ಕಾಂಗ್ರೆಸ್ ಪಕ್ಷಕ್ಕೆ ಮತದಾರರ ಹೃದಯ ಮತ್ತು ಪ್ರೀತಿಯೇ ಮುಖ್ಯ; ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ ತೋರಿಸುತ್ತೇವೆ.. : ಡಿ.ಕೆ ಶಿವಕುಮಾರ್ -Vishwanews24

ರಾಜ್ಯದಲ್ಲಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ಈ ಉಪ ಚುನಾವಣೆ ಮೂಲಕ ತಕ್ಕ ಉತ್ತರ ನೀಡಬೇಕಿದೆ : ಡಿ.ಕೆ ಶಿವಕುಮಾರ್ -Vishwanews24

ಕಾಂಗ್ರೆಸ್ ಪಕ್ಷಕ್ಕೆ ಮತದಾರರ ಹೃದಯ ಮತ್ತು ಪ್ರೀತಿಯೇ ಮುಖ್ಯ..

ಚುನಾವಣೆಯಲ್ಲಿ ಗೆಲುವು ಸಾಧಿಸಿ ತೋರಿಸುತ್ತೇವೆ..

ಬೀದರ್ : ಅಧಿಕಾರ ಎನ್ನುವುದು ಯಾವತ್ತು ಶಾಶ್ವತವಲ್ಲ, ಅದು ನೀರ ಮೇಲಿನ ಗುಳ್ಳೆ ಇದ್ದಂತೆ. ರಾಜ್ಯದಲ್ಲಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ಈ ಉಪ ಚುನಾವಣೆ ಮೂಲಕ ತಕ್ಕ ಉತ್ತರ ನೀಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಬಸವಕಲ್ಯಾಣ ಉಪ ಚುನಾವಣೆ ಹಿನ್ನಲೆಯಲ್ಲಿ ನಗರದ ಎಂ.ಎಂ ಬೇಗ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಸರ್ಕಾರ ಮನೆಗೊಂದು ನಿಗಮ- ಮಂಡಳಿಗಳನ್ನು ಮಾಡಲಿ. ಕಾಂಗ್ರೆಸ್ ಪಕ್ಷಕ್ಕೆ ಮತದಾರರ ಹೃದಯ ಮತ್ತು ಪ್ರೀತಿಯೇ ಮುಖ್ಯ. ಅದರಿಂದಲೇ ಚುನಾವಣೆಯಲ್ಲಿ ಗೆಲುವು ಸಾಧಿಸಿ ತೋರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಡವರಿಗೆ ಪಡಿತರ ಅಕ್ಕಿ, ಸಾಲ ಮನ್ನಾದಂಥ ಯೋಜನೆಗಳನ್ನು ಜಾರಿಗೆ ತಂದು ಕಾಂಗ್ರೆಸ್ ಜಾತ್ಯಾತೀತ ಪಕ್ಷ ಎಂಬುದನ್ನು ಅಧಿಕಾರದಲ್ಲಿದ್ದಾಗ ತೋರಿಸಿಕೊಟ್ಟಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಮಾತ್ರ ಎಲ್ಲ ವರ್ಗಕ್ಕೆ ಮಾನ್ಯತೆ ಸಿಕ್ಕಂತಾಗುತ್ತದೆ. ಬಿಜೆಪಿಗೆ ಮತ ಹಾಕಿ ತಪ್ಪು ಮಾಡಿದೇವು ಎಂಬುದನ್ನು ನಾಡಿನ ಜನತೆಗೆ ಈಗ ಮನದಟ್ಟು ಆಗಿದೆ ಎಂದು ಹೇಳಿದರು.

ಉಪ ಚುನಾವಣೆ ವೇಳೆ ಬಿಜೆಪಿ ಸರ್ಕಾರ ತಂತ್ರ, ಹಣದ ಆಮಿಷ್ಯ ಏನೇ ಮಾಡಲಿ. ಬಸವಕಲ್ಯಾಣ ಕ್ಷೇತ್ರದಲ್ಲಿ ದಿ. ನಾರಾಯಣರಾವ್ ಅವರು ಹಣ ಹಂಚಿ ಗೆಲ್ಲಲಿ. ಪ್ರೀತಿ, ವಿಶ್ವಾಸದಿಂದ ಶಾಸಕರಾಗಿ ಜನ ನಾಯಕ ಎನಿಸಿಕೊಂಡಿದ್ದರು. ಆ ಹಾದಿಯಲ್ಲೇ ಕಾಂಗ್ರೆಸ್ ನಡೆದು ಚುನಾವಣೆಯಲ್ಲಿ ಜಯ ಗಳಿಸಲಿದೆ. ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಈ ಚುನಾವಣೆ ಮೂಲಕ ತಕ್ಕ ಉತ್ತರ ನೀಡಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

Vishwa News 24

Recent Posts

ಉಡುಪಿ: ಬಿಜೆಪಿ ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ – vishwanews24

ಉಡುಪಿ: ಬಿಜೆಪಿ ಯುವ ಮೋರ್ಚಾದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋಬ್ಯಾಕ್ ಪ್ರತಿಭಟನೆ ಉಡುಪಿ: ಉಡುಪಿ ಜಿಲ್ಲೆಯನ್ನು ರಾಜ್ಯ ಕಾಂಗ್ರೆಸ್…

6 hours ago

ಮಂಗಳೂರು : ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್ – vishwanews24

ಹಿಜಾಬ್ ನಿಷೇಧ ಹಿಂಪಡೆಯುವ ನಿರ್ಧಾರವನ್ನು ಸ್ವಾಗತಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್.. ಸುಪ್ರೀಂ ಕೋರ್ಟ್‌ನಲ್ಲಿ ಅಧಿಕೃತ ಕ್ರಮಗಳನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಮನವಿ…

6 hours ago

ಟ್ರ್ಯಾಕ್ಟರ್ – ಲಾರಿ ಅಪಘಾತದಲ್ಲಿ ಏಳು ಮಂದಿ ದುರ್ಮರಣ : ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ – vishwanews24

ಟ್ರ‍್ಯಾಕ್ಟರ್ - ಲಾರಿ ಅಪಘಾತದಲ್ಲಿ ಏಳು ಮಂದಿ ದುರ್ಮರಣ : ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ…

6 hours ago

ಡಿಕೆಶಿ ಮುಂದಿನ ಸಿಎಂ ಬ್ಯಾನರ್ : ಕಾರ್ಯಕರ್ತರ ಅಭಿಮಾನ ತಡಯೋಕೆ ಸಾಧ್ಯವಿಲ್ಲ :ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ – vishwanews24

ಡಿಕೆಶಿ ಮುಂದಿನ ಸಿಎಂ ಬ್ಯಾನರ್ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ಉಡುಪಿ: ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟ ವಿಚಾರ.…

7 hours ago

ನಾನು ಮತ್ತೆ ಹೊಸದಾಗಿ ಪಕ್ಷ ಕಟ್ಟುತ್ತೇನೆ ; ಪಕ್ಷ ಬಿಟ್ಟು ಹೋಗುವವರು ಹೋಗಲಿ : ಮಮತಾ ಬ್ಯಾನರ್ಜಿ – vishwanews24

ನಾನು ಮತ್ತೆ ಹೊಸದಾಗಿ ಪಕ್ಷ ಕಟ್ಟುತ್ತೇನೆ ; ಪಕ್ಷ ಬಿಟ್ಟು ಹೋಗುವವರು ಹೋಗಲಿ : ಮಮತಾ ಬ್ಯಾನರ್ಜಿ ಕೋಲ್ಕತ್ತಾ: ಇತರ…

7 hours ago

ಉಡುಪಿ : ಮಲಬಾರ್ ಗೋಲ್ದ್ ನಲ್ಲಿ ಬ್ರಾಂಡ್ ವಾಚ್‌ಗಳ ವಿಶೇಷ ಪ್ರದರ್ಶನ-ಮಾರಾಟ ಮೇಳಕ್ಕೆ ಚಾಲನೆ – vishwanews24

ಉಡುಪಿ : ಮಲಬಾರ್ ಗೋಲ್ದ್ ನಲ್ಲಿ ಬ್ರಾಂಡ್ ವಾಚ್‌ಗಳ ವಿಶೇಷ ಪ್ರದರ್ಶನ-ಮಾರಾಟ ಮೇಳಕ್ಕೆ ಚಾಲನೆ ಉಡುಪಿ: ಮಲಬಾರ್ ಗೋಲ್ಡ್ ಅಂಡ್…

7 hours ago