ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕಾಲು ಸಂಕ ದಾಟುತ್ತಿದ್ದ ವ್ಯಕ್ತಿಯೊಬ್ಬರು ತೋಡಿಗೆ ಬಿದ್ದು ನೀರು ಪಾಲಾದ ಘಟನೆ ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ ರವಿವಾರ ಸಂಭವಿಸಿದೆ.
ಮಂಗಳೂರಿನಲ್ಲಿ ರವಿವಾರ ಬೆಳಗ್ಗಿನ ವೇಳೆ ಸಾಧಾರಣ ಮಳೆಯಾಗಿದ್ದು, ಸಂಜೆ ಗುಡುಗು, ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಬೆಳ್ತಂಗಡಿ ನಗರದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಕಾರ್ಕಳ ತಾಲೂಕಿನ ಕಲ್ಯಾ ಸ.ಹಿ.ಪ್ರಾ. ಶಾಲೆಯ ಹಳೆಯ ಕಟ್ಟಡದ ಗೋಡೆ ಕುಸಿದು ಅಪಾರ ನಷ್ಟ ಸಂಭವಿಸಿದೆ.
ಸುಳ್ಯದಲ್ಲೂ ಮಳೆ ಆರ್ಭಟ ಮುಂದುವರಿದಿತ್ತು. ಸಂಪಾಜೆ, ಬೆಳ್ಳಾರೆ, ಸುಬ್ರಹ್ಮಣ್ಯ, ಪಂಜ, ಅರಂತೋಡು ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ಭಾರೀ ಮಳೆಗೆ ಆದಿ ಸುಬ್ರಹ್ಮಣ್ಯದಲ್ಲಿ ಮುಖ್ಯ ರಸ್ತೆಯಲ್ಲಿ ಮಳೆ ನೀರು ಹರಿದು ರಸ್ತೆ ಬದಿಯ ಅಂಗಡಿಗಳಿಗೆ ನುಗ್ಗಿತ್ತು. ಸುಬ್ರಹ್ಮಣ್ಯದಲ್ಲಿ ಕುಮಾರ ಧಾರಾ ಮೈದುಂಬಿ ಹರಿಯುತ್ತಿದೆ. ಉಪ್ಪಿನಂಗಡಿ-ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿರುವ ಹೊಸಮಠ ಸೇತುವೆ ಮುಳುಗಡೆಯಾಗಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ- ಕುಮಾರಧಾರಾ ಮೈದುಂಬಿವೆ. ಕುಮಾರಧಾರೆ ನೀರು ಆಲಂಕಾರು ಗ್ರಾಮದ ಬುಡೇರಿಯಾ ವ್ಯಾಪ್ತಿಯನ್ನು ಆವರಿಸಿದ್ದು, ಭತ್ತದ ಕೃಷಿ, ಅಡಿಕೆ ತೋಟ ಮತ್ತು ವಿದ್ಯುತ್ ಪಂಪ್‌ಸೆಟ್‌ಗಳಿಗೆ ಹಾನಿ ಮಾಡಿದೆ. ದರ್ಪಣ ತೀರ್ಥ ಹೊಳೆಯ ಪ್ರವಾಹದಿಂದ ಪಂಜ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸೇತುವೆ ಮುಳುಗಿದೆ. ಸುರತ್ಕಲ್, ಬಂಟ್ವಾಳ, ವೇಣೂರು, ಮಡಂತ್ಯಾರು, ಮೂಡಬಿದಿರೆ, ಮಚ್ಚಿನ, ಪುಂಜಾಲಕಟ್ಟೆ, ವಿಟ್ಲ, ಕಡಬ, ಪುತ್ತೂರು, ನೆಲ್ಯಾಡಿ, ಗುಂಡ್ಯ, ಗುರು ವಾಯನ ಕೆರೆ, ಧರ್ಮಸ್ಥಳ, ಕೊಕಡ, ಉಳ್ಳಾಲದಲ್ಲಿ ಮಳೆಯಾಗಿದೆ.
ಉಡುಪಿ: ಮಳೆ ಬಿರುಸು
ಉಡುಪಿ ತಾಲೂಕಿನಲ್ಲಿಯೂ ರವಿವಾರ ಉತ್ತಮ ಮಳೆಯಾಗಿದೆ. ಉಡುಪಿ ಮತ್ತು ಸುತ್ತಮುತ್ತ ಮಧ್ಯಾಹ್ನದ ಅನಂತರ ನಿರಂತರವಾಗಿ ಮಳೆ ಸುರಿಯಿತು. ಕತ್ತಲಾಗುತ್ತಿದ್ದಂತೆ ಗಾಳಿ ಸಮೇತ ಬಿರುಸಿನ ಮಳೆಯಾಯಿತು. ಕಾಪು, ಪಡುಬಿದ್ರಿ, ಶಿರ್ವ, ಬ್ರಹ್ಮಾವರದಲ್ಲಿ ಉತ್ತಮ ಮಳೆಯಾಗಿದೆ. ಕಾರ್ಕಳದ ಕೆರ್ವಾಶೆ, ಬಜಗೋಳಿ ಪರಿಸರದಲ್ಲಿ ಮಳೆ ಜೋರಾಗಿತ್ತು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…