Featured

ಕಾಂಗ್ರೆಸ್ ಬಡವರ ಪಕ್ಷ ; ಶಾಲು, ಹೂವು ಹಾಕುವ ಬದಲು ದೇಣಿಗೆ ನೀಡಿ: ಕಾರ್ಯಕರ್ತರಿಗೆ ಬಿ.ಕೆ ಹರಿಪ್ರಸಾದ್ ಸಲಹೆ – vishwanews24

ಕಾಂಗ್ರೆಸ್ ಬಡವರ ಪಕ್ಷ , ಶಾಲು, ಹೂವು ಹಾಕುವ ಬದಲು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿ: ಕಾರ್ಯಕರ್ತರಿಗೆ ಬಿ.ಕೆ ಹರಿಪ್ರಸಾದ್ ಸಲಹೆ

ಬೆಂಗಳೂರು: ಕಾಂಗ್ರೆಸ್ ಬಡವರ ಪಕ್ಷವಾಗಿದೆ. ಹಾಗಾಗಿ, ನೀವು ನನಗೆ ಶಾಲು, ಹೂವು ಹಾಕುವ ಬದಲಾಗಿ ಅದೇ ಹಣವನ್ನು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಅನೇಕರು ಮನೆಗೆ ಬಂದು ನನಗೆ ಶುಭ ಕೋರಿ ಶಾಲು ಹಾಕುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಸೌಕರ್ಯವಾಗಿರುವವರು ಇದ್ದರೂ ಕಾಂಗ್ರೆಸ್ ಬಡವರ ಪಕ್ಷ. ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಬಳಿ ಇರುವುದು 700 ಕೋಟಿ ರೂ. ಮಾತ್ರ. ಬಿಜೆಪಿಯಲ್ಲಿ 10 ಸಾವಿರ ಕೋಟಿ ರೂ. ಇದೆ ಎಂದರು.

ನೀವು ನನಗೆ ಶಾಲು, ಹೂವು ಹಾಕುವುದಾದರೆ ಅದರ ಬದಲು ಅದೇ ಹಣವನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿ. ಆ ಮೂಲಕ ಪಕ್ಷದ ಖಜಾನೆ ತುಂಬಲಿ. 2001ರಲ್ಲಿ ಬೆಂಗಳೂರು ಪಾಲಿಕೆ ಚುನಾವಣೆ ನಡೆಸಲು ನನಗೆ ಜವಾಬ್ದಾರಿ ನೀಡಿದ್ದರು. ಹೊಟೇಲ್ ಸಿಬ್ಬಂದಿ, ಕಸ ಗುಡಿಸುವವರು ಸೇರಿದಂತೆ ಸಣ್ಣ ಸಮುದಾಯದವರಿಗೆ ಟಿಕೆಟ್ ಕೊಟ್ಟಾಗ ಎಲ್ಲರು ಆಶ್ಚರ್ಯವಾಗಿದ್ದರು.

ಆದರೆ, ಆಗ ಎಲ್ಲರೂ ಗೆದ್ದಿದ್ದರು. ನಾವು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ, ನಮಗೆ ಅಧಿಕಾರ ಸಿಗುತ್ತೋ ಇಲ್ಲವೋ ಎಂಬ ಭಾವನೆ ಬೇಡ. ಗೆಲ್ಲುವ ಅರ್ಹತೆ ಇದ್ದರೆ, ಹಣವಿಲ್ಲದಿದ್ದರೂ ನಿಮಗೆ ಟಿಕೆಟ್ ಸಿಗುವುದು ಗ್ಯಾರಂಟಿ ಎಂದು ಅವರು ಭರವಸೆ ನೀಡಿದರು.

Vishwa News 24

Recent Posts

ಬೆಂಗಳೂರು:  ಏರ್‌ಪೋರ್ಟ್‌ನಲ್ಲಿ 1.37 ಕೋಟಿ ರೂ. ಮೌಲ್ಯದ ಚಿನ್ನ, ಮಾದಕ ವಸ್ತು ವಶಕ್ಕೆ – vishwanews24

ಬೆಂಗಳೂರು:  ಏರ್‌ಪೋರ್ಟ್‌ನಲ್ಲಿ 1.37 ಕೋಟಿ ರೂ. ಮೌಲ್ಯದ ಚಿನ್ನ, ಮಾದಕ ವಸ್ತು ವಶಕ್ಕೆ ಬೆಂಗಳೂರು: ಇಲ್ಲಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 1.37…

3 hours ago

ಬಾರ್, ಪಬ್ ಗಳಿಗೆ ವಿದ್ಯಾರ್ಥಿಗಳು: ದೂರು ಬಂದ ಕಾರಣ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ : ಪ್ರಿಯಾಂಕ್ ಖರ್ಗೆ  – vishwanews24

ಬಾರ್, ಪಬ್‍ಗಳಿಗೆ ವಿದ್ಯಾರ್ಥಿಗಳು: ದೂರು ಬಂದ ಕಾರಣ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ : ಪ್ರಿಯಾಂಕ್ ಖರ್ಗೆ  ಬೆಂಗಳೂರು : ಬಾರ್,…

3 hours ago

ಹಾವೇರಿ : ಸ್ವಯಂ ಉದ್ಯೋಗದ ಹೆಸರಲ್ಲಿ ಮಹಿಳೆಯರಿಗೆ ಕೋಟ್ಯಾಂತರ ರೂ. ವಂಚನೆ – vishwanews24

ಸ್ವಯಂ ಉದ್ಯೋಗದ ಹೆಸರಲ್ಲಿ ಗೃಹಿಣಿಯರಿಗೆ ಪಂಗನಾಮ : 10 ಕೋಟಿ ವಂಚಿಸಿ ಪರಾರಿ ಹಾವೇರಿ : “ಮನೆಯಲ್ಲೇ ಕುಳಿತು ಕೈತುಂಬಾ…

3 hours ago

ಉಡುಪಿ:  ಜೂ.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ – vishwanews24

ಉಡುಪಿ:  ಜೂ.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ ಉಡುಪಿ: ರಾಜ್ಯದಲ್ಲಿ 0 ಇಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ…

4 hours ago

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ :18ನೇ ಆರೋಪಿ ಗೆ ಮಧ್ಯಂತರ ಜಾಮೀನು ಮಂಜೂರು – vishwanews24

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ :18ನೇ ಆರೋಪಿ ಗೆ ಮಧ್ಯಂತರ ಜಾಮೀನು ಮಂಜೂರು ಮಂಗಳೂರು: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್…

4 hours ago

ಪುತ್ತೂರು ಅತ್ಯಾಚಾರ ಪ್ರಕರಣ: ರಾಜಿ ಸಂಧಾನದ ಮೂಲಕ ವಿವಾದ ಇತ್ಯರ್ಥಕ್ಕೆ ಹೈಕೋರ್ಟ್ ಸೂಚನೆ – vishwanews24

ಪುತ್ತೂರು ಅತ್ಯಾಚಾರ ಪ್ರಕರಣ: ರಾಜಿ ಸಂಧಾನದ ಮೂಲಕ ವಿವಾದ ಇತ್ಯರ್ಥಕ್ಕೆ ಹೈಕೋರ್ಟ್ ಸೂಚನೆ ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ…

4 hours ago