Featured

ಕಡಲ ನಗರಿ ಮಂಗಳೂರು ಹಳೆ ಬಂದರಿನಿಂದ ಮಾಲ್ಡೀವ್ಸ್‌ಗೆ ಇಂದು ಮೊದಲ ಸರಕು ಹಡಗು ಪ್ರಯಾಣ -Vishwanews24

ಕಡಲ ನಗರಿ ಮಂಗಳೂರು ಹಳೆ ಬಂದರಿನಿಂದ ಮಾಲ್ಡೀವ್ಸ್‌ಗೆ ಇಂದು ಮೊದಲ ಸರಕು ಹಡಗು ಪ್ರಯಾಣ -Vishwanews24

ಮಂಗಳೂರು,: ಕಡಲ ನಗರಿ ಮಂಗಳೂರಿನ ಹಳೆ ಬಂದರಿನಿಂದ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಗೆ ಮೊದಲ ಸರಕು ಹಡಗು ಸೋಮವಾರ ಪ್ರಯಾಣ ಬೆಳೆಸಲಿದೆ.

ಕೃಷಿ, ತೋಟಕ್ಕೆ ಗೊಬ್ಬರವಾಗಿ ಬಳಸಲು ತೆಂಗಿನ ಗೆರಟೆ ಹುಡಿ, ತರಕಾರಿ ಮತ್ತು ಹಣ್ಣು ಹಂಪಲು ಸಾಗಾಟ ಮಾಡಲಿದ್ದು, ರವಿವಾರ ಕ್ರೇನ್‍ಗಳ ಮೂಲಕ ಲೋಡಿಂಗ್ ನಡೆಸಲಾಯಿತು.

ಕ್ಯಾಪ್ಟನ್ ಕಣ್ಣನ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕಾತೋರಾಯನ್, ಹರಿದಾಸ್, ಸಗಾಯಂ, ಶ್ರಿನಿವಾಸನ್, ವಿಘ್ನೇಶ್ ಪ್ರಥಮ ಯಾನದಲ್ಲಿ ತೆರಳುತ್ತಿದಾರೆ. ಲಕ್ಷದ್ವೀಪದ ಕಡಂಬತ್ತ್‍ಕಾರ್‍ಗೆ ಸೇರಿದ ಎಂಎಸ್‍ವಿ ನೂರ್ ಎ ಅಲ್ ಕದರಿ ಹೆಸರಿನ ನೌಕೆಯನ್ನು ಚರಣ್‍ದಾಸ್ ವಿ.ಕರ್ಕೇರ ಬಾಡಿಗೆಗೆ ಪಡೆದುಕೊಂಡು, ಸಾಮಾನು ಸರಂಜಾಮು ಸಾಗಾಟ ಮಾಡುತ್ತಿದ್ದಾರೆ.

ನೌಕೆಯನ್ನು ಮಾಸಿಕ ಐದು ಲಕ್ಷ ರೂ. ಬಾಡಿಗೆಗೆ ಪಡೆದುಕೊಂಡಿದ್ದು, ತಿಂಗಳಿಗೆ ಎರಡು ಟ್ರಿಪ್ ಮಾಡಲಿದೆ. ಸೋಮವಾರ ಬೆಳಗ್ಗೆ ನದಿ ನೀರು ಉಬ್ಬರ ಹೆಚ್ಚಾದಾಗ, ಹೊರಟು, 4-5 ದಿನಗಳಲ್ಲಿ ತಲುಪಿ, ಮಾಲ್ದೀವ್ಸ್ ಜೆಟ್ಟಿಯಲ್ಲಿ ಅನ್‍ಲೋಡ್ ಮಾಡಿ, ಮರಳಿ ಬರಲಿದೆ. ಹೊಸ ಸಾಹಸಕ್ಕೆ ಕೈ ಹಾಕಿದ್ದೇವೆ ಎಂದು ಚರಣ್‌ ದಾಸ್‌ ಹೇಳುತ್ತಾರೆ.

ಕಳೆದ ವರ್ಷ ಒಂದು ನೌಕೆ ಹೋಗಿದ್ದರೂ, ಅದು ಗುರಿ ತಲುಪಿರಲಿಲ್ಲ. ಅದರಲ್ಲಿದ್ದ ಸಾಮಾನು ಸರಂಜಾಮು ಸಮುದ್ರ ಪಾಲಾಗಿತ್ತು. ಈ ವರ್ಷ ಅಕ್ಟೋಬರ್‌ನಲ್ಲಿ ಹೊರಡಬೇಕಿತ್ತು. ಕೋವಿಡ್ ಮತ್ತಿತರ ಕಾರಣಗಳಿಂದ ತಡವಾಗಿದೆ. ಸುಮಾರು 200 ಟನ್ ಸರಕು ಸಾಗಾಟ ಮಾಡಲಾಗುತ್ತಿದೆ ಎನ್ನುತ್ತಾರೆ ಲೋಡಿಂಗ್ ಮಾಡುವ ಮಲ್ಲೂರಿನ ಇಬ್ರಾಹಿಂ ಮತ್ತು ಸತ್ತಾರ್ ಹೇಳಿದರು.

 

Vishwa News 24

Recent Posts

ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶ : ನಾಳೆ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಪರಮೇಶ್ವರ್‌ – vishwanews24

ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶ : ನಾಳೆ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಪರಮೇಶ್ವರ್‌ ಬೆಂಗಳೂರು: ತುಮಕೂರಿನಲ್ಲಿ ನಾಳೆ…

8 minutes ago

ಪಡುಬಿದ್ರಿ : ಚಿನ್ನಾಭರಣವಿದ್ದ ಬ್ಯಾಗ್ ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ – vishwanews24

ಪಡುಬಿದ್ರಿ : ಚಿನ್ನಾಭರಣವಿದ್ದ ಬ್ಯಾಗ್ ವಾರೀಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ ಪಡುಬಿದ್ರಿ: ಬಸ್ ನಿಲ್ದಾಣದಲ್ಲಿ ದೊರೆತ ಸಾವಿರಾರು…

13 minutes ago

ಉಡುಪಿ: ಬಿಜೆಪಿ ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ – vishwanews24

ಉಡುಪಿ: ಬಿಜೆಪಿ ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ ಉಡುಪಿ: ಉಡುಪಿ ಜಿಲ್ಲೆಯನ್ನು ರಾಜ್ಯ ಕಾಂಗ್ರೆಸ್…

2 days ago

ಮಂಗಳೂರು : ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್ – vishwanews24

ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್.. ಸುಪ್ರೀಂ ಕೋರ್ಟ್‌ನಲ್ಲಿ ಅಧಿಕೃತ ಕ್ರಮಗಳನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಮನವಿ…

2 days ago

ಟ್ರ್ಯಾಕ್ಟರ್ – ಲಾರಿ ಅಪಘಾತದಲ್ಲಿ ಏಳು ಮಂದಿ ದುರ್ಮರಣ : ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ – vishwanews24

ಟ್ರ‍್ಯಾಕ್ಟರ್ - ಲಾರಿ ಅಪಘಾತದಲ್ಲಿ ಏಳು ಮಂದಿ ದುರ್ಮರಣ : ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ…

2 days ago

ಡಿಕೆಶಿ ಮುಂದಿನ ಸಿಎಂ ಬ್ಯಾನರ್ : ಕಾರ್ಯಕರ್ತರ ಅಭಿಮಾನ ತಡಯೋಕೆ ಸಾಧ್ಯವಿಲ್ಲ :ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ – vishwanews24

ಡಿಕೆಶಿ ಮುಂದಿನ ಸಿಎಂ ಬ್ಯಾನರ್ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ಉಡುಪಿ: ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟ ವಿಚಾರ.…

2 days ago