Featured

ಕಣದಿಂದ ಹಿಂದೆ ಸರಿಯಲಾರೆ  , ಗೆದ್ದರೂ ಸೋತರೂ ಬಿಜೆಪಿ ಕಾರ್ಯಕರ್ತನಾಗಿಯೇ ಇರುವೆ : ರಘುಪತಿ ಭಟ್‌  – vishwanews24

ಕಣದಿಂದ ಹಿಂದೆ ಸರಿಯಲಾರೆ  , ಗೆದ್ದರೂ ಸೋತರೂ ಬಿಜೆಪಿ ಕಾರ್ಯ ಕರ್ತನಾಗಿಯೇ ಇರುವೆ : ಕೆ. ರಘುಪತಿ ಭಟ್‌

ಉಡುಪಿ: ಕಾರ್ಯಕರ್ತರ ಧ್ವನಿಯಾಗಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ. ಗೆದ್ದ ಮೇಲೆ ನಾನಾಗಿಯೇ ಬಿಜೆಪಿ ಕಚೇರಿಗೆ ಹೋಗುವೆ. ಸೋತರೂ ಬಿಜೆಪಿ ಕಾರ್ಯ ಕರ್ತನಾಗಿಯೇ ಇರುವೆ. ಸಂಘದ ಹಿರಿಯರೂ ಆಯ್ತು ನೋಡೋಣ ಕೆಲಸ ಮಾಡಿ ಎನ್ನುವ ಅನಿವಾರ್ಯ ಸ್ಥಿತಿಯಲ್ಲಿ ಇದ್ದಾರೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಬಿಜೆಪಿಯ ಕೆ. ರಘುಪತಿ ಭಟ್‌ ಹೇಳಿದರು.

ತಮ್ಮ ಮನೆಯಲ್ಲಿ ಬುಧವಾರ ನಡೆದ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಇಂತಹ ದಿನ ಬರಲಿದೆ ಎಂದೂ ಯೋಚಿಸಿರಲಿಲ್ಲ. ಇದು ದುಡುಕಿನ ನಿರ್ಧಾರವಲ್ಲ; ಯೋಚಿಸಿಯೇ ತೆಗೆದುಕೊಂಡಿದ್ದು. ಕಣದಿಂದ ಹಿಂದೆ ಸರಿಯಲಾರೆ ಎಂದರು.

2023ರ ವಿಧಾನಸಭೆ ಚುನಾವಣೆ ಯಲ್ಲಿ ಪಕ್ಷದಿಂದ ಟಿಕೆಟ್‌ ಕೈತಪ್ಪಿದಾಗ ಕಾಂಗ್ರೆಸ್‌ ಅಥವಾ ಪಕ್ಷೇತರರಾಗಿ ಸ್ಪರ್ಧಿಸಲು ಒತ್ತಡ ಇತ್ತು. ಆದರೂ ಪಕ್ಷದ ಅಭ್ಯರ್ಥಿಯ ಪರ ಕೆಲಸ ಮಾಡಿದೆ. ಲೋಕಸಭೆ ಚುನಾವಣೆಯಲ್ಲೂ ಪೂರ್ಣ ತೊಡಗಿಕೊಂಡೆ. ಆದರೆ ಬಿಜೆಪಿ ನಾಯಕರು ನಾನು ಮೂರು ಬಾರಿ ಗೆದ್ದಿರುವ ಮಾಜಿ ಶಾಸಕ ಎಂಬುದನ್ನು ಮರೆತು ಕಚೇರಿಯಲ್ಲಿದ್ದ ನನ್ನ ಭಾವಚಿತ್ರವನ್ನು ತೆಗೆದು ಹಾಕಿದರು. ಕನಿಷ್ಠ ಮನ್ನಣೆ, ಪ್ರೀತಿ, ಗೌರವವನ್ನು ತೋರಿಸಿಲ್ಲ ಎಂದು ದೂರಿದರು.

ವಿಧಾನ ಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆ ದಶಕಗಳ ಪದ್ಧತಿ ಮುರಿದಿದ್ದಾರೆ. ನಾನು ಯಾರನ್ನೂ ಸೋಲಿಸಲು ನಿಲ್ಲುತ್ತಿಲ್ಲ. ಜನರ ಸೇವೆ ಮಾಡಲು ಸ್ಪರ್ಧಿಸುತ್ತಿರುವೆ. ಮೋದಿಯವರ ಆದರ್ಶ, ಡಾ| ವಿ.ಎಸ್‌. ಆಚಾರ್ಯರ ಮಾರ್ಗ ದರ್ಶನ ಹಾಗೂ ಕರಂಬಳ್ಳಿ ಸಂಜೀವ ಶೆಟ್ಟಿಯವರು ನೀಡಿದ್ದ ಪಾಠ ಸದಾ ನನ್ನೊಂದಿಗೆ ಇರುತ್ತದೆ ಮತ್ತು ನಾನು ಎಂದಿಗೂ ಬಿಜೆಪಿಗನೇ ಆಗಿರುವೆ ಎಂದರು. ವಾಸುದೇವ್‌ ಭಟ್‌ ಪೆರಂಪಳ್ಳಿ ನಿರೂಪಿಸಿದರು.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

4 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

4 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

4 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

4 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

4 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

4 days ago