Featured

ಕರ್ನಾಟಕ ಮಾದರಿ ಅನುಸರಿಸಿ ಅಸ್ಸಾಂ ಚುನಾವಣೆ ಗೆಲ್ಲುತ್ತೀರಿ ಎಂದು AI ಹೇಳುತ್ತದೆ : ಬಿಜೆಪಿ ಕಾಲೆಳೆದ ಡಿಸಿಎಂ – vishwanews24

ಕರ್ನಾಟಕ ಮಾದರಿ ಬಳಸಿ ಅಸ್ಸಾಂ ಚುನಾವಣೆ ಗೆಲ್ಲಬಹುದೆಂದು AI ಹೇಳುತ್ತದೆ: ವಿಪಕ್ಷ ಸದಸ್ಯರ ಕಾಲೆಳೆದ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಅಸ್ಸಾಂಗೆ ಹೋದಾಗ, ಅಲ್ಲಿನ ಚುನಾವಣೆ ಗೆಲ್ಲುವುದು ಹೇಗೆ ಎಂದು ಎಐ (ಕೃತಕ ಬುದ್ಧಿಮತ್ತೆ) ಮೂಲಕ ಪ್ರಶ್ನೆ ಕೇಳಿದೆ, ಅದಕ್ಕೆ ನೀವು ಕರ್ನಾಟಕ ಮಾದರಿ ಅನುಸರಿಸಿ ಅಸ್ಸಾಂ ಚುನಾವಣೆ ಗೆಲ್ಲುತ್ತೀರಿ ಎಂದು ಎಐ ಹೇಳುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಜೆಪಿ ಸದಸ್ಯರ ಕಾಲೆಳೆದರು.

ವಿಧಾನಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ, ರಾಜ್ಯದಲ್ಲಿ ಆಡಳಿತ ಸುಧಾರಣೆ ಕುರಿತು ಎಐ(ಕೃತಕ ಬುದ್ಧಿಮತ್ತೆ) ಬಳಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಈಗ ನಾವೆಲ್ಲರೂ ಎಐ ಹೊಸಯುಗಕ್ಕೆ ಕಾಲಿಡುತ್ತಿದ್ದೇವೆ. ಈ ಬಗ್ಗೆ ಪ್ರಪಂಚದೆಲ್ಲೆಡೆ ಚರ್ಚೆಯಾಗುತ್ತಿದ್ದು, ಪ್ರಧಾನಮಂತ್ರಿಗಳು ಈ ವಿಚಾರವಾಗಿ ದೊಡ್ಡ ಸಮ್ಮೇಳನ ನಡೆಸಿದರು. ನ್ಯಾಯಾಲಯಗಳಲ್ಲಿ ಇದರ ಬಳಕೆ ಬಗ್ಗೆ ಚರ್ಚೆ ಮಾಡಲಾಗಿದೆ. ಸಿಬಿಎಸ್ಸಿ ಪಠ್ಯಕ್ರಮದಲ್ಲಿ 3ರಿಂದ 8ನೇ ತರಗತಿವರೆಗೆ ಈ ವಿಚಾರವನ್ನು ಪಠ್ಯದಲ್ಲಿ ಸೇರಿಸಲು ತಿಳಿಸಲಾಗಿದೆ ಎಂದರು.

ಇದನ್ನೂ ಓದಿ :

ಆಡಳಿತದಲ್ಲಿ ಈ ಕೃತಕಬುದ್ಧಿಮತ್ತೆ ಬಳಕೆ ಬಗ್ಗೆ ತೀರ್ಮಾನ ಮಾಡುವ ಮುನ್ನ ದೊಡ್ಡ ಸಂಶೋಧನೆ ಆಗಬೇಕು. ಸಂಶೋಧನೆಯಾಗದೇ ಈ ಬಗ್ಗೆ ತೀರ್ಮಾನ ಮಾಡುವುದು ಕಷ್ಟ. ಪರಿಷತ್ ಸಭಾಪತಿಗಳು ಸದನದ ಕಡತಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್ ಗೆ ಹಾಕಿದರೆ ಅಲ್ಲವೇ ಡಿಜಿಟಲ್ ಆಗಿ ರೂಪುಗೊಳ್ಳುವುದು. ಅದೇ ರೀತಿ ಕೃತಕಬುದ್ಧಿಮತ್ತೆಯಲ್ಲಿ ಹೊಸದಾಗಿ ಏನನ್ನೂ ಸೃಷ್ಟಿ ಮಾಡಲು ಆಗುವುದಿಲ್ಲ. ನೀವು ಅದರಲ್ಲಿ ಏನು ಹಾಕುತ್ತೀರೋ ಅದೇ ಹೊರಗೆ ಬರುತ್ತದೆ. ಈ ವಿಚಾರವಾಗಿ ತೀರ್ಮಾನ ಮಾಡುವುದು ಕಷ್ಟ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ನಾನು ಕಾರ್ಯಕ್ರಮವೊಂದರ ಭಾಷಣ ವಿಚಾರವಾಗಿ ನನ್ನ ಪಿಎಗೆ ಕರೆ ಮಾಡಿ ಕೇಳುವಾಗ, ನೀವು ಅದನ್ನು ಯಾಕೆ ಕೇಳುತ್ತೀರಿ, ಚಾಟ್ ಜಿಪಿಟಿಯಲ್ಲಿ ಹಾಕಿ ಎಂದು ನನ್ನ ಮಗಳು ಹೇಳಿದಳು. ಆಗ ನನಗೆ ಸಾಕಷ್ಟು ಮಾಹಿತಿಗಳು ಸಿಕ್ಕವು. ನಾನು ಈ ರೀತಿ ಕೃತಕಬುದ್ಧಿಮತ್ತೆ ಬಳಕೆ ವಿಚಾರದಲ್ಲಿ ಸಾಕಷ್ಟು ಪ್ರಯೋಗ ಮಾಡಿದ್ದೇನೆ. ಆದರೆ, ನಿಖರತೆ ಇನ್ನಷ್ಟು ಸುಧಾರಿಸಬೇಕಾಗಿದೆ. ಈ ವಿಚಾರದ ಬಗ್ಗೆ ಸಭಾಪತಿಗಳೇ ಸಂಶೋಧನೆ ಮಾಡಲಿ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಇದನ್ನೂ ಓದಿ :

ಸದನದಲ್ಲಿರುವ ದಾಖಲೆಗಳನ್ನು ಕಂಪ್ಯೂಟರ್‍ಗೆ ಅಪ್‍ಲೋಡ್ ಮಾಡದೇ ನಿಮಗೆ ಮಾಹಿತಿ ಸಿಗಲು ಹೇಗೆ ಸಾಧ್ಯ? ನ್ಯಾಯಾಲಯದಲ್ಲಿ ಈ ಹಿಂದೆ ಬಂದಿರುವ ತೀರ್ಪುಗಳನ್ನು ಅಪ್‍ಲೋಡ್ ಮಾಡಿದಾಗ ಮಾತ್ರ ಅದರಲ್ಲಿ ಮಾಹಿತಿ ಸಿಗುತ್ತದೆ. ಹಾಗೆಂದು ಅವುಗಳನ್ನೇ ಆಧರಿಸಿ ತೀರ್ಪು ಬರೆಯಲು ಆಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.

ನಾನು ಅಸ್ಸಾಂಗೆ ಹೋದಾಗ ಅಲ್ಲಿನ ಚುನಾವಣೆ ಗೆಲ್ಲುವುದು ಹೇಗೆ ಎಂದು ಎಐ ಕೇಳಿದೆ. ಅದು ಹೇಳಿದ್ದನ್ನೆಲ್ಲಾ ಇಟ್ಟುಕೊಂಡು ನಾವು ಚುನಾವಣೆ ಮಾಡಲು ಆಗುತ್ತಾ? ಬೇಕಾದರೆ ನೀವೂ ನನ್ನ ಜೊತೆ ಸದನದ ಹೊರಗೆ ಬನ್ನಿ ಎಐ ಹೇಳಿದ್ದನ್ನು ನಾನೇ ಮೊಬೈಲ್‍ನಲ್ಲಿ ತೋರಿಸುತ್ತೇನೆ ಎಂದ ಅವರು, ಈ ಮೂಲಕ ಅಸ್ಸಾಂ ಚುನಾವಣೆ ಗೆಲ್ಲಲು ಕರ್ನಾಟಕ ಮಾಡೆಲ್ ಅನುಸರಿಸಿ ಅಂತ ಎಐ ತೋರಿಸುತ್ತದೆ ಎಂದು ಡಿ.ಕೆ.ಶಿವಕುಮಾರ್ ವಿಪಕ್ಷ ಸದಸ್ಯರ ಕಾಲೆಳೆದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

22 hours ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

22 hours ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

23 hours ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

1 day ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

1 day ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

1 day ago