ಕಟೀಲು ಬ್ರಹ್ಮಕಲಶೋತ್ಸವ : ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ , ಪ್ಲಾಸ್ಟಿಕ್‌ ಮುಕ್ತ ಬ್ರಹ್ಮಕಲಶೋತ್ಸವವನ್ನಾಗಿಸಲು ಪ್ರಯತ್ನ -Vishwanews24

ಮಂಗಳೂರು: ನಗರದ ಹೊರವಲಯದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜ. 22ರಿಂದ ಫೆಬ್ರವರಿ 3ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ದೇವಸ್ಥಾನ ಸಮಿತಿ ಮತ್ತು ಆಡಳಿತ ಮಂಡಳಿ ಮುಂದಾಗಿದೆ.

ಬ್ರಹ್ಮಕಲಶೋತ್ಸವದ ನಿಟ್ಟಿನಲ್ಲಿ, ಈಗಾಗಲೇ ಕ್ಷೇತ್ರದಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ದೇವಳದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅವರು, ದೇವಸ್ಥಾನದಲ್ಲಿ ಈಗಾಗಲೇ ಪ್ರಸಾದ ಪಂಜಕಜ್ಜಾಯಕ್ಕೆ ಹಾಗೂ ಪ್ರಸಾದ ವಿತರಣೆ ಬಟ್ಟೆಯ ಚೀಲ ಹಾಗೂ ಕುಂಕುಮ ಪ್ರಸಾದಕ್ಕೂ ಕಾಗದದ ಲಕೋಟೆಯನ್ನು ಬಳಸಲಾಗುತ್ತಿದೆ. ಭೋಜನ ಶಾಲೆಗೆ 2,000 ಊಟದ ಬಟ್ಟಲು ಉಪಯೋಗಿಸುವ ನಿಟ್ಟಿನಲ್ಲಿ ಅತ್ಯಾಧುನಿಕವಾದ ತಟ್ಟೆ, ಬಟ್ಟಲು ತೊಳೆಯುವ ಯಂತ್ರವನ್ನು ತರಿಸಲಾಗುವುದು. ಒಟ್ಟಿನಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ದೇವಸ್ಥಾನ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯಿಂದ ಪ್ರಚಾರಾರ್ಥವಾಗಿ ಮುದ್ರಿಸಿರುವ ಎಲ್ಲ ಬ್ಯಾನರ್‌ಗಳೂ ಬಟ್ಟೆಯದ್ದಾಗಿದ್ದು, ಇದು ಬಟ್ಟೆಯ ಬ್ಯಾನರ್‌, ಪ್ಲಾಸ್ಟಿಕ್‌ ಬಳಸದಿರೋಣ ಎಂಬ ಸ್ಲೋಗನ್‌ನ್ನು ಕೂಡ ಹಾಕಲಾಗಿದೆ. ಫ್ಲೆಕ್ಸ್‌ ಬ್ಯಾನರ್‌ ಬದಲು ಬಟ್ಟೆಯ ಬ್ಯಾನರನ್ನೇ ಬಳಸಿ ಎಂದು ಭಕ್ತರನ್ನು ಕೂಡ ವಿನಂತಿಸಲಾಗಿದೆ. ಊಟ ಹಾಗೂ ಉಪಾಹಾರಕ್ಕೆ ಸ್ಟೀಲ್‌ ಬಟ್ಟಲನ್ನು ಬಳಸಲು ನಿರ್ಧರಿಸಲಾಗಿದ್ದು, ನೀರು ಹಾಗೂ ಕಾಫಿ, ಚಾ, ಪಾನೀಯಗಳಿಗೂ ಸ್ಟೀಲ್‌ ಹಾಗೂ ಕಾಗದದ ಲೋಟೆಗಳನ್ನೇ ಬಳಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ದಾನಿಗಳೂ ಮುಂದೆ ಬಂದಿದ್ದು, ಹತ್ತು ಸಾವಿರಕ್ಕೂ ಮಿಕ್ಕಿದ ಬಟ್ಟಲುಗಳನ್ನು ಅಷ್ಟೇ ಸಂಖ್ಯೆಯ ಲೋಟಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದೆ.

ಕ್ಷೇತ್ರದಲ್ಲಿ ಪ್ಲಾಸ್ಟಿಕ್‌ ಚೀಲಗಳನ್ನು ಬಳಸದೆ ಬಟ್ಟೆಯ ಚೀಲಗಳನ್ನೇ ಬಳಸಲು ಮುತುವರ್ಜಿ ವಹಿಸಲಾಗಿದೆ. ಪಂಚಕಜ್ಜಾಯಕ್ಕೂ ಪ್ಲಾಸ್ಟಿಕ್‌ ಲಕೋಟೆಯ ಬದಲು ಕಾಗದದ ಲಕೋಟೆಗಳನ್ನು ಬಳಸಲು ದೇವಸ್ಥಾನ ಮುಂದಾಗಿದೆ. ಸದ್ಯ ತೀರ್ಥದ ಬಾಟಲಿ ಹಾಗೂ ತ್ರಿಮಧುರ ಪ್ರಸಾದವನ್ನು ಉತ್ತಮ ದರ್ಜೆಯ ಪ್ಲಾಸ್ಟಿಕ್‌ ಬಾಟಲಿಯಲ್ಲಿ ಕೊಡಲಾಗುತ್ತಿದ್ದು, ಪರ್ಯಾಯ ವ್ಯವಸ್ಥೆಗೆ ಚಿಂತನೆ ನಡೆದಿದೆ. ಇನ್ನು ಅಲಂಕಾರಕ್ಕಾಗಿ ಹಾಕಲಾಗುವ ಬಂಟಿಂಗ್ಸ್‌ ಬಟ್ಟೆಯದ್ದೇ ಆಗಿರುವಂತೆ ಸಮಿತಿ ಸೂಚಿಸಿದೆ.

ಒಟ್ಟಾರೆ, ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಮುಕ್ತ ಬ್ರಹ್ಮಕಲಶೋತ್ಸವವನ್ನಾಗಿಸಲು ಪ್ರಯತ್ನ ಸಾಗಿದೆ. ದ್ವಾರ ಮುಂತಾದ ಅಲಂಕಾರಿಕ ವಸ್ತುಗಳಲ್ಲೂ ಪ್ಲಾಸ್ಟಿಕ್‌ ರಹಿತ ವಸ್ತುಗಳನ್ನು ಬಳಸುವಂತೆ ಭಕ್ತರನ್ನು ವಿನಂತಿಸಲಾಗಿದೆ.

Vishwa News 24

Recent Posts

ಉಚ್ಚಿಲ : ಕರಾವಳಿ ಭಾಗವಿಲ್ಲದೇ ರಾಜ್ಯಕ್ಕೆ ಹೆಚ್ಚಿನ ಬೆಲೆಯೇ ಇರುವುದಿಲ್ಲ :  ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ  :…

2 hours ago

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ ; ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ  : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…

2 hours ago

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ – vishwanews24

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ    ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…

2 hours ago

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

1 day ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

1 day ago

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು – vishwanews24

ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…

1 day ago