ಉಡುಪಿ: ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಡಿಕೆ ಸದಾನಂದ ಗೌಡ ಅವರಿಗೆ ಅಚ್ಚರಿ ಎಂಬಂತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್ ಮುಖ್ಯಸ್ಥ ಡಿ ಕೆ ಶಿವಕುಮಾರ್ ಆಫರ್ ನೀಡಿದ್ದಾರೆ.
ಹಾಲಿ ಸಂಸದ ಡಿವಿ ಸದಾನಂದಗೌಡ ಅವರನ್ನು ಬದಿಗೊತ್ತಿ ಬೆಂಗಳೂರು ಉತ್ತರ ಬಿಜೆಪಿ ಟಿಕೆಟ್ ಶೋಭಾ ಕರಂದ್ಲಾಂಜೆ ಅವರಿಗೆ ನೀಡಿದೆ. ಶೋಭಾ ಅವರು ಬೆಂಗಳೂರಿನ ಸದಾನಂದ ಗೌಡರನ್ನು ಅವರ ನಿವಾಸಕ್ಕೆ ಭೇಟಿ ಮಾಡಿ ಬೆಂಬಲ ಕೋರಿದರು.
ಈ ಬೆಳವಣಿಗೆಯ ಬೆನ್ನಲ್ಲೇ ಇದೀಗ ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ಡಿವಿ ಸದಾನಂದಗೌಡ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಆಫರ್ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಟಿಕೆಟ್ ಹಂಚಿಕೆ ಬಳಿಕ ಸ್ವಪಕ್ಷದ ಮೇಲೆ ಲಿಂಗಾಯತ, ಕುರುಬ ಸಮುದಾಯ ಬಂಡಾಯವೆದ್ದಿದೆ. ಈಗ ಡಿವಿ ಸದಾನಂದಗೌಡರು ಕೂಡ ಬಂಡಾಯವೆದ್ದರೆ ರಾಜ್ಯದ ಪ್ರಮುಖ ಸಮುದಾಯವೊಂದರ ಬಂಡಾಯವನ್ನು ಬಿಜೆಪಿ ಎದುರಿಸಬೇಕಿದೆ. ಇದನ್ನೇ ಎನ್ಕ್ಯಾಚ್ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದ್ದು, ಸದಾನಂದ ಗೌಡರನ್ನು ಪಕ್ಷಕ್ಕೆ ಎಳೆದು ತರುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದೆ. ಡಿ.ವಿ ಸದಾನಂದ ಗೌಡ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸಿದರೆ ಒಕ್ಕಲಿಗ ಮತಗಳನ್ನು ಪಕ್ಷಕ್ಕೆ ಸೆಳೆಯಬಹುದು ಎಂಬುದು ಡಿಕೆ ಶಿವಕುಮಾರ್ ಲೆಕ್ಕಾಚಾರ. ಟಿಕೆಟ್ ಘೋಷಿಸದ ಬೆಂಗಳೂರು ಉತ್ತರ, ಮೈಸೂರು, ದಕ್ಷಿಣ ಕನ್ನಡ ಈ ಮೂರರಲ್ಲಿ ಯಾವುದಾರು ಕ್ಷೇತ್ರದಿಂದ ಡಿ.ವಿ ಸದಾನಂದ ಗೌಡ ಅವರನ್ನು ಕಣಕ್ಕಿಳಿಸುವ ಯೋಚನೆಯಲ್ಲಿದೆ ಕಾಂಗ್ರೆಸ್. ಈ ಬಗ್ಗೆ ಅವರಿಗೆ ಆಫರ್ ನೀಡಲಾಗಿದೆ. ಹೀಗಾಗಿ ಇಷ್ಟು ವರ್ಷ ಎಲ್ಲವನ್ನೂ ಕೊಟ್ಟಿರುವ ಪಕ್ಷವನ್ನು ಬಿಟ್ಟು ಡಿ.ವಿ ಸದಾನಂದ ಗೌಡ ಕೈ ಹಿಡಿತಾರಾ ಎಂಬುದನ್ನು ಕಾದುನೋಡಬೇಕಿದೆ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…