Featured

ಕಣ್ಣಿಲ್ಲದಾತನಿಗೆ ಕೈಗೋಲಿನ ಆಸರೆಯಂತೆ ಸಹಕರಿಸುತ್ತಿರುವ ಬಡವರ ಪಾಲಿನ ಆಶಾಕಿರಣ ಸೈಲೆಂಟ್ ಸಮಾಜಸೇವಕ ದಯಾನಂದ್ ಹೆಜಮಾಡಿ ಈ ಸಮಾಜಕ್ಕೊಂದು ಆದರ್ಶ

ಕಣ್ಣಿಲ್ಲದಾತನಿಗೆ ಕೈಗೋಲಿನ ಆಸರೆಯಂತೆ ಸಹಕರಿಸುತ್ತಿರುವ ಬಡವರ ಪಾಲಿನ ಆಶಾಕಿರಣ ಸೈಲೆಂಟ್ ಸಮಾಜಸೇವಕ ದಯಾನಂದ್ ಹೆಜಮಾಡಿ.

ಮಂಗಳೂರು: ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮದ ಕೃಷಿ ಪ್ರಧಾನ ಕುಟುಂಬದಲ್ಲಿ ಜನಿಸಿದ ಭುಜಂಗ ಪೂಜಾರಿಯ ಸುಪುತ್ರ ಬಾಲ್ಯದಿಂದಲೂ ಬಡತನದ ಬೇಗೆಯನ್ನ ಖುದ್ದಾಗಿ ಅನುಭವಿಸಿ ಪ್ರಸ್ತುತ ಉದ್ಯಮಿಯಾಗಿ ಸಾವಿರಾರು ಜನರಿಗೆ ಆಶಾಕಿರಣವಾಗಿ ಸಮಾಜ ಸೇವೆಗೂ ತನ್ನ ಅಭೂತಪೂರ್ವ ಸೇವೆಸಲ್ಲಿಸುತ್ತೀರುವ ಸೈಲೆಂಟ್ ಸಮಾಜಸೇವಕ ಶ್ರೀ ದಯಾನಂದ್ ಹೆಜಮಾಡಿ ಕುರಿತಾದ ಸಣ್ಣ ಲೇಖನ ಇಲ್ಲಿದೆ ಓದಿ.

ಕಾಲೇಜು ಜೀವನದಲ್ಲಿಯೇ ನಾಯಕತ್ವದ ಗುಣವನ್ನ ಮೈಗೂಡಿಸಿಕೊಂಡು 1992-93 ರ ಸಾಲಿನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಸರ್ವ ಕಾಲೇಜು ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ದಯಾನಂದ್ ಹೆಜಮಾಡಿ ಇದೀಗ ಉದ್ಯಮಿ ಕಂ ಸುದ್ದಿಯಾಗಲು ಬಯಸದ ಸಮಾಜ ಸೇವಕ.

ನೂರಾರು ಕುಟುಂಬಗಳಿಗೆ ಆರ್ಥಿಕ ನೆರವು. ಪ್ರತಿವರ್ಷ ವಿದ್ಯಾರ್ಥಿಗಳಿಗೆ ಧನಸಹಾಯ,ಸೂರಿಲ್ಲ ಅದೇಷ್ಟೋ ಕುಟುಂಬಗಳಿಗೆ ಆಸರೆಯಾಗಿ,ಮೂಕ ಪ್ರಾಣಿಗಳ ಜೀವಕ್ಕೂ ಬೆಲೆ ಇದೆ ಎಂದು ನಂಬಿಕೊಂಡು ಪ್ರಾಣಿ ಪಕ್ಷಿಗಳ ಕ್ಷೇಮಪಾಲನೆಗೆ ಅಂಬ್ಯೂಲೆನ್ಸ್ ಕೊಡುಗೆ, ವಿದ್ಯುತ್ ದೀಪದ ಬೆಳಕನ್ನೆ ಕಾಣದ ಅನಾನುಕೂಲ ಕುಟುಂಬಗಳಿಗೆ ಸೋಲಾರ್ ದೀಪದ ವ್ಯವಸ್ಥೆ ಕಲ್ಪಿಸಿದ, ದೀನದಲಿತರ ಕಷ್ಟಗಳಿಗೆ ಸ್ಪಂದಿಸಿ, ಬುದ್ದಿಮಾಂದ್ಯ ಮಕ್ಕಳಿಗೆ ಜೀವನಾವಶ್ಯಕ ವಸ್ತುಗಳನ್ನ ನೀಡಿ ಅವರಿಗಾಗಿ ಒಂದಿಷ್ಟು ಸಮಯ ನೀಡಿ, ಉಚಿತ ಸಾಮೂಹಿಕ ವಿವಾಹವನ್ನ ಆಯೋಜಿಸಿ ಬಡ ವಧುವರರಿಗೆ ಮಾಂಗಲ್ಯ ಭಾಗ್ಯ ಕಲ್ಪಿಸಿದ ಸಮಾಜಸೇವಕ ದಯಾನಂದ್ ಹೆಜಮಾಡಿ.
ಕುಡಿತದ ಚಟದಿಂದ ಕುಟುಂಬಗಳು ಬಳಲುತ್ತೀರುವುದನ್ನ ಮನಗಂಡು ಮದ್ಯವ್ಯರ್ಜನ ಶಿಬಿರ ನಡೆಸಿ ನೂರಾರು ಮದ್ಯವ್ಯಸನಿಗಳ ಮನವರ್ತಿಸಿದ ಕೀರ್ತಿ ದಯಾನಂದ್ ಅವರಿಗೆ ಸಲ್ಲಬೇಕಾಗಿದೆ.

ಪ್ರತಿದಿನ ರಸ್ತೆಯಲ್ಲಿ ತಿರುಗಾಡುವ ಅನಾಥ ನಿರ್ಗತಿಕರು ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ಸಾಯಿಬಾಬ ಮಂದಿರದ ಸಾಯಿತುತ್ತು ಕಾರ್ಯಕ್ರಮದಡಿಯಲ್ಲಿ ಕೈಜೋಡಿಸಿ ನಿತ್ಯ ಅನ್ನಸಾಸೋಹ ಮಾಡುತ್ತೀರುವ ಅನ್ನದಾತ.

ಸಾಮಾಜಿಕವಾಗಿ ಮಾತ್ರವಲ್ಲದೇ ಅದೇಷ್ಟೊ ಸಾಂಸ್ಕøತಿಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರಗಳಿಗೆ ತನ್ನದೆ ಕೊಡುಗೆ ನೀಡುತ್ತ ಬಂದಿರುವ ಇವರು ಮಹಾಪೋಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಾನು ಮಾಡುವ ಕಾರ್ಯ ದೇವರಿಗೆ ಸಮರ್ಪಣೆಯೆಂಬ ದೃಷ್ಟಿಯಿಂದ ಯಾವುದೇ ಪ್ರಚಾರದಲ್ಲಿ ಭಾಗಿಯಾಗದೇ ಎಲ್ಲಾವೂ ದೈವ ಇಚ್ಛೆ ಅನ್ನುವ ರೀತಿಯ ಸರಳ ಜೀವನದ ವ್ಯಕ್ತಿ.

 

ದಯಾನಂದ್ ಹೆಜಮಾಡಿ ಅವರಿಗೆ ಬಯಸದೆ ಬಂದ ಪ್ರಶಸ್ತಿಗಳು ನೂರಾರು ವಿಶೇಷವಾಗಿ 2017 ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಶ್ರೀ ರಕ್ಷೇ ಪ್ರಶಸ್ತಿ,ಶ್ರೀ ಸಾಯಿ ಸೇವಾ ಪ್ರಶಸ್ತಿ,ಕರ್ನಾಟಕ ಸೇವಾರತ್ನ ಪ್ರಶಸ್ತಿ,ಸಮಾಜ ಸೇವಾ ರತ್ನ ಪ್ರಶಸ್ತಿ,ಕರಾವಳಿ ರತ್ನ ಪ್ರಶಸ್ತಿ, ವಿವೇಕಾನಂದ ಕೇಸರಿ ಪ್ರಶಸ್ತಿ,ಹೀಗೆ ನೂರಾರು ಸನ್ಮಾನಗಳನ್ನ ಪಡೆದುಕೊಂಡರು ಪ್ರಚಾರ ಬಯಸದಿರುವ ಸೈಲೆಂಟ್ ಸಮಾಜ ಸೇವಕ ಈ ಸಮಾಜಕ್ಕೊಂದು ಕೀರ್ತಿ.

ಪ್ರಸ್ತುತ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಮೊಕ್ತೆಸರರಾಗಿ ಅದರ ಜತೆಗೆ ಹತ್ತಾರು ಸಂಘಸಂಸ್ಥೆಗಳಲ್ಲಿ ಉನ್ನತ ಅಧಿಕಾರದಲ್ಲಿದ್ದರೂ ಸದಾ ಹಸನ್ಮುಖಿ ದಯಾನಂದ್ ಹೆಜಮಾಡಿ,ಪ್ರಸ್ತುತ ಕಾಲಘಟ್ಟದಲ್ಲಿ ತಾವೂ ಏನೂ ಮಾಡಿದರು ಪ್ರಚಾರಬಯಸುವ ಒಂದಿಷ್ಟು ಜನರ ಮಧ್ಯೆ ಜಾತಿ ಮತ ಪಂಥಗಳ ಬೇಧವಿಲ್ಲದೆ ತಾನು ಮಾಡುವ ಕೆಲಸ ,ಜನತಾ ಸೇವೆ ಜನಾರ್ಧನ ಸೇವೆ ಎಂಬಂತೆ ಬದುಕುತ್ತಿರುವ ದಯಾನಂದ್ ಹೆಜಮಾಡಿ ಈ ಸಮಾಜಕ್ಕೊಂದು ಆದರ್ಶ.

ಬ್ಯೂರೋ ರಿಪೋರ್ಟ್
ವಿಶ್ವನ್ಯೂಸ್24

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago