ಕತಾರ್: ಕತಾರ್ ನ ರಾಜಧಾನಿ ದೋಹಾದಲ್ಲಿ ದಕ್ಷಿಣ ಭಾರತದ 8ನೇ ಅಂತರಾಷ್ಟ್ರೀಯ ವರ್ಣರಂಜಿತ ಸಮಾರಂಭ ನಡೆದಿದ್ದು 2019ರ ಸೈಮಾ ಪ್ರಶಸ್ತಿ ಘೋಷಣೆಯಾಗಿದೆ.
ಕೆಜಿಎಫ್ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದುಕೊಂಡ ಯಶ್, ಕನ್ನಡ ಚಿತ್ರವೊಂದು ದೇಶದಾದ್ಯಂತ ಸುದ್ದಿ ಮಾಡಿದ್ದಕ್ಕೆ ಸಂಭ್ರಮಿಸಿದರು. ಕೆಜಿಎಫ್ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಯನ್ನು ರವಿ ಬಸ್ರೂರ್ ಸ್ವೀಕರಿಸಿದರೆ, ಭುವನ್ ಗೌಡ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಗೆದ್ದರು. ಕೆಜಿಎಫ್ ಚಿತ್ರದ “ಸಲಾಂ ರಾಖಿ ಭಾಯ್” ಚಿತ್ರದ ಸಮೂಹಗೀತೆಗಾಗಿ ವಿಜಯಪ್ರಕಾಶ್ ಮತ್ತಿತರರು ಪ್ರಶಸ್ತಿ ಪಡೆದರು.
ಟಗರು ಚಿತ್ರದ ಹಿನ್ನೆಲೆ ಗಾಯನಕ್ಕಾಗಿ ಅನುರಾಧಾ ಭಟ್, ಚೊಚ್ಚಲ ಚಿತ್ರದ ನಟನೆಗಾಗಿ ಡ್ಯಾನಿಶ್ ಸೇಠ್, ಅತ್ಯುತ್ತಮ ಚೊಚ್ಚಲ ಚಿತ್ರ ನಿರ್ದೇಶನಕ್ಕಾಗಿ “ಅಯೋಗ್ಯ” ಚಿತ್ರದ ಮಹೇಶ್ ಕುಮಾರ್ ಮತ್ತು ಅಯೋಗ್ಯ ಚಿತ್ರದ ಗೀತರಚೆನಗಾಗಿ ಚೇತನ್ ಕುಮಾರ್ ಪ್ರಶಸ್ತಿ ಗೆದ್ದು ವೇದಿಕೆಯಲ್ಲಿ ಸಂಭ್ರಮಿಸಿದರು. “ಆ ಕರಾಳ ರಾತ್ರಿ” ಚಿತ್ರದ ನಟನೆಗಾಗಿ ಅನುಪಮಾ ಗೌಡ ಪ್ರಶಸ್ತಿ ಗೆದ್ದರು.
ಅತ್ಯುತ್ತಮ ಸಿನಿಮಾ ಕೆಜಿಎಫ್
ಅತ್ಯುತ್ತಮ ನಟ ಯಶ್ (ಕೆಜಿಎಫ್)
ಅತ್ಯುತ್ತಮ ನಟಿ ರಚಿತಾ ರಾಮ್ (ಅಯೋಗ್ಯ)
ಅತ್ಯುತ್ತಮ ನಿರ್ದೇಶಕ ಪ್ರಶಾಂತ್ ನೀಲ್ (ಕೆಜಿಎಫ್)
ಅತ್ಯುತ್ತಮ ಖಳ ನಟ ಧನಂಜಯ್ (ಟಗರು)
ಅತ್ಯುತ್ತಮ ನವ ನಟಿ ಅನುಪಮ ಗೌಡ (ಆ ಕರಾಳ ರಾತ್ರಿ)
ಅತ್ಯುತ್ತಮ ನವ ನಿರ್ದೇಶಕ ಮಹೇಶ್ ಕುಮಾರ್ (ಅಯೋಗ್ಯ)
ಅತ್ಯುತ್ತಮ ಗೀತರಚನೆ ಚೇತನ್ ಕುಮಾರ್ (ಏನಮ್ಮಿ ಏನಮ್ಮಿ)
ಅತ್ಯುತ್ತಮ ಪೋಷಕ ನಟ ಪ್ರಕಾಶ್ ಕೆ ತುಮಿನಾಡು (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು)
ಅತ್ಯುತ್ತಮ ಪೋಷಕ ನಟಿ ಅರ್ಚನಾ (ಕೆಜಿಎಫ್)
ಅತ್ಯುತ್ತಮ ಗಾಯಕಿ ಅನನ್ಯ ಭಟ್ (ಹೋಲ್ಡನ್..ಹೋಲ್ಡನ್..)
ಅತ್ಯುತ್ತಮ ಛಾಯಾಗ್ರಾಹಕ ಭುವನ್ ಗೌಡ (ಕೆಜಿಎಫ್)
ಅತ್ಯುತ್ತಮ ಸಂಗೀತ ನಿರ್ದೇಶಕ ರವಿ ಬಸ್ರೂರ್ (ಕೆಜಿಎಫ್)
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…