ಬೆಂಗಳೂರು: ನಾವು ಎಲ್ಲಾ ಸಿನಿಮಾ ಮಂದಿಗೂ ಮನವಿ ಮಾಡುತ್ತೇವೆ. ಆದಷ್ಟೂ ಟ್ಯಾಕ್ಸ್ ಫೈಲ್ ಮಾಡಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಚ್ ಅಪರೇಷನ್ ಮುಂದುವರೆಯುತ್ತೆ ಅಂತಾ ಆದಾಯ ತೆರಿಗೆ ಇಲಾಖೆ ಡಿಜಿ ಬಿ.ಆರ್ ಬಾಲಕೃಷ್ಣನ್ ಹೇಳಿದ್ದಾರೆ.
ಸಿನಿಮಾ ನಿರ್ಮಾಪಕರು ಮತ್ತು ನಟರ ಮೇಲಿನ ದಾಳಿ ವಿಚಾರವಾಗಿ ಐಟಿ ಇಲಾಖೆಯ ಅನ್ವೇಷಣಾ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ಚಿತ್ರವೂ ಶೇ.30% ರಿಂದ ಶೇ. 40% ರಷ್ಟು ನಗದಿನಲ್ಲಿ ವ್ಯವಹಾರವಾಗಿವೆ. ಫಿಲ್ಮ್ ಪ್ರೋಡಕ್ಷನ್ ಸಂಪೂರ್ಣ ನಗದಿನಲ್ಲಿ ನಡೆದಿದೆ. ಚಿತ್ರೀಕರಣ ಕೂಡಾ ನಗದು ವ್ಯವಹಾರದಲ್ಲೇ ನಡೆದಿದೆ. ಇನ್ನೂ ಥೀಯೆಟರ್ನಲ್ಲಿ ಕಲೆಕ್ಟ್ ಆದ ಹಣವೂ ನಿರ್ಮಾಪಕರಿಗೆ ನಗದು ಮೂಲಕವೇ ಹೋಗಿದೆ. ಇನ್ನೂ ನಟರು ಕೂಡಾ ಸಂಭಾವನೆಯನ್ನು ನಗದು ರೂಪದಲ್ಲೇ ಪಡಯುತ್ತಾರೆ. ಅಲ್ಲದೇ ಓವರ್ ಸೇಸ್ ರೈಟ್ಸ್, ಟಿವಿ ರೈಟ್ಸ್, ಡಿಜಿಟಲ್ ರೈಟ್ಸ್ ಮತ್ತು ಆಡಿಯೋ ರೈಟ್ಸ್ ಯಾವುದಕ್ಕೂ ನಿರ್ಮಾಪಕರು ಲೆಕ್ಕ ತೋರಿಸಿಲ್ಲ ಅಂತಾ ಹೇಳಿದರು. ಇದೇ ವೇಳೆ, ಸಿನಿಮಾ ಸಿಬ್ಬಂದಿ ಯಾರೂ ಸಹ ಆದಾಯ ತೋರಿಸುತ್ತಿಲ್ಲ. ಟ್ಯಾಕ್ಸ್ ಕಟ್ಟುವ ಬಗ್ಗೆ ಗಮನ ನೀಡಿಲ್ಲ. ಆಡಿಯೋ ಸೆಕ್ಷನ್, ಸಣ್ಣ ಕಲಾವಿದರು, ಪ್ರೋಡಕ್ಷನ್ ಟೀಂನವರು ಕೂಡಾ ಆದಾಯ ತೋರಿಸಿಲ್ಲ. ಅದಕ್ಕಾಗಿ ಫಿಲ್ಮ್ ಇಂಡಸ್ಟ್ರಿಯವರನ್ನು ಕರೆಯಿಸಿ ತಿಳುವಳಿಕೆ ನೀಡಿದ್ದೇವೆ ಅಂತಾ ಬಿ.ಆರ್ ಬಾಲಕೃಷ್ಣನ್ ಹೇಳಿದರು.
ಸಚಿವ ಡಿಕೆ ಶಿವಕುಮಾರ್ ಮೇಲೆನ ಐಟಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ವೈಯಕ್ತಿಕವಾಗಿ ಯಾವುದೇ ಕೇಸ್ನ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ ಆ ಪ್ರಕರಣದ ಎಲ್ಲಾ ಕೇಸ್ಗಳು ಪ್ರಾಸಿಕ್ಯೂಷನ್ ನಡೆಯುತ್ತಿವೆ. ಮುಂಬರುವ ಲೋಕಸಭಾ ಎಲೆಕ್ಷನ್ ಸಮಯದಲ್ಲಿಯೂ ಐಟಿ ಗುಪ್ತಚರ ಇಲಾಖೆ ಕೆಲಸ ಮಾಡಲಿದೆ ಅಂತಾ ಡಿಜಿಐಟಿ ಬಾಲಕೃಷ್ಣ ಹೇಳಿದರು.
ಮೂರನೇ ಸ್ಥಾನದಲ್ಲಿ ಕರ್ನಾಟಕ ಮತ್ತು ಗೋವಾ ವಿಂಗ್:
ಟ್ಯಾಕ್ಸ್ ಕಲೆಕ್ಟ್ ಮಾಡುವಲ್ಲಿ ದೇಶದಲ್ಲಿ ನಮ್ಮ ವಿಂಗ್ (ಕರ್ನಾಟಕ ಮತ್ತು ಗೋವಾ) ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಮುಂಬೈ ಹಾಗೂ ನವದೆಹಲಿ ಎರಡನೇ ಸ್ಥಾನದಲ್ಲಿದೆ. ಸಾಫ್ಟ್ ವೇರ್, ಆಟೋ ಮೊಬೈಲ್ಸ್ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿ ತೆರಿಗೆ ಸಂಗ್ರಹ ಮಾಡಲಾಗಿದೆ ಅಂತಾ ಬಿ.ಆರ್ ಬಾಲಕೃಷ್ಣನ್ ಹೇಳಿದರು.
ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…
ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…
ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…
ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…
ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…
ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…