Featured

ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದವರು ಬಿ.ಎಸ್.ಯಡಿಯೂರಪ್ಪ, ಅವರಿಲ್ಲಾಂದ್ರೆ ಬಿಜೆಪಿ ಇಲ್ಲ : ವಾಟಾಳ್ ನಾಗರಾಜ್ -Vishwanews24

ಚಾಮರಾಜನಗರ: ಯಡಿಯೂರಪ್ಪ ನನ್ನ ನಂಬರ್ 1 ಶತ್ರು, ಆದರೆ ಅವರಿಲ್ಲ ಎಂದರೆ ಬಿಜೆಪಿ ಇಲ್ಲ , ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದವರು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಚಾಮರಾಜನಗರದಲ್ಲಿಂದು ಬಿಎಸ್​ವೈ ಅವರನ್ನು ತೆಗಳುವ ಮೂಲಕ ಹೊಗಳಿದರು.

ಬಂಡಿಪುರದ ಮದ್ದೂರು ಚೆಕಪೋಸ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದವರು ಬಿ.ಎಸ್.ಯಡಿಯೂರಪ್ಪ, ಸರ್ಕಾರ ತಂದವರು ಯಡಿಯೂರಪ್ಪ, ಅವರಿಲ್ಲ ಎಂದರೆ ಬಿಜೆಪಿಯೂ ಇಲ್ಲ,  ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತ ಯಡಿಯೂರಪ್ಪ ನನ್ನ ನಂಬರ್ 1 ಶತ್ರು ನನ್ನ ಸೋಲಿಸಲು 10 ವರ್ಷಗಳ ಕಾಲ ನನ್ನ ವಿರುದ್ಧ ಅಭ್ಯರ್ಥಿಯನ್ನ ನಿಲ್ಲಿಸಿದರು. ಹಾಗಾಗಿ ನನಗೆ ಬಿಎಸ್​​ವೈ ನನಗೆ ಶತ್ರು. ಆದರೂ ರಾಜ್ಯದಲ್ಲಿ ಯಡಿಯೂರಪ್ಪ, ಅವರಿಲ್ಲ ಎಂದರೆ ಬಿಜೆಪಿಯೂ ಇಲ್ಲ, ಈಶ್ವರಪ್ಪನೂ ಇಲ್ಲ, ಯಾವ ಅಪ್ಪನೂ ಇಲ್ಲಾ ಎಂದು ಒಂದು ಕಡೆ ತೆಗಳಿ ಮತ್ತೊಂದು ಕಡೆ ಹೊಗಳಿದರು.

ಇತ್ತ ದಸರಾ ಆಚರಣೆ ಕುರಿತು ಮಾತನಾಡಿ, ದಸರಾ ನಾಡಹಬ್ಬ. ಆದರೆ ಯಾವ ಸರ್ಕಾರ ಬರುವುದೋ ಆ ದಸರಾ ಆಗುತ್ತಿರುವುದು ಸರಿಯಲ್ಲ. ವಿಶ್ವವಿಖ್ಯಾತ ದಸರಾ ಬರಬರುತ್ತಾ ಮೈಸೂರಿಗೆ ಸೀಮಿತವಾಗುತ್ತಿದೆ. ಆದ್ದರಿಂದ ಸಿಎಂ ನೇತೃತ್ವದಲ್ಲಿ ಸರ್ವ ಪಕ್ಷಗಳನ್ನು ಒಳಗೊಂಡಂತೆ ಸಮಿತಿ ರಚಿಸಬೇಕು ಎಂದು ಹೇಳಿದರು.’ಇಲ್ಲಿ ದರ್ಬಾರು, ಉತ್ತರ ಕರ್ನಾಟಕದಲ್ಲಿ ಕಣ್ಣೀರು’ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಯದುವಂಶಸ್ಥ ಯದುವೀರ್ ಬಿಡಬೇಕಿತ್ತು. ದಸರಾ ದರ್ಬಾರ್ ಬಿಟ್ಟು ಉತ್ತರ ಕರ್ನಾಟಕ ಜನರ ಸಮಸ್ಯೆ ಕೇಳಬೇಕಿತ್ತು .ಉತ್ತರ ಕರ್ನಾಟಕದ ಜನ ನೀರಿನಲ್ಲಿ ಮುಳುಗಿದ್ದಾರೆ ಎಂದರು.

ಪ್ರಧಾನಿ ಮೋದಿ ವೈಭವದಿಂದ ಅಮೆರಿಕಾಕ್ಕೆ ಹೋಗಿ ಬಂದಿದ್ದಾರೆ, ಕರ್ನಾಟಕಕ್ಕೇ ಅವರು ಬರಲಿಲ್ಲ? ರಾಜ್ಯದವರನ್ನು ಗುಲಾಮರಂತೆ ಕಾಣುತ್ತಿರುವುದು ಸರಿಯಲ್ಲ. ಇದರ ವಿರುದ್ಧ ಹೋರಾಟ ಅನಿವಾರ್ಯ, ಉತ್ತರ ಕರ್ನಾಟಕಕ್ಕೆ ಅಗೌರವ ತೋರಿ ಪರಿಹಾರ ನೀಡದಿದ್ದರೆ ರಾಜ್ಯವೇ ಧಗಧಗ ಎನ್ನಲಿದೆ ಎಂದು ಎಚ್ಚರಿಸಿದರು. ಗಣಿ ಮಾಲೀಕರ ದರ್ಬಾರಿನಲ್ಲಿ ಯಾವುದೇ ಕಾರಣಕ್ಕೂ ಬಳ್ಳಾರಿ ವಿಭಜನೆ ಆಗಬಾರದು ಎಂದು ಗುಡುಗಿದರು.

Vishwa News 24

Recent Posts

ಕುಂದಾಪುರ: ಹೋಂಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ – vishwanews24

ಕುಂದಾಪುರ: ಹೋಂ ಸ್ಟೇ ಎನ್‌ ಒಸಿ ನೀಡಲು ಲಂಚ ಪಡೆದ ಆರೋಪ ; ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಕುಂದಾಪುರ…

11 hours ago

ಉಚ್ಚಿಲ : ಕರಾವಳಿ ಭಾಗವಿಲ್ಲದೇ ರಾಜ್ಯಕ್ಕೆ ಹೆಚ್ಚಿನ ಬೆಲೆಯೇ ಇರುವುದಿಲ್ಲ :  ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ  :…

15 hours ago

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ ; ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ  : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…

16 hours ago

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ – vishwanews24

ಉಡುಪಿ:  ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ    ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…

16 hours ago

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ – vishwanews24

ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ​ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…

2 days ago

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ – vishwanews24

ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…

2 days ago