Featured

ಕನಿಷ್ಠ 1,00,000 ಜನರು ಕೈಲಾಸದಲ್ಲಿ ನೆಲೆಸಬೇಕೆಂದು ನಾನು ಯೋಜಿಸುತ್ತಿದ್ದೇನೆ ; ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನಿಂದ ತನ್ನ ದೇಶ ಕೈಲಾಸಕ್ಕೆ ವೀಸಾ ಆಫರ್ -Vishwanews24

ಕನಿಷ್ಠ 1,00,000 ಜನರು ಕೈಲಾಸದಲ್ಲಿ ನೆಲೆಸಬೇಕೆಂದು ನಾನು ಯೋಜಿಸುತ್ತಿದ್ದೇನೆ ; ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನಿಂದ ತನ್ನ ದೇಶ ಕೈಲಾಸಕ್ಕೆ ವೀಸಾ ಆಫರ್ -Vishwanews24

ನವದೆಹಲಿ,: ಅತ್ಯಾಚಾರ ಸೇರಿದಂತೆ ಹಲವು ಪ್ರಕರಣದ ಆರೋಪಿಯಾಗಿರುವ, ಭಾರತದಿಂದ ಪರಾರಿಯಾಗಿ ತನ್ನದೇ ಆದ ದೇಶ ಕೈಲಾಸವನ್ನು ಸ್ಥಾಪನೆ ಮಾಡಿದ್ದೇನೆ ಎಂದು ಹೇಳುತ್ತಿರುವ, ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ತನ್ನ ದೇಶ ಕೈಲಾಸಕ್ಕೆ ವೀಸಾ ಆಫರ್‌ ನೀಡಿದ್ದು ‘ಕೈಲಾಸ’ದಲ್ಲಿ 1 ಲಕ್ಷ ಜನರು ನೆಲೆಸಬೇಕೆಂದು ಬಯಸಿದ್ದಾರೆ.

“ಕನಿಷ್ಠ 1,00,000 ಜನರು ಕೈಲಾಸದಲ್ಲಿ ನೆಲೆಸಬೇಕೆಂದು ನಾನು ಯೋಜಿಸುತ್ತಿದ್ದೇನೆ” ಎಂದು ನಿತ್ಯಾನಂದ ಶುಕ್ರವಾರ ಅಂತರರಾಷ್ಟ್ರೀಯ ವಲಸಿಗರ ದಿನದಂದು ಘೋಷಿಸಿದರು.

“ಜಾಗತೀಕರಣದ ಕಾರಣದಿಂದಾಗಿ ವಲಸೆ, ಸಾರಿಗೆಯನ್ನು ಪ್ರೋತ್ಸಾಹಿಸಬೇಕು. ಆದರೆ ಮಾನವ ನಿರ್ಮಿತ ವಿಪತ್ತಿನ ಕಾರಣದಿಂದ ಈ ವಲಸೆ ಕಾರ್ಯದತ್ತ ಗಮನ ಹರಿಸಬೇಕು ಎಂದರು.

ಕೈಲಾಸದಲ್ಲಿ ರಿಸರ್ವ್ ಬ್ಯಾಂಕ್ ಅನ್ನು ಸ್ಥಾಪಿಸಿರುವ ನಿತ್ಯಾನಂದ, ಈಗ ತನ್ನ ದೇಶಕ್ಕೆ ಬರುವವರಿಗೆ ವೀಸಾ ನೀಡಲು ಪ್ರಾರಂಭಿಸಿದ್ದಾರೆ. ಇನ್ನು ಈ ಕೈಲಾಸ ಹಿಂದೂ ರಾಷ್ಟ್ರ ಆಸ್ಟ್ರೇಲಿಯಾದಲ್ಲಿ ಇದೆ ಎಂದು ಹೇಳಲಾದರೂ, ಅದು ಸರಿಯಾಗಿ ಯಾವ ಪ್ರದೇಶದಲ್ಲಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಈ ಹಿಂದೆ ಈಕ್ವೇಡಾರ್‌ ಎಂಬ ದ್ವೀಪವನ್ನು ತಾನು ಖರೀದಿ ಮಾಡಿ ಅಲ್ಲಿ ತನ್ನದೇ ದೇಶವನ್ನು ಸ್ಥಾಪಿಸಿದ್ದೇನೆ ಎಂದು ಹೇಳಿದ್ದ ನಿತ್ಯಾನಂದನ ಹೇಳಿಕೆಗೆ ತದ್ವಿರುದ್ಧವಾಗಿ ಅಲ್ಲಿನ ಸರ್ಕಾರವು ನಾವು ಯಾವುದೇ ದ್ವೀಪವನ್ನು ಮಾರಾಟ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿತ್ತು.

ಇನ್ನು ಈಗ ಕೈಲಾಸಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗುವುದು ಎಂದು ಹೇಳಿರುವ ನಿತ್ಯಾನಂದ ಸಂದರ್ಶಕರಿಗೆ ತನ್ನ ದೇಶ ‘ಕೈಲಾಸ’ದಲ್ಲಿ ಮೂರು ದಿನಗಳಿಗಿಂತ ಅಧಿಕ ಕಾಲ ಉಳಿಯಲು ಅವಕಾಶವಿಲ್ಲ ಎಂದು ಹೇಳಿದ್ದರು.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

1 day ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

1 day ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

1 day ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

1 day ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

1 day ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

1 day ago