Featured

ಕಲ್ಲಡ್ಕ: ಕಾರಿನೊಳಗೆ ಕುಳಿತ ಸ್ಥಿತಿಯಲ್ಲಿಯೇ ಯುವಕ ಮೃತ್ಯು – Vishwanews24

ಕಲ್ಲಡ್ಕ: ಕಾರಿನೊಳಗೆ ಕುಳಿತ ಸ್ಥಿತಿಯಲ್ಲಿಯೇ ಯುವಕ ಮೃತ್ಯು

ಕಲ್ಲಡ್ಕ: ಕಾರಿನೊಳಗೆ ವ್ಯಕ್ತಿಯೋರ್ವನು ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.ಗೋಳ್ತಮಜಲು ಗ್ರಾಮದ ‌ಹೊಸೈಮಾರ್ ನಿವಾಸಿ ಜಗದೀಶ್ ಮೃತಪಟ್ಟ ಯುವಕ.

ಜಗದೀಶ್ ವೃತ್ತಿಯಲ್ಲಿ ಚಾಲಕನಾಗಿದ್ದು , ಕಳೆದ ಕೆಲವು ವರ್ಷಗಳ ಹಿಂದೆ ವಿಡಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು.ಭಾನುವಾರ ಬೆಳಿಗ್ಗೆ ಬಾವನ ಜೊತೆ ಬೆಳಿಗ್ಗೆ ತರವಾಡು ಮನೆಯಲ್ಲಿ ದೈವದ ಕಾರ್ಯಕ್ಕೆ ಮಕ್ಕಳ ಜೊತೆ ಹೋಗಿದ್ದರು. ವಾಪಾಸು ಮನೆಗೆ ಬರುವ ವೇಳೆ ಕಲ್ಲಡ್ಕ ತಲುಪಿದಾಗ ಸುಮಾರು 1.30 ಗಂಟೆಗೆ ಕಾರು ಚಲಾಯಿಸಲು ಕಷ್ಟವಾಗುತ್ತಿದೆ ಎಂದು ಬಾವನಲ್ಲಿ ಹೇಳಿದ್ದು ನಾನು ಮತ್ತೆ ಮನೆಗೆ ಬರುತ್ತೇನೆ ನೀವು ‌‌ಮಕ್ಕಳ ಜೊತೆ ಮನೆಗೆ ಹೋಗಿ ಎಂದು ‌ಕಳುಹಿಸಿ, ಕಾರಿನ ಸೀಟಿನಲ್ಲಿಯೇ ಮಲಗಿದ್ದರು.

ಆದರೆ ರಾತ್ರಿ ‌7 ಗಂಟೆಯಾದರೂ ಈತ ಮನೆಗೆ ಬಾರದ ಹಿನ್ನೆಲೆಯಲ್ಲಿ ಮತ್ತೆ ಬಂದು ನೋಡಿದಾಗ ಕಾರಿನ ಸೀಟಿನಲ್ಲಿ ಕುಳಿತು ಮಲಗಿದ ಸ್ಥಿತಿಯಲ್ಲಿರುವುದು ಹೊರಗಿನಿಂದ ಕಂಡುಬಂದಿದೆ.

ಕಾರಿನ ಗ್ಲಾಸ್ ಹಾಕಿ ಮಲಗಿದ್ದರಿಂದ ಕಾರಿನ ಡೋರ್ ಓಪನ್ ಮಾಡಿದಾಗ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.

ಕಾರಿನ ಕಿಟಕಿ ,ಬಾಗಿಲನ್ನು ಮುಚ್ಚಿ ಮಲಗಿದ್ದರಿಂದ ಗಾಳಿ ಇಲ್ಲದೆ ಸಾವನ್ನಪ್ಪಿರುವುದೇ? ಅಥವಾ ಇನ್ನಾವುದೇ ಕಾಯಿಲೆಯಿಂದ ಮೃತಪಟ್ಟಿದ್ದಾನಾ? ಎಂಬುದು ವೈದ್ಯಕೀಯ ರಿಪೋರ್ಟ್ ಹಾಗೂ ಪೊಲೀಸ್ ತನಿಖೆಯ ಬಳಿಕ ತಿಳಿಯಬೇಕಾಗಿದೆ.

Vishwa News 24

Recent Posts

SSLC ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ – vishwanews24

SSLC ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಬೆಂಗಳೂರು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು,ಈ…

15 hours ago

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ – vishwanews24

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ನಡೆಸಿದ…

15 hours ago

ಉಡುಪಿ: ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ ಪುನರಾರಂಭ – vishwanews24

ಉಡುಪಿ: ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ ಪುನರಾರಂಭ ಉಡುಪಿ : ಹಲವು ದಿನಗಳಿಂದ ಉಡುಪಿಯಲ್ಲಿ ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ…

16 hours ago

ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ – vishwanews24

ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದಿಂದ ರಸಗೊಬ್ಬರ  ಕಚ್ಚಾವಸ್ತುಗಳ ಕೊರತೆಯ ಆತಂಕ ಎದುರಾಗಿದೆ. ಈ…

17 hours ago

ನಾಳೆ SSLC ಫಲಿತಾಂಶ  ಪ್ರಕಟ – vishwanews24

ನಾಳೆ SSLC ಫಲಿತಾಂಶ  ಪ್ರಕಟ ಬೆಂಗಳೂರು: ನಾಳೆ ಎಸ್‌ಎಸ್‌ಎಲ್‌ಸಿ ಫಲಿತಾಂಶ  ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.…

1 day ago

ಕಾಪು : ಸ್ಕೂಟಿ ಹಿಂಬದಿಗೆ ತಡೆರಹಿತ ಬಸ್‌ ಢಿಕ್ಕಿ ; ಬಾಲಕಿ ಸಾವು -vishwanews24

ಕಾಪು : ಸ್ಕೂಟಿ ಹಿಂಬದಿಗೆ ತಡೆರಹಿತ ಬಸ್‌ ಢಿಕ್ಕಿ - ಬಾಲಕಿ ಸಾವು ಕಾಪು : ಸರ್ವಿಸ್‌ ರಸ್ತೆಯಿಂದ ರಾಷ್ಟ್ರೀಯ…

2 days ago