Featured

ಕರಾವಳಿಯ ಚಿಯರ್ ಬಾಯ್ ಆಗಿ ಫೇಮಸ್ ಆದ ಚೇತನ್

ಉಡುಪಿ : ಕರಾವಳಿ ಚಿಯರ್ ಬಾಯ್ ಒಬ್ಬರ ವಿಡಿಯೋ ಭಾರಿ ವೈರಲ್ ಆಗಿದ್ದು, ಕ್ರಿಕೆಟ್ ಮ್ಯಾಚ್ ಗಳಲ್ಲಿ ಕಾಣ ಸಿಗುವ ಚಿಯರ್ ಗರ್ಲ್ಸ್ ರೀತಿಯಾಗಿಯೇ ಇಲ್ಲೊಬ್ಬರು ಸ್ಥಳೀಯ ಕ್ರೀಡಾಕೂಟಗಳಲ್ಲಿ ಚಿಯರ್ ಬಾಯ್ ಆಗಿ ಮಿಂಚುತ್ತಿದ್ದು, ಕರಾವಳಿಯಲ್ಲಿ ಚಿಯರ್ ಬಾಯ್ ಆಗಿ ಭಾರೀ ಫೇಮಸ್ ಆಗಿದ್ದಾರೆ.

ವೃತ್ತಿಯಲ್ಲಿ ಪೇಂಟರ್ ಆಗಿರುವ ಚೇತನ್​, ಹಿಂದಿನಿಂದಲೂ ತಮ್ಮ ಊರಿನ ಯಾವುದೇ ಕಾರ್ಯಕ್ರಮದಲ್ಲಿ ಎಲ್ಲರನ್ನು ನಗಿಸುವ ಪ್ರಯತ್ನ ಮಾಡುತಿದ್ದರು. ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿಶೇಷ ನೃತ್ಯ, ಹುಲಿವೇಷ ಕುಣಿತ, ವಾಲಿಬಾಲ್ ಮ್ಯಾಚ್ ಸಂದರ್ಭ ಬೊಂಬೆ ಕುಣಿತ ಸೇರಿದಂತೆ ಹಲವು ಬಗೆಗಳಲ್ಲಿ ನೆರೆದವರನ್ನು ಮನರಂಜಿಸುತಿದ್ದಾರೆ.

ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ ಚೇತನ್ ಅವರು ತನ್ನದೇ ಆದ ಡೈಲಾಗ್, ನೃತ್ಯದ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಚೇತನ್ ಹಾಡಿನ ತಾಳಕ್ಕೆ ತಕ್ಕಂತೆ ಚಂಡೆಯವರೂ ಬಾರಿಸಿದ ವಿಡಿಯೋ ಸಾಮಾಜಿಕ ತಾಣದಲ್ಲಿ ಶಹಬ್ಬಾಸ್ ಗಿರಿ ಪಡೆದುಕೊಂಡಿದೆ. ಕ್ರಿಯೇಟಿವಿಟಿ ಮೂಲಕ ಪ್ರಯೋಗಗಳನ್ನು ಮಾಡುತ್ತಿರುವುದರಿಂದ ಎಲ್ಲರ ಮೆಚ್ಚುಗೆಯನ್ನು ಚೇತನ್ ಪಡೆದಿದ್ದಾರೆ.

ವಿಶೇಷವಾಗಿ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಹೆಚ್ಚಾಗಿ ಆಟಗಾರರನ್ನು ಹುರಿದುಂಬಿಸುತ್ತಿದ್ದು. ಸಿನಿಮಾ ಡೈಲಾಗ್‌ಗಳನ್ನು  ಹೇಳಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೀಗ ಚೇತನ್ ಎಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದ್ದಾರೆ ಅಂದರೆ ಕ್ರೀಡಾಕೂಟಕ್ಕೆ ಚೇತನ್ ಬರುತ್ತಾರಾ ಎಂದು ವಿಚಾರಿಸಿ ಇವರ ಮನೋರಂಜನೆ ನೋಡುವುದಕ್ಕೆಂದೆ ಬರುವವರು ಹೆಚ್ಚಾಗಿದ್ದಾರೆ.

ಚೇತನ್ ಹಾಡಿನ ತಾಳಕ್ಕೆ ತಕ್ಕಂತೆ ಚಂಡೆಯವರೂ ಬಾರಿಸಿದ ವಿಡಿಯೋ ಸಾಮಾಜಿಕ ತಾಣದಲ್ಲಿ ಶಹಬ್ಬಾಸ್ ಗಿರಿ ಪಡೆದುಕೊಂಡಿದೆ. ಕ್ರಿಯೇಟಿವಿಟಿ ಮೂಲಕ ಪ್ರಯೋಗಗಳನ್ನು ಮಾಡುತ್ತಿರುವುದರಿಂದ ಎಲ್ಲರ ಮೆಚ್ಚುಗೆಯನ್ನು ಚೇತನ್ ಪಡೆದಿದ್ದಾರೆ..

 

 

 

Vishwa News 24

Recent Posts

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು -vishwanews24

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು…

1 hour ago

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ -vishwanews24

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…

2 hours ago

ಅಕ್ಟೋಬರ್‌ನಲ್ಲಿ ಮಂಗಳೂರು – ಕುವೈಟ್‌ ನೇರ ವಿಮಾನ ಆರಂಭ -vishwanews24

ಅಕ್ಟೋಬರ್‌ನಲ್ಲಿ ಮಂಗಳೂರು - ಕುವೈಟ್‌ ನೇರ ವಿಮಾನ ಆರಂಭ ಮಂಗಳೂರು: ಯುದ್ಧದಿಂದಾಗಿ 6 ತಿಂಗಳಿನಿಂದ ಸ್ಥಗಿತಗೊಂಡಿದ್ದ ಮಂಗಳೂರು- ಕುವೈಟ್‌ ನೇರ…

3 hours ago

ಮೂಡುಬಿದಿರೆ: ಬಿಜೆಪಿ ಯುವ ಮುಖಂಡ ಪ್ರತೀಕ್‌ ಶೆಟ್ಟಿ ನಿಧನ -vishwanews24

ಮೂಡುಬಿದಿರೆ: ಬಿಜೆಪಿ ಯುವ ಮುಖಂಡ ಪ್ರತೀಕ್‌ ಶೆಟ್ಟಿ ನಿಧನ ಮೂಡುಬಿದಿರೆ: ಬಿಜೆಪಿ ಮೂಲ್ಕಿ ಮೂಡುಬಿದಿರೆ ಮಂಡಲ ಯುವಮೋರ್ಚಾದಲ್ಲಿ ಸಕ್ರಿಯರಾಗಿದ್ದ ಯುವ…

3 hours ago

ತುಳು ಬೆನ್ನಲ್ಲೇ ಉರ್ದುಗೂ ಅಧಿಕೃತ ಭಾಷಾ ಸ್ಥಾನಮಾನಕ್ಕೆ ಆಗ್ರಹ: ಮುಖ್ಯಮಂತ್ರಿಗೆ SDPI ರಾಜ್ಯಾಧ್ಯಕ್ಷ ಪತ್ರ -vishwanews24

ತುಳು ಬೆನ್ನಲ್ಲೇ ಉರ್ದುಗೂ ಅಧಿಕೃತ ಭಾಷಾ ಸ್ಥಾನಮಾನಕ್ಕೆ ಆಗ್ರಹ: ಮುಖ್ಯಮಂತ್ರಿ SDPI ರಾಜ್ಯಾಧ್ಯಕ್ಷ ಪತ್ರ ಮೈಸೂರು: ಇತ್ತೀಚಿಗೆ ಮಂಗಳೂರಿನ ಜಿಲ್ಲಾಧಿಕಾರಿ…

3 hours ago

ಸೌಜನ್ಯಾ ಪ್ರಕರಣ ಮರು ತನಿಖೆ ಸುಪ್ರೀಂ ಆದೇಶಕ್ಕೆ ಶ್ರೀ ಕ್ಷೇತ್ರ ಸ್ವಾಗತ ; ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆಯಲಿ -vishwanews24

ಸೌಜನ್ಯಾ ಪ್ರಕರಣ ಮರು ತನಿಖೆ ಸುಪ್ರೀಂ ಆದೇಶಕ್ಕೆ ಶ್ರೀ ಕ್ಷೇತ್ರ ಸ್ವಾಗತ ; ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆಯಲಿ ಹೊಸದಿಲ್ಲಿ: ಉಜಿರೆ…

4 hours ago