ಗಂಗಾವತಿ: ಕಳೆದ 6-7 ತಿಂಗಳಿಂದ ತಾಲೂಕಿನ ಆನೆಗೊಂದಿ ಹನುಮನಹಳ್ಳಿ, ಜಂಗ್ಲಿ ರಂಗಾಪೂರ ಸುತ್ತಲಿನ ಜನಜಾನುವಾರುಗಳಿಗೆ ತೀವ್ರ ಉಪಟಳ ನೀಡಿದ್ದ ಮತ್ತು ಒರ್ವ ಯುವಕನನ್ನು ಕೊಂದು ಹಲವರಿಗೆ ಕಚ್ಚಿ ಗಾಯಗೊಳಿಸಿದ್ದ ಚಿರತೆಯನ್ನು ಬೋನಿನ ಮೂಲಕ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಆನೆಗೊಂದಿ ಆದಿಶಕ್ತಿ ದೇಗುಲದ ಹಿಂಭಾಗದಲ್ಲಿ ಯುವಕನನ್ನು ಕೊಂದು ಹಾಕಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸತತ ಯತ್ನ ನಡೆಸಿತ್ತು. 16 ಕಡೆ ಬೋನುಗಳನ್ನು ಇರಿಸಲಾಗಿತ್ತು. ಡ್ರೋಣ್ ಕ್ಯಾಮರಾ ಮತ್ತು ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಚಿರತೆಗಳ ಚಲನವಲನಗಳನ್ನು ಗಮನಿಸಲಾಗಿತ್ತು.
ಎರಡು ದಿನಗಳ ಹಿಂದೆ ಸಂಗಾಪೂರ ಶ್ರೀರಂಗದೇವರಾಯಲು ನಗರದಲ್ಲಿ 9 ವರ್ಷದ ಬಾಲಕ ಮೇಲೆ ದಾಳಿ ಮಾಡಿದ್ದ ಚಿರತೆ ತೀವ್ರ ಗಾಯಗೊಳಿಸಿತ್ತು. ಈ ಮಧ್ಯೆ ಚಿರತೆ ಸೆರೆಹಿಡಿದು ಜನರಿಗೆ ರಕ್ಷಣೆ ನೀಡುವಂತೆ ವ್ಯಾಪಕ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕ ಪರಣ್ಣ ಮುನವಳ್ಳಿ, ಅರಣ್ಯ ಸಚಿವ ಆನಂದ ಸಿಂಗ್ ರನ್ನು ಸಂಪರ್ಕ ಮಾಡಿ ತಜ್ಞರನ್ನು ಕಳಿಸಿ ಚಿರತೆ ಕರಡಿಗಳನ್ನು ಸೆರೆ ಹಿಡಿಯಲು ಮನವಿ ಮಾಡಿದ್ದರು.
ಗುರುವಾರ ಬಳ್ಳಾರಿ ದರೋಜಿ ಕರಡಿಧಾಮ ಹಾಗೂ ಎಸ್ ವೈ ಎಸ್ ಸ್ವಯಂ ಸೇವಾ ಸಂಸ್ಥೆಯ ತಜ್ಞರು ಆಗಮಿಸಿ ಇನ್ನಷ್ಟು ಸಿಸಿ ಕ್ಯಾಮರಾಗಳು ಮತ್ತು ಚಿರತೆ ಕರಡಿಗಳ ಹೆಜ್ಜೆ ಗುರುತಿಸುವ ಉಪಕರಣಗಳನ್ನು ಇರಿಸಿದ್ದರು. ಇದೀಗ ಚಿರತೆಯು ಬೋನಿಗೆ ಬಿದ್ದಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಾಣಿಸಂಗ್ರಹಾಲಯಕ್ಕೆ ಚಿರತೆ ರವಾನೆ ಸಾಧ್ಯತೆ: ಆನೆಗೊಂದಿ ಹತ್ತಿರ ಸೆರೆ ಸಿಕ್ಕಿರುವ ಸುಮಾರು 05 ವರ್ಷದ ಚಿರತೆಗೆ ವೈದ್ಯಕೀಯ ಪರೀಕ್ಷೆಗಾಗಿ ಅರವಳಿಕೆ ಚುಚ್ಚುಮದ್ದು ನೀಡಿ ಬೆಟ್ಟದಿಂದ ಕೆಳಗೆ ತಂದು ವೈದ್ಯಕೀಯ ಪರೀಕ್ಷೆ ನಂತರ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಾಣಿಸಂಗ್ರಹಾಲಯಕ್ಕೆ ಕಳಿಸುವ ಸಾಧ್ಯತೆ ಇದೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಮೇಟಿ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್‌ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…