ಮೈಸೂರು: ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಮಾತನ್ನ ಕೇಳಿ ನಾನು ಕಾಂಗ್ರೆಸ್ ಜೊತೆ ಸೇರಿದೆ, ನಂತರ ಕಾಂಗ್ರೆಸ್ನವರು ನನ್ನನ್ನ ಸರ್ವನಾಶ ಮಾಡಿದರು ಅಂತಾ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ.. 2006/2007 ರಲ್ಲಿ ನಾನು ಗುಡ್ವಿಲ್ ಪಡೆದುಕೊಂಡಿದ್ದೆ. ರಾಜಕೀಯ ಹಸ್ತಾಂತರದ ಮಧ್ಯೆಯೂ ನಾನು ಒಂದು ಒಳ್ಳೆಯ ಅಭಿಪ್ರಾಯವನ್ನ ಇಟ್ಟುಕೊಂಡಿದ್ದೆ. 12 ವರ್ಷ ನನ್ನನ್ನ ಸಾಕಿದರು. ಈ ಕಾಂಗ್ರೆಸ್ನವರ ಸಹವಾಸ ಮಾಡಿ, ದೇವೇಗೌಡರ ಮಾತನ್ನ ಕಟ್ಟಿಕೊಂಡು.. ಪಾಪ ನಾನು ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಲ್ಲ. ಕಾರಣ ಅವರಿಗೆ ಸೆಕ್ಯೂಲರ್ ಬಗ್ಗೆ ವ್ಯಾಮೋಹ ಇತ್ತು. ಅವರದ್ದೇ ಆದ ಕಮಿಟ್ಮೆಂಟ್ ಇತ್ತು. ಅವರ ಭಾವನೆಯನ್ನ ಧಿಕ್ಕರಿಸಬಾರದು ಅಂತಾ ಈ ವಯಸ್ಸಲ್ಲಿ ಅವರಿಗೆ ನೋವು ಮಾಡಬಾರದು ಅಂತಾ ನಾನು ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದೆ. ನನ್ನ ಗುಡ್ವಿಲ್ ಅನ್ನ ಸರ್ವನಾಶ ಮಾಡಿದವರು ಈ ಸಿದ್ದರಾಮಯ್ಯನವ್ರ ಗುಂಪು ಅಂತಾ ಆರೋಪಿಸಿದರು.
ಸಿದ್ಧರಾಮಯ್ಯ ಅವರ ಕುತಂತ್ರ ಹಾಗೂ ಹೆಚ್ ಡಿ ದೇವೇಗೌಡರ ಭಾವನಾತ್ಮಕ ಮಾತಿಗೆ ಕಟ್ಟುಬಿದ್ದು ನಾನು ಹೆಸರು ಕೆಡಿಸಿಕೊಂಡೆ. ನಾನು ಅವರ ಮಾತನ್ನು ಕೇಳದೇ ಬೇರೆಯ ನಿರ್ಧಾರವನ್ನು ಮಾಡಿದ್ದೇ ಆಗಿದ್ದರೇ, ಈಗಲೂ ನಾನು ಮುಖ್ಯಮಂತ್ರಿ ಆಗಿರುವ ಅವಕಾಶ ಇರುತ್ತಿತ್ತು ಎಂದರು.
2006ರಲ್ಲಿ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ನನಗೆ ಒಳ್ಳೆಯ ಹೆಸರು ಇತ್ತು. ಇದೇ ಕಾರಣದಿಂದಾಗಿ ನನ್ನನ್ನು ಈ ರಾಜ್ಯದ ಜನರು 12 ವರ್ಷ ಸಾಕಿದರು. ಆದ್ರೇ ನನ್ನ ಹೆಸರು ಕೆಡಿಸಲೆಂದು ಕಾಂಗ್ರೆಸ್ ಹೆಣೆದ ಬಲೆಯಲ್ಲಿ ಸಿಲುಕಿದೆ. ಜೊತೆಗೆ ದೇವೇಗೌಡರ ಮಾತು ಕೇಳಿ, ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಹೆಸರು ಕೆಡಿಸಿಕೊಂಡೆ. ಮತ್ತೆಂದು ಇಂತಹ ತಪ್ಪು ಮಾಡುವುದಿಲ್ಲ ಎಂಬುದಾಗಿ ಹೇಳಿದರು.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…