋಬರ್ 11ರಿಂದ 20ರ ವರೆಗೆ KSRTC ಯಿಂದ ವಿಶೇಷ ಪ್ಯಾಕೇಜ್ ಪ್ರವಾಸ ಉಡುಪಿ: ಕ.ರಾ.ರ.ಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ…
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ 62 ರೂ. ಏರಿಕೆ ನವದೆಹಲಿ: ಹಬ್ಬದ ಹೊಸ್ತಿಲಲ್ಲೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಗಣನೀಯ…