Featured

ಕಾಂಗ್ರೆಸ್‌ ಎಂದಿಗೂ ಜಾತಿ, ಧರ್ಮದ ಜೊತೆಯಲ್ಲಿ ಆಟವಾಡಿದ ಪಕ್ಷವಲ್ಲ; ಪ್ರೀತಿ- ಪ್ರೇಮದ ಜೊತೆ ಬೆರೆತ ಪಕ್ಷ

ಕಾಂಗ್ರೆಸ್‌ ಪಕ್ಷಕ್ಕೆ ಸೋಲಿಲ್ಲ, ಸೋಲಲು ಸಾಧ್ಯವಿಲ್ಲ..

ಮುಂಬರುವ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುವುದು ಶತಸಿದ್ಧ..

ಸವಣೂರ:  ಕಾಂಗ್ರೆಸ್‌ ಪಕ್ಷ ಎಂದಿಗೂ ಜಾತಿ, ಧರ್ಮದ ಜೊತೆಯಲ್ಲಿ ಆಟವಾಡಿದ ಪಕ್ಷವಲ್ಲ. ಪ್ರೀತಿ- ಪ್ರೇಮದ ಜೊತೆಯಲ್ಲಿ ಬೆರೆತ ಪಕ್ಷವಾಗಿದೆ ಎಂದು ಮಾಜಿ ಸಚಿವೆ ಜಯಮಾಲಾ ತಿಳಿಸಿದರು.

ಪಟ್ಟಣದ ಶಾದಿ ಮಹಲ್‌ನಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಡಿಜಿಟಲ್‌ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರನ್ನು ಪಕ್ಷದ ಸದಸ್ಯರನ್ನಾಗಿ ಮಾಡಿ ಅವರಿಗೆ ಸರ್ಕಾರ ರೂಪಿಸುವ ಎಲ್ಲ ಯೋಜನೆಗಳು ತಲುಪುವಂತೆ ಮಾಡಬೇಕಿದೆ. ಮುಂಬರುವ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಈ ಬಾರಿ ಅಧಿಕಾರಕ್ಕೆ ಬರುವುದು ಶತಸಿದ್ಧ. ಹಾವೇರಿ(Haveri) ಜಿಲ್ಲೆಯಲ್ಲಿರುವ 6 ಕ್ಷೇತ್ರಗಳಲ್ಲಿಯೂ ಗೆಲುವನ್ನು ಸಾಧಿಸಲಿದೆ.

ಕಾರ್ಯಕರ್ತರು ಸೋತಿದ್ದೇವೆ ಎಂಬ ಮನೋಭಾವನೆ ಬದಿಗಿಟ್ಟು ಕಾರ್ಯ ನಿರ್ವಹಿಸಿ. ಕಾಂಗ್ರೆಸ್‌ ಪಕ್ಷಕ್ಕೆ ಸೋಲಿಲ್ಲ, ಸೋಲಲು ಸಾಧ್ಯವಿಲ್ಲ. ಭಾರತದ ಆಯಸ್ಸು ಮತ್ತು ಪಕ್ಷದ ಆಯಸ್ಸು ಒಂದೇ ರೀತಿ ಇರುವಾಗ ಸೋಲಿನ ಮಾತಿಲ್ಲ. ಪ್ರತಿ ಮನೆಮನಗಳಿಗೆ ತೆರಳಿ ಬೂತ್‌ ಮಟ್ಟದಲ್ಲಿ ಸಂಘಟನೆಗಳನ್ನು ಬಲಪಡಿಸಿ, ಡಿಜಿಟಲ್‌ ಸದಸ್ಯತ್ವ ಅಭಿಯಾನದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿದಲ್ಲಿ ಸದಸ್ಯತ್ವ ಅಭಿಯಾನ ಬಲಗೊಳ್ಳಲಿದೆ.

 

 

Vishwa News 24

Recent Posts

ಹಿಂದಿ ಕಿರುತೆರೆ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…

9 minutes ago

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್.ಡಿ. ಕುಮಾರಸ್ವಾಮಿ- vishwanews24

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಶಬರಿಮಲೆ  ಯಾತ್ರೆ ಕೈಗೊಂಡಿದ್ದಾರೆ.…

1 hour ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಆತಂಕಬೇಡ :ಸಿಎಂ ಡಿಕೆಶಿ ಭರವಸೆ  – vishwanews24

ಎಲ್ಲಾ ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಯಲಿವೆ : ಸಿಎಂ ಡಿಕೆಶಿ ಸ್ಪಷ್ಟನೆ ಬೆಂಗಳೂರು :ಫಲಾನುಭವಿಗಳು ಯಾವುದೇ ಆತಂಕಪಡಬೇಕಾದ ಅಗತ್ಯವಿಲ್ಲ, ಎಲ್ಲಾ…

1 hour ago

ಉಡುಪಿ: ಪೆರ್ಡೂರು ಸಂಜೀವಿನಿ ಒಕ್ಕೂಟಕ್ಕೆ ಲಕ್ಷಾಂತರ ರೂ.ವಂಚನೆ ; ದೂರು ದಾಖಲು – vishwanews24

ಉಡುಪಿ: ಪೆರ್ಡೂರು ಸಂಜೀವಿನಿ ಒಕ್ಕೂಟಕ್ಕೆ ಲಕ್ಷಾಂತರ ರೂ.ವಂಚನೆ ; ದೂರು ದಾಖಲು ಹಿರಿಯಡ್ಕ: ಪೆರ್ಡೂರು ಪದ್ಮ ಕಮಲ ಸಂಜೀವಿನಿ ಗ್ರಾಮ…

2 hours ago

ಹಿರಿಯ ಲೇಖಕಿ ಇಂದಿರಾ ಲಂಕೇಶ್ ನಿಧನ – vishwanews24

ಹಿರಿಯ ಲೇಖಕಿ ಇಂದಿರಾ ಲಂಕೇಶ್ ನಿಧನ ಬೆಂಗಳೂರು: ಹಿರಿಯ ಲೇಖಕಿ ಹಾಗೂ ಖ್ಯಾತ ಪತ್ರಕರ್ತ ದಿವಂಗತ ಪಿ. ಲಂಕೇಶ್ ಅವರ…

2 hours ago

ಕೇರಳದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ‘ಪ್ರಿಯದರ್ಶಿನಿ’ ಯೋಜನೆಗೆ ಸಿಎಂ ಚಾಲನೆ – vishwanews24

ಕೇರಳದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ‘ಪ್ರಿಯದರ್ಶಿನಿ’ ಯೋಜನೆಗೆ ಸಿಎಂ ಚಾಲನೆ ತಿರುವನಂತಪುರಂ: ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ…

2 hours ago