Featured

ಕರಾವಳಿ ಹೊರತುಪಡಿಸಿ ಅನ್ಯ ಜಿಲ್ಲೆಗಳಲ್ಲೂ ಕಂಬಳ ನಡೆಸಲು ಹೈಕೋರ್ಟ್ ಹಸಿರು ನಿಶಾನೆ : ಕಂಬಳ ಪ್ರೇಮಿಗಳಲ್ಲಿ ಹರ್ಷ – vishwanews24

ಕಂಬಳ ಕ್ರೀಡೆಗೆ ಹೈಕೋರ್ಟ್ ಆದೇಶ ರಾಜ್ಯ ಸರ್ಕಾರದ ನಡೆಗೆ ಪೂರಕ : ಬೆಳಪು ದೇವಿ ಪ್ರಸಾದ್ ಶೆಟ್ಟಿ

ಉಡುಪಿ: ಕರಾವಳಿ ಹೊರತುಪಡಿಸಿ ಅನ್ಯ ಜಿಲ್ಲೆಗಳಲ್ಲೂ ಕಂಬಳ ಆಯೋಜಿಸಬಹುದು ಎಂದು ಹೈಕೋರ್ಟ್ ಹಸಿರು ನಿಶಾನೆ ನೀಡಿದೆ. ಬೆಂಗಳೂರಿನಲ್ಲಿ ಕಂಬಳ ನಡೆದಾಗ ಪ್ರಾಣಿಗಳಿಗೆ ಹಿಂಸೆಯಾಗುತ್ತೆ, ಬೇರೆ ಜಿಲ್ಲೆಗಳಲ್ಲಿ ಕಂಬಳ ನಡೆಯಬಾರದು ಎಂದು ಪೇಟಾದವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಅವಕಾಶ ನೀಡಿರುವುದು ಕಂಬಳ ಪ್ರೇಮಿಗಳಲ್ಲಿ ಹರ್ಷ ಉಂಟುಮಾಡಿದೆ.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವಿ ಪ್ರಸಾದ ಶೆಟ್ಟಿ ಅವರು, ಹೈಕೋರ್ಟ್ ಆದೇಶ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಗೆ ಹರ್ಷ ತಂದಿದೆ. ಇದು ರಾಜ್ಯ ಸರ್ಕಾರದಿಂದ ಸಿಕ್ಕ ಮಾನ್ಯತೆ. ಹೈಕೋರ್ಟ್ ಆದೇಶ ರಾಜ್ಯ ಸರ್ಕಾರದ ನಡೆಗೆ ಪೂರಕವಾಗಿದೆ ಎಂದರು.

ಒಂದೂವರೆ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಕಂಬಳ ಮಾಡಿದೆವು‌. ಇದರಿಂದ ಅಂತರಾಷ್ಟ್ರೀಯ ಮಟ್ಟದ ಮನ್ನಣೆ ಸಿಕ್ಕಿತು. ಹೀಗಾಗಿ ಮೈಸೂರು ದಸರಾದಲ್ಲಿ ಕಂಬಳ ಮಾಡಲು ಸಿದ್ಧತೆ ಮಾಡಿದ್ದೇವು. ಅಲ್ಲದೆ, ಶಿವಮೊಗ್ಗದಲ್ಲೂ ಕಂಬಳ ಮಾಡಲು ಬೇಡಿಕೆ ಬಂದಿತ್ತು. ಆದರೆ ಪೇಟಾದವರು ಇದನ್ನು ವಿರೋಧಿಸಿದ್ದರು‌‌. ಅವಿಭಜಿತ ಜಿಲ್ಲೆ ಹೊರತುಪಡಿಸಿ ಕಂಬಳ ಮಾಡಬಾರದು ಎಂದು ಪೇಟಾ ಹೇಳಿತ್ತು. ಕೋಣಗಳಿಗೆ ಹಿಂಸೆ ಆಗುತ್ತದೆ ಎಂದು ವಾದ ಮಾಡಿದ್ದರು. ಇದೀಗ ಸರಕಾರ ಕಂಬಳಕ್ಕೆ ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ಅವಕಾಶ ನೀಡಿದೆ‌. ಆದ್ದರಿಂದ ಕಂಬಳ ರಾಜ್ಯದ ಯಾವ ಭಾಗದಲ್ಲೂ ಮಾಡಬಹುದು ಎಂದು ಕೋರ್ಟ್ ಹೇಳಿದೆ. ನಿಯಮಗಳನ್ನು ಪಾಲಿಸಬೇಕು ಎಂದು ನಿರ್ದೇಶನ ನೀಡಿದೆ‌. ಕೋಣಗಳ ಆರೋಗ್ಯ ಮತ್ತು ಶಿಸ್ತು ಪಾಲಿಸಬೇಕು ಎಂದು ನಿರ್ದೇಶನ ನೀಡಿದೆ ಎಂದು ಹೇಳಿದರು‌.

ಕರಾವಳಿಯಲ್ಲಿ 25 ಕಡೆ ಜೋಡುಕರೆ ಕಂಬಳ ನಡೆಯುತ್ತಿದೆ. 360ಕ್ಕೂ ಹೆಚ್ಚು ಜೋಡು ಕೋಣಗಳು ಭಾಗವಹಿಸುತ್ತವೆ‌. ಕುಂದಾಪುರದಲ್ಲಿ ಸಾಂಪ್ರದಾಯಿಕ ರೀತಿಯ 300 ಕಂಬಳ ನಡೆಯುತ್ತೆ‌. ಬೆಂಗಳೂರು ಹಾಸನ ಮೈಸೂರು ಶಿವಮೊಗ್ಗ ,ಮುಂಬೈ ನಲ್ಲೂ ಬೇಡಿಕೆ ಇದೆ. ಪೇಟಾ ದವರು ಅನಗತ್ಯವಾಗಿ ಕಿರುಕುಳ ಕೊಡುತ್ತಿದ್ದಾರೆ‌. ಕುದುರೆ ರೇಸಿಗೆ ಹೋಗಿ ಕೂತು ನೋಡಿ ಬರುತ್ತಾರೆ‌. ಕಂಬಳ ಒಳ್ಳೆಯ ಕ್ರೀಡೆ‌. ರೈತಾಪಿ ಜನರ ಜೀವನಾಡಿ ಕ್ರೀಡೆ ಕಂಬಳ‌. ಕೋಣಗಳನ್ನು ಬಹಳ ಪ್ರೀತಿಯಿಂದ ಸಾಕುತ್ತಾರೆ. ಲಕ್ಷಾಂತರ ವೆಚ್ಚ ಮಾಡಿ ಕಂಬಳ ಮಾಡುತ್ತೇವೆ‌. ಮೋಜು ಮಸ್ತಿಗಲ್ಲ ಸಂಪ್ರದಾಯ ಉಳಿಸುವ ಕ್ರೀಡೆ‌. ಪೇಟಾದವರು ಅನಗತ್ಯ ಕಿರುಕುಳ ನೀಡುತ್ತಾರೆ‌. ಪೇಟಾದವರು ಕಂಬಳ ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೋದರು. ಆದರೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಬರುವ ಮೂಲಕ ಕಂಬಳಕ್ಕೆ ಅವಕಾಶ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

Vishwa News 24

Recent Posts

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

7 minutes ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

14 minutes ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

21 minutes ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

20 hours ago

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO – vishwanews24

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…

21 hours ago

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ – vishwanews24

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ  ಬೆಂಗಳೂರು: ಕರ್ನಾಟಕ ಸರ್ಕಾರದ…

21 hours ago