ಉಡುಪಿ: ಜಿಲ್ಲೆಯ ವಿವಿಧ ಮೂಲೆಯಲ್ಲಿ ಹಿಂದೂ ಯುವ ಕಾರ್ಯಕರ್ತರ ಪಡೆಯೊಂದು ಕರಾವಳಿ ಭಾಗದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ.
“ತುಳುನಾಡ ಹಿಂದೂ ಸೇನೆ” ಎಂಬ ನಾಮಂಕಿತದೊಂದಿದೆ ರಾಜಕೀಯದ ನೆರಳು ಸೋಂಕಿಸಿಕೊಳ್ಳದೆ ತಮ್ಮದೆ ಆದ ಶೈಲಿಯಲ್ಲಿ ಸಂಘಟನೆಯ ಕಾರ್ಯಪ್ರವೃತಗೊಂಡಿದ್ದು ಈಗಾಗಲೇ ಹೊಸ ನವ ತರುಣ ತರುಣಿಯರು ಸಂಘಟನೆಯ ಕಾರ್ಯಕಲಾಪದಲ್ಲಿ ಕೈಜೋಡಿಸುತ್ತಿದ್ದಾರೆ.
ಸಾಮಾಜಿಕ ಹಾಗೂ ಧರ್ಮದ ವಿಚಾರಧಾರೆಯಡಿಯಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಯು ನ್ಯಾಯರ ಪರವಾಗಿ ಧ್ವನಿ ಎತ್ತುತ್ತಿರುವುದು ಕೂಡ ಸಮಾಜದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.
ಜಿಲ್ಲೆಯಲ್ಲಿ ಶ್ರೀಮತಿ ರಕ್ಷಾ ಹೆಣ್ಣುಮಗಳ ಸಾವಿನ ವಿಚಾರದಲ್ಲಿ ಗಟ್ಟಿಯಾಗಿ ಧ್ವನಿಎತ್ತಿದ ಪರಿಣಾದ ಪ್ರಕರಣದ ಚೆಂಡು ಸಿ.ಒ.ಡಿ ತನಿಖೆಯ ಕೈ ಸೇರಿರುವುದು ಇದೇ ಸಂಘಟನೆಯ ಮುತುವರ್ಜಿಯಲ್ಲಿ ಎಂಬುದು ಗಮನಾರ್ಹ ಅಂಶವಾಗಿದೆ.
ಜಿಲ್ಲೆಯಲ್ಲಿ ಅನ್ಯಾಯದ ಪರವಾಗಿ ಧ್ವನಿ ಎತ್ತಿ ನ್ಯಾಯದ ಹಾದಿಯಲ್ಲಿ ಸಾಗುತ್ತಿರುವ ತುಳುನಾಡ ಹಿಂದೂ ಸೇನೆಗೆ ಸೇರಲು ಯುವಕ ಯುವತಿಯರು ಮನಸ್ಸು ಮಾಡುತ್ತಿದ್ದಾರೆ ಎಂಬುದು ಕೂಡ ಗಮನಾರ್ಹ ಅಂಶವಾಗಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ಆರಂಭಗೊಂಡ ಸಂಘಟನೆ ಪ್ರಸ್ತುತ ತನ್ನ ಬಾಹುಬುಜವನ್ನು ಜಿಲ್ಲೆಯ ಮೂಲೆಮೂಲೆಗೂ ಪಸರಿಸುತ್ತಿದ್ದು ಮುಂದೊಂದು ದಿನ ರಾಜಕೀಯ ಸೋಂಕಿಲ್ಲದೆ ಹೆಮ್ಮರವಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಸಮಾಜದ ಧ್ವನಿಯಾಗಿ ಕೆಲಸ ಮಾಡುವ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸುವ ಉದ್ದೇಶದಿಂದ ಕಚೇರಿ ಕಾರ್ಯ ಕೂಡ ಮುಂದಿನ ದಿನದಲ್ಲಿ ಪ್ರಾರಂಭವಾಗಲಿದೆ.
ಒಟ್ಟಾರೆಯಾಗಿ ಸಮಾಜದ ಹಿತದೃಷ್ಟಿ ಹಾಗೂ ಧರ್ಮ ಹಾಗೂ ದೇಶ ವಿಚಾರಕ್ಕೆ ಧಕ್ಕೆ ಬಂದಾಗ ಯುವಕರನ್ನು ಒಗ್ಗೂಡಿಸಿ ಸಾಗುವ ಸಂಘಟನೆಯಾಗಿ “ತುಳುನಾಡ ಹಿಂದೂ ಸೇನೆ” ಮೂಡಿಬರಲಿ ಎಂಬುದು ಆಶಯವಾಗಿದೆ.
ಬ್ಯೂರೋ ರಿಪೋರ್ಟ್.
ಪುರುಷೋತ್ತಮ ಸಾಲಿಯಾನ್ ವಿಶ್ವನ್ಯೂಸ್24.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…