Featured

ಕಳೆದ 8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ ಮಾಡಿದ್ದೇ ಮೋದಿಯವರ ಸಾಧನೆ : ದಿನೇಶ್ ಗುಂಡುರಾವ್ – Vishwanews24

ಮೋದಿ ಆಡಳಿತದಲ್ಲಿ ಭಾರತ ಸಾಲದಲ್ಲಿ ವಿಶ್ವಗುರು ಆಗಿದೆ ..

ಬೆಂಗಳೂರು: ಮೋದಿ ಆಡಳಿತದಲ್ಲಿ ಭಾರತ ಸಾಲದಲ್ಲಿ ವಿಶ್ವಗುರು ಆಗಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಅವರು ” ಕಳೆದ 8 ವರ್ಷಗಳಲ್ಲಿ 98 ಲಕ್ಷ ಕೋಟಿ ಸಾಲ ಮಾಡಿದ್ದೇ ಮೋದಿಯವರ ಸಾಧನೆ. ಯುಪಿಎ ಆಡಳಿತದ ಅಂತ್ಯಕ್ಕೆ ಭಾರತದ ಸಾಲ 63,583 ಕೋಟಿ ಇತ್ತು.ಆದರೆ ಮೋದಿಯವರು ಕೇವಲ‌ 8 ವರ್ಷದಲ್ಲಿ ಸಾಲದ ಪ್ರಮಾಣ 1.40 ಲಕ್ಷ ಕೋಟಿಗೆ ಏರಿಸಿದ್ದಾರೆ.ಈ ಸಾಲ ಮಾಡಿರುವುದು ಯಾರ ಉದ್ಧಾರಕ್ಕೆ ಎಂದು ಪ್ರಶ್ನಿಸಿದ್ದಾರೆ.

ಸಾಲ‌‌ ಮಾಡಿ ತುಪ್ಪ ತಿನ್ನುವಂತೆ ಮೋದಿ ಆಡಳಿತದಲ್ಲಿ ಗೊತ್ತು ಗುರಿಯಿಲ್ಲದೆ ಸಾಲ ಮಾಡಲಾಗಿದೆ.ಈ ಸಾಲದಲ್ಲಿ ತುಪ್ಪ ತಿನ್ನುತ್ತಿರುವವರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಜಿಡಿಪಿ ಕುಸಿದಿದೆ.ಅಭಿವೃದ್ಧಿ ಶೂನ್ಯವಾಗಿದೆ.ಹಾಗಾದರೆ ಆ ಸಾಲ ಎಲ್ಲಿಗೆ ಖರ್ಚಾಗುತ್ತಿದೆ. ಪಿಎಂಕೇರ್ಸ್ ನಂತೆ ಯಾವುದಾದರೂ ಉಂಡೆನಾಮದ ಸ್ಕೀಮ್‌ಗೆ ಹಣ ಬಳಕೆಯಾಗುತ್ತಿದೆಯೆ ಎಂದು ಪ್ರಶ್ನಿಸಿದ್ದಾರೆ.

ಮನ್‌ಮೋಹನ್ ಸಿಂಗ್ ಸರ್ಕಾರವಿದ್ದಾಗ ಜನರಿಗೆ ಗ್ಯಾಸ್ ಸಬ್ಸಿಡಿ, ರಸಗೊಬ್ಬರ ಸಬ್ಸಿಡಿ, ತೈಲಗಳ ಮೇಲೆ ಅತಿಕಡಿಮೆ ತೆರಿಗೆ ಹಾಗೂ ಅಬಕಾರಿ ಸುಂಕ ವಿಧಿಸಲಾಗುತಿತ್ತು.ಅಷ್ಟಾದರೂ ದೇಶದ ಸಾಲ 76 ಲಕ್ಷ ಕೋಟಿ ದಾಟಿರಲಿಲ್ಲ.ಈ ಸರ್ಕಾರದಲ್ಲಿ ಬಹುತೇಕ ಸಬ್ಸಿಡಿಗಳು ರದ್ದಾಗಿವೆ. ತೈಲಗಳ ಮೇಲೆ ವಿಪರೀತ ಎನ್ನುವಷ್ಟು ತೆರಿಗೆ ವಿಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮೋದಿಯವರು ಕಾಂಗ್ರೆಸ್ ಮಾಡಿದ ಸಾಲ ತೀರಿಸುತ್ತಿದ್ದಾರೆ ಎಂದು ಬಿಜೆಪಿ ಭಕ್ತರು, ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಹರಡುತ್ತಿದ್ದಾರೆ. ವಾಸ್ತವವಾಗಿ 2014 ರವರೆಗೆ ಇದ್ದ ದೇಶದ ಒಟ್ಟು ಸಾಲದ ಮೊತ್ತವೇ 76 ಲಕ್ಷ ಕೋಟಿ.‌ಆದರೆ ಮೋದಿ 8 ವರ್ಷದಲ್ಲಿ 98 ಲಕ್ಷ ಕೋಟಿ ಹೆಚ್ಚವರಿ ಸಾಲ ಮಾಡಿದ್ದಾರೆ.ಹೀಗಿರುವಾಗ ಮೋದಿ ಯಾರ ಸಾಲ ತೀರಿಸುತ್ತಿದ್ದಾರೆ?

ಮೋದಿ ಆಡಳಿತದಲ್ಲಿ ಆರ್ಥಿಕ ಶಿಸ್ತು ಹಳ್ಳ ಹಿಡಿದಿದೆ ಎಂಬುದಕ್ಕೆ ಈ ಸರ್ಕಾರ ಮಾಡಿರುವ ಸಾಲದ ಪ್ರಮಾಣವೇ ಸಾಕ್ಷಿ. ಮೋದಿಯವರು‌ ಮಾಡಿರುವ ಸಾಲದ ಎಫೆಕ್ಟ್ ಹೇಗಿದೆಯೆಂದರೆ, ಅಸಲು ಹೋಗಲಿ, ಬಡ್ಡಿ ಕಟ್ಟಲು ಸಾಧ್ಯವಿಲ್ಲದಷ್ಟು ವಿಪರೀತವಾಗಿದೆ. ಇದು ದೇಶ ದಿವಾಳಿಯಾಗುತ್ತಿರುವ ಪ್ರಾಥಮಿಕ ಲಕ್ಷಣ. ಇನ್ನಾದರೂ ಬಿಜೆಪಿ ಭಕ್ತರು ಮೋದಿ ಭ್ರಮೆಯಿಂದ ಹೊರಬರಲಿ ಎಂದು ಹೇಳಿದ್ದಾರೆ

Vishwa News 24

Recent Posts

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 hours ago

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ – vishwanews24

ಕನ್ನಡ ಸಿನಿಮಾ ನಿರ್ಮಾಪಕ ಬಾ.ಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ ಬೆಂಗಳೂರು: ಕನ್ನಡ ಸಿನಿಮಾ ರಂಗದ ಖ್ಯಾತ ನಿರ್ಮಾಪಕ ಬಾ.ಮಾ.…

2 hours ago

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

4 hours ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

4 hours ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

5 hours ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

5 hours ago