Featured

ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್‌ ಏರಿಕೆ : ಪ್ರವಾಸಿ ತಾಣ, ಹೋಟೆಲ್‌ , ರೆಸಾರ್ಟ್‌ಗಳು ಭರ್ತಿ – Vishwanews24

ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್‌ ಏರಿಕೆ , ಪ್ರವಾಸಿ ತಾಣ, ಹೋಟೆಲ್‌ , ರೆಸಾರ್ಟ್‌ಗಳು ಭರ್ತಿ

ಮಂಗಳೂರು/ಉಡುಪಿ: ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ದಿಢೀರ್‌ ಏರಿಕೆಯಾಗಿದ್ದು, ತೀರ್ಥಕ್ಷೇತ್ರಗಳು, ಕಡಲ ತೀರ ಸಹಿತ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಹೆಚ್ಚಿದೆ.

ಮಂಗಳೂರು, ಉಡುಪಿಯ ಪ್ರಮುಖ ಹೊಟೇಲ್‌ಗ‌ಳ ಕೊಠಡಿಗಳು ಜನವರಿ ಮೊದಲ ವಾರದ ವರೆಗೂ ಬುಕ್‌ ಆಗಿವೆ.ಹೋಂ ಸ್ಟೇಗಳು, ರೆಸಾರ್ಟ್‌ಗಳು, ಸರ್ವಿಸ್‌ ಅಪಾರ್ಟ್‌ಮೆಂಟ್‌ಗಳೂ ಭರ್ತಿಯಾಗಿವೆ.

ಮೂರು ವರ್ಷಗಳಿಂದ ಕೋವಿಡ್‌ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ, ಕ್ರಿಸ್ಮಸ್‌ ಆಚರಣೆ ಮೇಲೆ ಒಂದಿಲ್ಲೊಂದು ರೀತಿಯ ನಿಯಂತ್ರಣ ಕ್ರಮಗಳಿದ್ದ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಈ ಬಾರಿ ಮುಖ್ಯವಾಗಿ ವರ್ಷಾಂತ್ಯಕ್ಕೆ ಊರಿಗೆ ಮರಳಿರುವ ಅನಿವಾಸಿ ಭಾರತೀಯರು, ಕ್ರಿಸ್ಮಸ್‌ ರಜೆಗೆ ಸುತ್ತಾಟಕ್ಕೆ ಆಗಮಿಸಿರುವಂತಹ ಕುಟುಂಬಗಳಿಂದಾಗಿ ಜನಸಂದಣಿ ಹೆಚ್ಚಿದೆ ಎನ್ನುತ್ತಾರೆ ಹೊಟೇಲ್‌ನವರು.

ದ.ಕ.ದಲ್ಲಿ 80 ನೋಂದಾಯಿತ ಹೋಂಸ್ಟೇಗಳು ಇವೆ. ಹೆಚ್ಚಿನವು ಮಂಗಳೂರು ತಾಲೂಕಿನಲ್ಲಿ ಅದರಲ್ಲೂ ವಿಶೇಷವಾಗಿ ಉಳ್ಳಾಲ, ಸುರತ್ಕಲ್‌ ಕಡಲ ಕಿನಾರೆ ಬಳಿ ಇವೆ. ಉಡುಪಿ ಜಿಲ್ಲೆಯ ಮಲ್ಪೆ, ಕಾಪು, ಕುಂದಾಪುರ ಕಡಲ ಕಿನಾರೆ ಪರಿಸರದಲ್ಲಿರುವ ಹೋಂ ಸ್ಟೇ, ಹಟ್‌ ಹೋಂಗಳು ಭರ್ತಿಯಾಗಿವೆ.

ಮಂಗಳೂರು ನಗರದಲ್ಲಿರುವ ಸ್ಟಾರ್‌ ಹೊಟೇಲ್‌ಗ‌ಳಲ್ಲಿ ಸುಮಾರು 400 ಕೊಠಡಿಗಳು ಪೂರ್ತಿ ತುಂಬಿ ದ್ದರೆ ಅದಕ್ಕಿಂತ ಕೆಳ ಮಟ್ಟದ ಹೊಟೇಲ್‌ಗ‌ಳಲ್ಲಿರುವ 2 ಸಾವಿರದಷ್ಟು ಕೊಠಡಿಗಳೂ ಭರ್ತಿಯಾಗಿವೆ. 30ಕ್ಕೂ ಹೆಚ್ಚು ಸರ್ವಿಸ್‌ ಅಪಾರ್ಟ್‌ಮೆಂಟ್‌ಗಳೂ ಬುಕ್‌ ಆಗಿವೆ. ಮುಖ್ಯವಾಗಿ ಬೆಂಗಳೂರು ಭಾಗದಿಂದ ಹೆಚ್ಚು ಜನರು ಆಗಮಿಸಿದ್ದಾರೆ.

ಮಂಗಳೂರು ನಗರದಲ್ಲಿರುವ ವಿವಿಧ ಶಾಪಿಂಗ್‌ ಮಾಲ್‌ಗ‌ಳು, ನಗರದ ಪ್ರಮುಖ ರೆಸ್ಟೋರೆಂಟ್‌, ಐಸ್‌ಕ್ರೀಂ ಪಾರ್ಲರುಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಕ್ರಿಸ್ಮಸ್‌ ಶಾಪಿಂಗ್‌ ಕೂಡ ಹೆಚ್ಚಾಗಿದೆ. ಮೂಡು ಬಿದಿರೆಯ ಸಾಂಸ್ಕೃತಿಕ ಜಾಂಬೂರಿ ನೋಡಲು ಬರುವವರ ಸಂಖ್ಯೆಯೂ ಅಧಿಕವಾಗಿದೆ. ಅಲ್ಲಿಗೆ ಬರುವವರು ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೂ ಹೋಗುವ ಯೋಜನೆ ಹಾಕಿಕೊಂಡೇ ಬರುತ್ತಾರೆ.

 

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

48 minutes ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

1 hour ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

2 hours ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

2 hours ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

2 hours ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

2 hours ago