Featured

ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ: ನ.16 ರಂದು ಏಳನೇ ಮೇಳದ ಪಾದಾರ್ಪಣೆ – vishwanews24

ಕಟೀಲು ಯಕ್ಷಗಾನ:  ನ.16 ರಂದು ಏಳನೇ ಮೇಳದ ಪಾದಾರ್ಪಣೆ

ಮಂಗಳೂರು : ದಶಾವತಾರ ಯಕ್ಷಗಾನ ಮಂಡಳಿಯ ಈ ವರುಷದ ತಿರುಗಾಟದ ಆರಂಭೋತ್ಸವದಂದು ಏಳನೆಯ ಮೇಳದ ಪಾದಾರ್ಪಣೆ ನವೆಂಬರ್ 16ರ ಭಾನುವಾರದಂದು ನಡೆಯಲಿದೆ.

ಚಿನ್ನ ಬೆಳ್ಳಿಗಳ ಕಿರೀಟ ಇತ್ಯಾದಿ ಪರಿಕರಗಳನ್ನು ವೈಭವದ ಮೆರವಣಿಗೆಯಲ್ಲಿ ಬಜಪೆಯಿಂದ ಕಟೀಲಿಗೆ ತಂದು ದೇವರಿಗೆ ಒಪ್ಪಿಸಲಾಗುವುದು. ಏಳನೆಯ ಮೇಳಕ್ಕೆ ಭಕ್ತರು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನೀಡಿರುವ ದೇವರ ಕಿರೀಟಗಳು, ತೊಟ್ಟಿಲು, ಚಿನ್ನಬೆಳ್ಳಿಗಳ ಆಯುಧ, ಅಪರಣಗಳು ಸೇರಿವೆ.

ಈ ಸಂದರ್ಭ ಬಜಪೆಯಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರು ಮೆರವಣಿಗೆಯನ್ನು ಉದ್ಘಾಟಿಸಲಿದ್ದು, ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ಶ್ಯಾಂ ಭಟ್, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಅಭಯಚಂದ್ರ ಜೈನ್, ಕೃಷ್ಣ ಪಾಲೇಮಾರ್, ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್, ಶ್ರೀ ಮಿಥುನ್ ರೈ ಮತ್ತು ಮೊದಲಾದ ಗಣ್ಯರು ಈ ಸಂದರ್ಭ ಉಪಸ್ಥಿತರಿರುತ್ತಾರೆ.

ಅಲ್ಲದೆ ಸ್ತಬ್ಧ  ಚಿತ್ರಗಳಲ್ಲಿ ಮೇಳಗಳ ದೇವರು, ಪರಿಕರಗಳೊಂದಿಗೆ ವೇದಘೋಷ, ಮೂರು ಸಾವಿರದಷ್ಟು ಮಂದಿ ಭಜನೆಯಲ್ಲಿ, ನಾಲ್ಕಕ್ಕೂ ಹೆಚ್ಚು ಚೆಂಡೆ ತಂಡಗಳು, ವಾದ್ಯ, ಡೋಲು, ಕೊಂಬು, ಸ್ಯಾಕ್ರೋಫೋನ್, ನಾಗಸ್ವರ, ಬೇತಾಳ, ಕೀಲುಕುದುರೆ, ಹುಲಿವೇಷ ಇತ್ಯಾದಿಗಳು ಇರಲಿವೆ ಸುಮಾರು ಹದಿನೈದರಿಂದ ಇಪ್ಪತ್ತು ಸಾವಿರ ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಎಕ್ಕಾರಿನಿಂದ ಕಟೀಲುವರೆಗೆ ಕಾಲ್ನಡಿಗೆಯಲ್ಲಿ ಬಂದು ಮೇಳದ ಸ್ವತ್ತುಗಳನ್ನು ದೇವರಿಗೆ ಸಮರ್ಪಿಸಲಾಗುವುದು. ದೇವಸ್ಥಾನ ಬಳಿ, ಬಸ್ ನಿಲ್ದಾಣದಲ್ಲಿ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಭಜನೆಯಿಂದ ಕಟೀಲುವರೆಗೆ ಹಾದಿಯುದ್ದಕ್ಕೂ ಭಕ್ತಾದಿಗಳು ಪಾನೀಯದ ವ್ಯವಸ್ಥೆ ಮಾಡಿರುತ್ತಾರೆ.

ತಾ. 14ರಂದು ಚಂಡಿಕಾಹೋಮ, ಅಷ್ಟೋತ್ತರಶತ ನಾರಿಕೇಲ ಗಣಯಾಗ, ಆಗುತ್ತಾರಣ. ತಾ. 16ರಂದು ಬೆಳಿಗ್ಗೆ 10.30ಕ್ಕೆ ಪೂಜಾ ಕಿರೀಟಗಳ ಸ್ಥಾಪನೆ, ಆವಾಹನೆ, ಸಂಜೆ 3 ಗಂಟೆಗೆ ತಾಳಮದ್ದಲೆ ಇಡುವುದು. 5 ಗಂಟೆಗೆ ಗೆಜ್ಜೆ ಕಟ್ಟುವುದು, ಬಯಲಾಟ ಪಾಂಡವಾಶ್ವಮೇಧ ನಡೆಯಲಿದೆ. ಸಂಜೆ 6ಕ್ಕೆ ನಡೆಯುವ ಸಭಾಕಾರಕ್ರಮದಲ್ಲಿ ಫಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಸಾರಿಗೆ ಮತ್ತು ಮುಜರಾಯಿ ಸಚಿವ ಶ್ರೀ ರಾಮಲಿಂಗಾರೆಡ್ಡಿ, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಶಿವರಾಜ ತಂಗದಡಿ, ಶ್ರೀ ದಿನೇಶ್ ಗುಂಡೂರಾವ್, ಸಾಂಸದ ಶ್ರೀ ಬ್ರಿಜೇಶ್ ಚೌಟ, ಶಾಸಕರಾದ ಶ್ರೀ ಉಮನಾಥ ಕೋಟ್ಯಾನ್ ಮತ್ತು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ಅಂದು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಮಂದಿ ಕ್ಷೇತ್ರಕ್ಕೆ ಬರುವ ನಿರೀಕ್ಷೆ ಇದೆ.

ಆಟ ಪಾಠ ಊಟಗಳಿಗೆ ಪ್ರಸಿದ್ಧವಾದ ಕಟೀಲು ಕ್ಷೇತ್ರದಲ್ಲಿ ಶಿಕ್ಷಣಕ್ಕಾಗಿ ವಾರ್ಷಿಕ ರೂ. 10 ಕೋಟಿ ವಿನಿಯೋಗಿಸಲಾಗುತ್ತಿದೆ. ಬೆಳಿಗ್ಗೆ ಗಂಜಿ ಊಟ ಸೇರಿದಂತೆ ಮೂರೂ ಹೊತ್ತು ಅನ್ನಪ್ರಸಾದ ನೀಡಲಾಗುತ್ತಿದೆ. ಮೂರು ಗೋಶಾಲೆ ನಡೆಸಲಾಗುತ್ತಿದೆ. ಭರತನಾಟ್ಯ, ಸಂಗೀತ ಕಲಾವಿದರಿಗೆ ಸೇವೆ ಸಲ್ಲಿಸಲು ದೇವಳದಲ್ಲಿ ಅವಕಾಶ ಮಾಡಲಾಗಿದ್ದು, ಇತ್ತೀಚಿನ ದಿನಗಳಲ್ಲಿ ನೂರಾರು ಮಂದಿ ಸೇವೆ ಸಲ್ಲಿಸಿ ಧನ್ಯತೆಯನ್ನು ಪಡೆಯುತ್ತಿದ್ದಾರೆ.

ಖಾಯಂ ಸೇವಾದಾರರ ಸಮಾವೇಶ, ಕಲಾವಿದರ ಸಮಾವೇಶ, ಕಟೀಲು ಮೇಳಗಳ ಇತಿಹಾಸ ದಾಖಲೀಕರಣಕ್ಕೆ ಚಾಲನೆ ನೀಡಿ, ಶೈಕ್ಷಣಿಕವಾಗಿ (ಆಕಡೆಮಿಕ್) ವಿಚಾರ ಸಂಕಿರಣ ಮಾಡಲಾಗಿದೆ. ಕಟೀಲು ಮೇಳಗಳಿಗೆ ಸಂಬಂಧಿಸಿಯೇ ಸಾಮಾಜಿಕ ಜಾಲತಾಣಗಳನ್ನು ನಡೆಸುತ್ತಿರುವವರನ್ನು ಒಂದು ಗೂಡಿಸಿ ಸಂವಾದ ನಡೆಸಲಾಗಿದೆ. ಇದರಲ್ಲಿ ಸಾವಿರಾರು ಅಲ್ಲ ಲಕ್ಷ ಸಂಖ್ಯೆಯಲ್ಲಿ ವಿಡೀಯೋ, ಛಾಯಾಚಿತ್ರಗಳನ್ನು ಮಾಡಿದವರೂ ಭಾಗವಹಿಸಿದ್ದರು ಎನ್ನುವುದು ವಿಶೇಷ.

ತೆಂಕುತಿಟ್ಟಿನ ಯಕ್ಷಗಾನಕ್ಕಾಗಿಯೇ ಪ್ರಸ್ತುತ ಇರುವ ಏಕೈಕ ಮಾಸಪತ್ರಿಕೆಯನ್ನು ಕಟೀಲು ದೇವಸ್ಥಾನ ನಡೆಸುತ್ತಿದ್ದು, ಬರಹಗಾರರ ಓದುಗರ ಸಮಾವೇಶ, ಎಳೂ ಮೇಳಗಳ ಕಲಾವಿದರ ಸಮಾವೇಶ, ಕಟೀಲು ಮೇಳಗಳಿಗೆ ಸಂಬಂಧಿಸಿ ಛಾಯಾಚಿತ್ರಗಳ ಪ್ರದರ್ಶನ, ಬಜಪೆಯಿಂದ ದೇವರ ವೈಭವದ ಮೆರವಣಿಗೆ ಬಳಿಕ ಮೇಳಗಳ ತಿರುಗಾಟಕ್ಕೆ ಚಾಲನೆ ನೀಡಲಾಗುವುದು ಎಂದು ಶ್ರೀಹರಿನಾರಾಯಣದಾಸ ಆಸ್ರಣ್ಣ, ಅನುವಂಶಿಕ ಅರ್ಚಕರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನ ನೀಡಿದರು ಈ ಸಂದರ್ಭದಲ್ಲಿ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಅಧ್ಯಕ್ಷರು, ಆಡಳಿತ ಸಮಿತಿ.

ವಾಸುದೇವ ಆಸ್ರಣ್ಣ, ಅನುವಂಶಿಕ ಮೊತ್ತೇಸರರು ಹಾಗೂ ಆನುವಂಶಿಕ ಅರ್ಚಕರು , ಲಕ್ಷ್ಮೀನಾರಾಯಣ ಆಸ್ರಣ್ಣ, ಆನುವಂಶಿಕ ಆರ್ಚಕರು , ಆನಂತಪದ್ಮನಾಭ ಆಸ್ರಣ್ಣ, ಅನುವಂಶಿಕ ಅರ್ಚಕರು , ಬಿಪಿನ್‌ಚಂದ್ರ ಶೆಟ್ಟಿ, ಕೊಡೆತ್ತೂರುಗುತ್ತು      ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಸಂಚಾಲಕರು, ಕಟೀಲು ಮೇಳಗಳುಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago