ಕಟಪಾಡಿ: ಶ್ರೀ ಕ್ಷೇತ್ರ ಪೇಟೆಬೆಟ್ಟು ಕಟಪಾಡಿಯ ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಬಬ್ಬು ಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋ ತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಜ.4 ಮತ್ತು ಜ.5ರಂದು ಜರಗಲಿದೆ.
ಜ.3ರಂದು ಬೆಳಗ್ಗೆ 8 ಗಂಟೆಗೆ ಸತ್ಯ ಕಂಬೆರ್ಲು ದೇವರ ದರ್ಶನ ಸೇವೆಯೊಂದಿಗೆ ಮುಹೂರ್ತ ಗೊಳ್ಳಲಿದೆ. ಜ.4ರಂದು ಬೆಳಗ್ಗೆ 7.30ಕ್ಕೆ ಧ್ವಜಸ್ತಂಭ (ಗಜಕಂಬ) ಮುಹೂರ್ತ, ಮಧ್ಯಾಹ್ನ 12ಕ್ಕೆ ಚಪ್ಪರ ಆರೋಹಣ, 12.45ಕ್ಕೆ ಮಹಾ ಅನ್ನ ಸಂತರ್ಪಣೆ, ಸಂಜೆ 4ಕ್ಕೆ ಶ್ರೀ ಕ್ಷೇತ್ರ ಶುದ್ಧಿ ಪೂಜೆ ನಡೆಯಲಿದೆ. ಸಂಜೆ 6ಕ್ಕೆ ಭಂಡಾರ ಹೊರಟು ಕಟಪಾಡಿ ಪೇಟೆಯ ಮೂಲಕ ವಿಜೃಂಭಣೆಯ ಭವ್ಯ ಮೆರವಣಿಗೆ ಯಲ್ಲಿ ಸಾಗಿ ಬರಲಿದೆ. ರಾತ್ರಿ 10ಕ್ಕೆ ಬಬ್ಬುಸ್ವಾಮಿ ನೇಮ ಹಾಗೂ ರಾತ್ರಿ 1 ಗಂಟೆಗೆ ಆದಿಶಕ್ತಿ ಶ್ರೀ ತನ್ನಿಮಾನಿಗ ದೇವಿಯ ನೇಮ ಜರಗಲಿದೆ.
ಜ.5ರ ಬೆಳಗ್ಗೆ 9ಕ್ಕೆ ಶ್ರೀ ಧೂಮಾವತಿ ಹಾಗೂ ಬಂಟ ದೈವಗಳ ನೇಮ, ಅಪರಾಹ್ನ 3 ಗಂಟೆಗೆ ಕೊರಗಜ್ಜ ದೈವದ ನೇಮ ಜರಗಲಿದೆ.
ಜ.4ರಂದು ಬೆಳಗ್ಗೆ 9ರಿಂದ ಸಂಜೆಯ ತನಕವೂ ಸಾಂಸ್ಕೃತಿಕ ಕಾರ್ಯ ಕ್ರಮವು ಜರಗಲಿವೆ ಎಂದು ಪಾಂ ಗಾಳ ನಾಯಕ್ ಮನೆತನ ಕಟಪಾಡಿ ಹೊಸ ಮನೆಯ ವೈ. ಭರತ್ ಹೆಗ್ಡೆ ಕಟಪಾಡಿ , ಗರಡಿಮನೆ ಅಶೋಕ್ ಎನ್. ಪೂಜಾರಿ ಕಟಪಾಡಿ, ಕೆ. ಪ್ರೇಮ್ ಕುಮಾರ್ ಕಟಪಾಡಿ, ಶ್ರೀ ಕ್ಷೇತ್ರದ ಗುರಿಕಾರ ಹರಿಶ್ಚಂದ್ರ ಪಿಲಾರ್ ತಿಳಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…