ಉಡುಪಿ

ಕರಾವಳಿಯಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ ತುಳುನಾಡ ಹಿಂದೂ ಸೇನೆ-vishwanews24

ಕರಾವಳಿಯಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ ತುಳುನಾಡ ಹಿಂದೂ ಸೇನೆ.

ಉಡುಪಿ: ಜಿಲ್ಲೆಯ ವಿವಿಧ ಮೂಲೆಯಲ್ಲಿ ಹಿಂದೂ ಯುವ ಕಾರ್ಯಕರ್ತರ ಪಡೆಯೊಂದು ಕರಾವಳಿ ಭಾಗದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿದೆ.
“ತುಳುನಾಡ ಹಿಂದೂ ಸೇನೆ” ಎಂಬ ನಾಮಂಕಿತದೊಂದಿದೆ ರಾಜಕೀಯದ ನೆರಳು ಸೋಂಕಿಸಿಕೊಳ್ಳದೆ ತಮ್ಮದೆ ಆದ ಶೈಲಿಯಲ್ಲಿ ಸಂಘಟನೆಯ ಕಾರ್ಯಪ್ರವೃತಗೊಂಡಿದ್ದು ಈಗಾಗಲೇ ಹೊಸ ನವ ತರುಣ ತರುಣಿಯರು ಸಂಘಟನೆಯ ಕಾರ್ಯಕಲಾಪದಲ್ಲಿ ಕೈಜೋಡಿಸುತ್ತಿದ್ದಾರೆ.

ಸಾಮಾಜಿಕ ಹಾಗೂ ಧರ್ಮದ ವಿಚಾರಧಾರೆಯಡಿಯಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಯು ನ್ಯಾಯರ ಪರವಾಗಿ ಧ್ವನಿ ಎತ್ತುತ್ತಿರುವುದು ಕೂಡ ಸಮಾಜದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ಜಿಲ್ಲೆಯಲ್ಲಿ ಶ್ರೀಮತಿ ರಕ್ಷಾ ಹೆಣ್ಣುಮಗಳ ಸಾವಿನ ವಿಚಾರದಲ್ಲಿ ಗಟ್ಟಿಯಾಗಿ ಧ್ವನಿಎತ್ತಿದ ಪರಿಣಾದ ಪ್ರಕರಣದ ಚೆಂಡು ಸಿ.ಒ.ಡಿ‌ ತನಿಖೆಯ ಕೈ ಸೇರಿರುವುದು ಇದೇ ಸಂಘಟನೆಯ ಮುತುವರ್ಜಿಯಲ್ಲಿ ಎಂಬುದು ಗಮನಾರ್ಹ ಅಂಶವಾಗಿದೆ.

ಜಿಲ್ಲೆಯಲ್ಲಿ ಅನ್ಯಾಯದ ಪರವಾಗಿ ಧ್ವನಿ ಎತ್ತಿ ನ್ಯಾಯದ ಹಾದಿಯಲ್ಲಿ ಸಾಗುತ್ತಿರುವ ತುಳುನಾಡ ಹಿಂದೂ ಸೇನೆಗೆ ಸೇರಲು ಯುವಕ ಯುವತಿಯರು ಮನಸ್ಸು ಮಾಡುತ್ತಿದ್ದಾರೆ ಎಂಬುದು ಕೂಡ ಗಮನಾರ್ಹ ಅಂಶವಾಗಿದೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿ ಆರಂಭಗೊಂಡ ಸಂಘಟನೆ ಪ್ರಸ್ತುತ ತನ್ನ ಬಾಹುಬುಜವನ್ನು ಜಿಲ್ಲೆಯ ಮೂಲೆಮೂಲೆಗೂ ಪಸರಿಸುತ್ತಿದ್ದು ಮುಂದೊಂದು ದಿನ ರಾಜಕೀಯ ಸೋಂಕಿಲ್ಲದೆ ಹೆಮ್ಮರವಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ಸಮಾಜದ ಧ್ವನಿಯಾಗಿ ಕೆಲಸ ಮಾಡುವ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸುವ ಉದ್ದೇಶದಿಂದ ಕಚೇರಿ ಕಾರ್ಯ ಕೂಡ ಮುಂದಿನ ದಿನದಲ್ಲಿ ‌ಪ್ರಾರಂಭವಾಗಲಿದೆ.

ಒಟ್ಟಾರೆಯಾಗಿ ಸಮಾಜದ ಹಿತದೃಷ್ಟಿ ಹಾಗೂ ಧರ್ಮ ಹಾಗೂ ದೇಶ ವಿಚಾರಕ್ಕೆ ಧಕ್ಕೆ ಬಂದಾಗ ಯುವಕರನ್ನು ಒಗ್ಗೂಡಿಸಿ ಸಾಗುವ ಸಂಘಟನೆಯಾಗಿ “ತುಳುನಾಡ ಹಿಂದೂ ಸೇನೆ” ಮೂಡಿಬರಲಿ ಎಂಬುದು ಆಶಯವಾಗಿದೆ.

ಬ್ಯೂರೋ ರಿಪೋರ್ಟ್.
ಪುರುಷೋತ್ತಮ ಸಾಲಿಯಾನ್ ವಿಶ್ವನ್ಯೂಸ್24.

Vishwa News 24

Recent Posts

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ – vishwanews24

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…

12 hours ago

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು – vishwanews24

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…

13 hours ago

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ – vishwanews24

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…

13 hours ago

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ – vishwanews24

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…

14 hours ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…

14 hours ago

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 days ago