Featured

ಕರಾವಳಿ ಬಿಜೆಪಿಯ ಬಹುತೇಕ ಖಚಿತಗೊಂಡ ಅಭ್ಯರ್ಥಿಗಳ ಪಟ್ಟಿ:ಲಾಲಾಜಿ-ರಘುಪತಿಭಟ್-ಸುಕುಮಾರ್ ಶೆಟ್ಟಿ, ಭರತ್ ಶೆಟ್ಟಿ ಔಟ್-ಉಮನಾಥ್ , ವೇದವ್ಯಾಸ ಕಾಮತ್,ಹಾಲಾಡಿ ಡೌಟ್

ಕರಾವಳಿ ಬಿಜೆಪಿಯ ಬಹುತೇಕ ಖಚಿತಗೊಂಡ ಅಭ್ಯರ್ಥಿಗಳ ಪಟ್ಟಿ:ಲಾಲಾಜಿ-ರಘುಪತಿಭಟ್-

ಸುಕುಮಾರ್ ಶೆಟ್ಟಿ, ಭರತ್ ಶೆಟ್ಟಿ ಔಟ್ – ಉಮನಾಥ್ , ವೇದವ್ಯಾಸ ಕಾಮತ್,ಹಾಲಾಡಿ ಡೌಟ್

ಪೊಲಿಟಿಕಲ್ ವರದಿ ಬೆಂಗಳೂರು

2023 ನೇ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಕರಾವಳಿಯ ಪಟ್ಟಿ ಬಹತೇಕ ಖಚಿತಗೊಂಡಿರುವ ಮಾಹಿತಿ ಹೊರಬಿದ್ದಿದ್ದು ಈ ನಡುವೆ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ಸಿಗುವ ಅನುಮಾನ ವ್ಯಕ್ತವಾಗಿದೆ.ಬಿಜೆಪಿಯ ಎರಡನೇ ಹಂತದ ನಾಯಕರಿಗೆ ಮಣೆ ಹಾಕುವ ಉದ್ದೇಶದಿಂದ ಹಾಲಿ ಶಾಸಕರನ್ನು ಕೈ ಬಿಡುವ ನಿರ್ಧಾರಕ್ಕೆ ಸಂಘ ಹಾಗೂ ಬಿಜೆಪಿ ನಿರ್ಧಾರಮಾಡಿದೆ ಎನ್ನಲಾಗುತ್ತಿದೆ.

ದೆಹಲಿ ಮಟ್ಟದಲ್ಲಿ ಈಗಾಗಲೇ ಎರಡು ಸುತ್ತಿನ ಮಾತುಕತೆಯಲ್ಲಿ ಕೂಡ ಇದೇ ಅಭಿಪ್ರಾಯ ಮುಂಚೂಣಿಗೆ ಬಂದಿದ್ದು ಹಾಲಿ ಶಾಸಕರನ್ನು ಬದಿಗಿರಿಸಿ ಹೊಸ ಮುಖಗಳಿಗೆ ಅವಕಾಶನೀಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ಹೊರತು ಪಡಿಸಿ ಕುಂದಾಪುರಲ್ಲಿ ಹಾಲಾಡಿ ಅಭಿಪ್ರಾಯದಂತೆ ಟಿಕೆಟ್ ನೀಡುವುದಾಗಿದ್ದು ಕಾಪು-ಉಡುಪಿ-ಬೈಂದೂರು ಬಹುತೇಕ ಬದಲಾವಣೆಯಾಗುವ ಸಾಧ್ಯತೆ ಇದೆ.

ಸರ್ವೆ ಕಾರ್ಯದ ಪ್ರಕಾರ ಬಿಜೆಪಿ ಉಡುಪಿ ಜಿಲ್ಲೆಯಲ್ಲಿ ಬಲಿಷ್ಟವಾಗಿದ್ದು ಹಾಲಿ ಶಾಸಕರ ಬಗ್ಗೆ ಅಸಾಮಧಾನ ಹೊರ ಬಿದ್ದಿರುವ ಪರಿಣಾಮವಾಗಿ ಈ ನಿರ್ಧಾರ ಪಡೆಯಲು ಸಂಘ ಬಿಜೆಪಿ ನಿರ್ಧರಿಸಿದೆ. ಈ ಬಾರಿ ಬದಲಾವಣೆ ಮಾಡದೇ ಇದ್ದಲ್ಲಿ ಮುಂದಿನ ಚುನಾವಣೆಯ ಹೊಸ್ತಿಲಲ್ಲಿ ಎರಡನೇ ಹಂತದ ನಾಯಕರು ಮೂಲೆಗುಂಪಾಗುವ ಸಾಧ್ಯತೆ ಹೆಚ್ಚಿದ್ದು ಇದು ಸಂಘಟನೆಯ ವೈಫಲ್ಯತೆಗೆ ಕಾರಣವಾಗಬಹುದು ಹಾಗಾಗಿ ಬದಲಾವಣೆ ಕಟ್ಟಿಟ್ಟ ಬುತ್ತಿಯಾಗಿದೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ರಘುಪತಿ ಅವರು ಸೋಲಿಲ್ಲದ ಸರದಾರ ಆದರೇ ಕಳೆದ ಒಂದು ಚುನಾವಣೆಯಲ್ಲಿ ಲೈಂಗಿಕ ಪ್ರಕರಣದ ಮುಜುಗರದಿಂದ ಚುನಾವಣೆ ಸ್ಪರ್ಧಿಸದೇ ಹೊರಗುಳಿದಿದ್ದರು ಆದರೇ ಮತ್ತೇ ಅದೇ ವಾಸನೆ ಮುಂದುವರಿದ ಪರಿಣಾಮವಾಗಿ ಭಟ್ರಿಗೆ ಟಿಕೆಟ್ ಕೊಡಬಾರದೆಂಬ ಕೂಗು ದೆಹಲಿಯ ಬಾಗಿಲು ತಟ್ಟಿದೆ ಆ ಪರಿಣಾಮವಾಗಿ ಹೊಸ ಮುಖವನ್ನು ಈ ಪ್ರಯೋಗ ಮಾಡುವ ಮುಖೇನ ಜಿಲ್ಲಾ ಬಿಜೆಪಿಯನ್ನು ಕಟ್ಟುವ ಕೆಲಸ ಸಂಘ ಮಾಡಲಿದೆ.

ಇನ್ನೂ ಕಾಪುವಿನಲ್ಲಿ ಸತತವಾಗಿ ಲಾಲಾಜಿ ಹೊರತು ಪಡಿಸಿದರೆ ಬಿಜೆಪಿ ಯಾವುದೇ ಹೊಸ ಮುಖವನ್ನು ಇದುವರೆಗೆ ಪ್ರಯೋಗ ಮಾಡಿಲ್ಲ ಆ ಪರಿಣಾಮವಾಗಿ ಎರಡನೇ ಹಂತದ ನಾಯಕರು ಈಗಾಗಲೇ ಮೂಲೆ ಸೇರಿದ್ದು ಮೂರನೇ ಹಂತದ ನಾಯಕರು ಸದ್ಯ ಹೆಮ್ಮರವಾಗಿ ಪಕ್ಷ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ ಅಂತವರಿಗೆ ಟಿಕೆಟ್ ನೀಡ ಬೇಕು ಎಂಬ ಕೂಗು ಕೇಳಿ ಬರುತ್ತಿದೆ ಮಾತ್ರವಲ್ಲದೆ ಕ್ಷೇತ್ರದಲ್ಲಿ ಮಿತಿಮೀರಿದ ಭ್ರಷ್ಟಚಾರ, ಹಿಂದೂ ಕಾರ್ಯಕರ್ತರಿಗೆ ಬಿದ್ದ ಹೊಡೆತ, ಗೋವು ಕಳವು ಪ್ರಕರಣ ನಡೆದರೂ ಕೂಡ ಕ್ಷೇತ್ರದಲ್ಲಿ ಬಿಜೆಪಿ ಭಧ್ರವಾಗಿದೆ ಆದರೇ ಈ ಸಲ ಮಾತ್ರ ಹೊಸ ಮುಖವನ್ನು ಬಿಜೆಪಿ ಜನತೆಯ ಮುಂದೆ ಇಡದೇ ಇದ್ದಲ್ಲಿ ಜಿಲ್ಲೆಯಲ್ಲಿ ಒಂದು ಕ್ಷೇತ್ರವನ್ನು ಕಾಂಗ್ರೇಸ್ ಗೆ ಸುಲಭವಾಗಿ ಧಾರೆ ಎಳೆದುಕೊಡಬೇಕಾಗುತ್ತೆಂಬ ಮಾತು ಜೋರಾಗಿ ಕೇಳಿ ಬರುವ ಪರಿಣಾಮವಾಗಿ ಲಾಲಾಜಿ ಈ ಸಲ ಔಟ್ ಆಗುವ ಸಾಧ್ಯತೆ ಹೆಚ್ಚಿದೆ.

ಬೈಂದೂರು ಭಾಗದಲ್ಲಿ ಸುಕುಮಾರ್ ಶೆಟ್ಟಿಯ ಮುನಿಸು ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಪೆಟ್ಟು ಕೊಟ್ಟಿದೆ ಒಂದು ಲೆಕ್ಕಚಾರದ ಪ್ರಕಾರ ಬೈಂದೂರು ಈ ಸಲದ ಮಟ್ಟಿಗೆ ಕಾಂಗ್ರೇಸ್ ಸುಲಭವಾಗಿ ಗೆಲುವು ಸಾಧಿಸಬಹದು ಕಾರಣ ಬಿಲ್ಲವ-ಮೊಗವೀರ-ದೇವಾಡಿಗ ಮತದಾರರಿಗೆ ಸುಕುಮಾರ್ ಶೆಟ್ಟಿಯಿಂದ ಅನ್ಯಾಯವಾಗಿದೆಂಬ ಮಾತು ಬಹಿರಂಗವಾಗಿಯೇ ಕೇಳಿ ಬಂದಿರುವ ಪರಿಣಾಮವಾಗಿ ಸುಕುಮಾರ್ ಶೆಟ್ಟಿಯ ಬದಲಾವಣೆ ಅಗತ್ಯವಾಗಿದೆಂದು ಸಂಘ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಕುಂದಾಪುರ ಹಾಲಾಡಿ ಶ್ರೀನಿವಾಸ ಶೆಟ್ಟಿಯ ಹಿಡಿತದಲ್ಲಿರುವ ವಿಧಾನಸಭಾ ಕ್ಷೇತ್ರ ಇಲ್ಲಿ ಯಾವುದೇಪ್ರಯೋಗ ಮಾಡಬೇಕಾದರೂ ಅಂತಿಮವಾಗಿ ಹಾಲಾಡಿ ಸಹಿ ಹಾಕಿದರೆಮಾತ್ರ ಸಾಧ್ಯ ಹಾಗಾಗಿ ಈ ವ್ಯಕ್ತಿಯ ಕೃಪಾಕಟಾಕ್ಷ ಯಾರ ಮೇಲಿದೆಯೋ ಅವರೇ ಆ ಭಾಗದಲ್ಲಿ ಗೆಲುವು ಸಾಧಿಸುವುದಾಗಿದೆ ಹಾಗಾಗಿ ಈ ಕ್ಷೇತ್ರದ ಲೆಕ್ಕಚಾರದ ಬಗ್ಗೆ ಸಂಘ ಬಿಜೆಪಿ ಎಂತಹ ಫ್ಲ್ಯಾನ್ ಮಾಡಿದ್ದರೂ ಕೂಡ ಅದನ್ನ ತಲೆಕೆಳಗಾಗಿಸುವ ತಾಕತ್ತು ಹಾಲಾಡಿಗೆ ಇರುವುದರಿಂದ ಸದ್ಯ ಯಥಾಸ್ಥತಿ ಕಾಪಾಡಿಕೊಂಡು ಹೋಗುವ ಸಾಧ್ಯತೆ ಇದೆ.

ಮೂಡಬಿದಿರೆಯಲ್ಲಿ ಉಮನಾಥ ಕೋಟ್ಯಾನ್ ಬದಲು ನಳಿನ್ ಆಪ್ತನಿಗೆ ಟಿಕೆಟ್ ಸಿಗುವುದು ಬಹುತೇಕ ದಿಟವಾಗಿದೆ ಮಿಥುನ್ ರೈ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಪರಿಣಾಮವಾಗಿ ನಳಿನ್ ತನ್ನ ಪ್ರಭಾವ ಬಳಸಿಕೊಂಡು ತನ್ನ ಆಪ್ತ ವರ್ಗಕ್ಕೆ ಟಿಕೆಟ್ ಕೊಡುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಭರತ್ ಶೆಟ್ಟಿ ಮಂಗಳೂರು ನಗರ ಉತ್ತರದಿಂದ ಗೆದ್ದು ಬಂದವರು ಆದರೇ ಇವರಿಗೂ ಈ ಬಾರಿ ಟಿಕೆಟ್ ನೀಡುವ ಸಾಧ್ಯತೆಯಿಲ್ಲ ಈ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ಆರಂಭವಾಗಿದ್ದು ಈ ಕ್ಷೇತ್ರದಲ್ಲಿ ಮಹಿಳೆಗೆ ಟಿಕೆಟ್ ನೀಡುವ ಕುರಿತಾಗಿ ಮಾತುಕತೆ ನಡೆದಿದೆ. ವೇದವ್ಯಾಸ ಕಾಮತ್ ಬದಲಿಗೆ ಮತ್ತೊಂದು ಹೊಸ ಜಿಎಸ್ಬಿ ಮುಖವನ್ನು ಈ ಸಲ ಕಣಕ್ಕಿಳಿಸುವ ಇರಾದೆ ಇರುವ ಪರಿಣಾಮವಾಗಿ ಮಂಗಳೂರು ದಕ್ಷಿಣ ಹಾಗೂ ಪುತ್ತೂರು ಸಂಜೀವ ಮಠಂದೂರು ಅವರಿಗೆ ಬಿಜೆಪಿ ಕೋಕ್ ಕೊಡಲು ನಿರ್ಧರಿಸಿದೆ.

ಒಟ್ಟಾರೆಯಾಗಿ ೨೦೨೩ ನೇ ಸಾಲಿನ ವಿಧಾನ ಸಭಾ ಚುನಾವಣೆಯಲ್ಲಿ ಕರಾವಳಿಯ ಕ್ಷೇತ್ರಗಳು ಇ ಸಲದ ಮಟ್ಟಿಗೆ ಬದಲಾವಣೆಯ ಪರ್ವವಾಗುವ ಸಾಧ್ಯತೆ ಹೆಚ್ಚಾಗಿದೆ.

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

3 hours ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

3 hours ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

3 hours ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

4 hours ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

4 hours ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

4 hours ago