Featured

ಕಾಂಗ್ರೆಸ್ ಪಕ್ಷ ರೈತ ಹೋರಾಟಗಾರರ ಹಿಂದೆ ಇಲ್ಲ, ಅವರ ಜೊತೆಯಲ್ಲಿದೆ : ಸಿದ್ದರಾಮಯ್ಯ -Vishwanews24

ಕಾಂಗ್ರೆಸ್ ಪಕ್ಷ ರೈತ ಹೋರಾಟಗಾರರ ಹಿಂದೆ ಇಲ್ಲ, ಅವರ ಜೊತೆಯಲ್ಲಿದೆ : ಸಿದ್ದರಾಮಯ್ಯ -Vishwanews24

ಮೋದಿ ಸರ್ಕಾರ ಅನ್ನಕೊಡುವ ರೈತರನ್ನು ಉಗ್ರಗಾಮಿಗಳೆನ್ನುವ ನೀಚಮಟ್ಟಕ್ಕೆ ಇಳಿದಿದೆ..

ಬೆಂಗಳೂರು, : ”ಮೋದಿ ಸರ್ಕಾರ ಅನ್ನಕೊಡುವ ರೈತರನ್ನು ಉಗ್ರಗಾಮಿಗಳೆನ್ನುವ ನೀಚಮಟ್ಟಕ್ಕೆ ಇಳಿದಿದೆ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ”ಕೃಷಿ ವಿರೋಧಿ ಕಾಯಿದೆಗಳ ರದ್ದತಿಗಾಗಿ ಹೋರಾಟ ನಡೆಸುತ್ತಿರುವ ರೈತರನ್ನು ಗೌರವಯುತವಾಗಿ ಕರೆದು, ಪ್ರಾಮಾಣಿಕವಾಗಿ ಮಾತುಕತೆ ನಡೆಸಬೇಕಾಗಿರುವ ನರೇಂದ್ರ ಮೋದಿ ಸರ್ಕಾರ ಕಾಟಾಚಾರದ ಮಾತುಕತೆಯ ಮೂಲಕ ತನ್ನ ಸಹಜ ಸ್ವಭಾವವಾದ ಉದ್ದಟತನ ಮತ್ತು ಅಪ್ರಮಾಣಿಕತೆಯನ್ನು ಪ್ರದರ್ಶಿಸಿದೆ” ಎಂದು ದೂರಿದ್ದಾರೆ.

”ಒಂದೆಡೆ ಗಂಭೀರವಾಗಿ ಮಾತುಕತೆಯನ್ನು ನಡೆಸದೆ, ಇನ್ನೊಂದೆಡೆ ರೈತ ಹೋರಾಟಗಾರರನ್ನು ಭಯೋತ್ಪಾದಕರು, ಉಗ್ರಗಾಮಿಗಳು ಎಂದೆಲ್ಲ ದೂಷಿಸುತ್ತಿರುವ ಬಿಜೆಪಿ ಸರ್ಕಾರ ಸಿಖ್ ಸಮುದಾಯಕ್ಕೆ ಮಾತ್ರವಲ್ಲ, ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.

”ದಲಿತರ ಪರ, ಮಾನವಹಕ್ಕುಗಳ ಪರವಾಗಿ ಹೋರಾಡುವವರನ್ನು ‘ಅರ್ಬನ್ ನಕ್ಸಲ್’ಗಳೆಂದು, ಕೋಮುವಾದದ ವಿರುದ್ಧ ಹೋರಾಡುವವರನ್ನು ದೇಶದ್ರೋಹಿಗಳೆಂದು ದೂಷಿಸುತ್ತ ಬಂದ ನರೇಂದ್ರ ಮೋದಿ ಸರ್ಕಾರ ಈಗ ಅನ್ನಕೊಡುವ ರೈತರನ್ನು ಉಗ್ರಗಾಮಿಗಳೆನ್ನುವ ನೀಚಮಟ್ಟಕ್ಕೆ ಇಳಿದಿದೆ” ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

”ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಿದ್ದೇವೆ ಎಂದು ಇಲ್ಲಿಯವರೆಗೆ ಬಡಾಯಿ ಬಿಡುತ್ತಾ ಬಂದ ಬಿಜೆಪಿ, ಈಗ ದೆಹಲಿಯಲ್ಲಿನ ರೈತ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದು ಹೇಳುತ್ತಿರುವುದು ತಮಾಷೆಯಾಗಿದೆ. ಕಾಂಗ್ರೆಸ್ ಪಕ್ಷ ರೈತಹೋರಾಟಗಾರರ ಹಿಂದೆ ಇಲ್ಲ, ಅವರ ಜೊತೆಯಲ್ಲಿದೆ” ಎಂದು ಹೇಳಿದ್ದಾರೆ.

”ನರೇಂದ್ರ ಮೋದಿ ಸರ್ಕಾರ ರೈತ ಹೋರಾಟಗಾರರ ತಾಳ್ಮೆಯನ್ನು ಪರೀಕ್ಷಿಸುವ ದುಸ್ಸಾಹಸಕ್ಕೆ ಇಳಿಯದೆ, ತಕ್ಷಣ ಕೃಷಿಕ್ಷೇತ್ರಕ್ಕೆ ಮಾರಕವಾಗಿರುವ 3 ‘ಕಪ್ಪು ಕಾನೂನು’ಗಳನ್ನು ರದ್ದುಗೊಳಿಸಿ ಬಿಕ್ಕಟ್ಟನ್ನು ಪರಿಹರಿಸಬೇಕು. ಸರ್ಕಾರದ ನಿರ್ಲಕ್ಷದಿಂದ ರೈತರು ಇನ್ನಷ್ಟು ರೊಚ್ಚಿಗೆದ್ದರೆ ಮುಂದಿನ ಅನಾಹುತಕ್ಕೆ ಪ್ರಧಾನಿ ಮೋದಿಯವರೇ ಕಾರಣರಾಗುತ್ತಾರೆ” ಎಂದಿದ್ದಾರೆ.

Vishwa News 24

Recent Posts

2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್  – vishwanews24

2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ  ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್ ವಿಶ್ವಾಸ ಬೆಂಗಳೂರು: '2028ಕ್ಕೆ ರಾಜ್ಯದಲ್ಲಿ…

6 hours ago

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ – vishwanews24

ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ…

6 hours ago

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ – vishwanews24

ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ…

6 hours ago

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ – vishwanews24

ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್‌ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ ಲಕ್ನೋ: ಬಕ್ರೀದ್…

7 hours ago

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ – vishwanews24

ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ ಉಡುಪಿ: ದೇಶದಲ್ಲಿ ಮತ್ತೆ ಇಂಧನ…

7 hours ago

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ – vishwanews24

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…

8 hours ago