Featured

ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಯಲ್ಲ, ಬಿಜೆಪಿ ರಾಜಕೀಯ ಮಾಡ್ತಿದೆ : ಸಿಎಂ – vishwanews24

ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಯಲ್ಲ, ಬಿಜೆಪಿ ರಾಜಕೀಯ ಮಾಡ್ತಿದೆ : ಸಿಎಂ

ಬೆಂಗಳೂರು: ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿ ಅಲ್ಲ. ಬಿಜೆಪಿ ರಾಜಕೀಯ ಮಾಡಲು ಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಷನ್ ಒಟ್ಟಾಗಿ ಸಂವಿಧಾನದ ತಿದ್ದುಪಡಿ ಮಾಡಲು ಮುಂದಾಗಿದ್ದಕ್ಕೆ ಬಿಲ್ ಫೇಲ್ ಆಯ್ತು ಅಂತ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧ ಎಂಬ ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿದ ಅವರು, “ಕಾಂಗ್ರೆಸ್ ಮಹಿಳಾ ಮೀಸಲಾತಿ ಪರ ಇದೆ. ನಾವು ಮಹಿಳಾ ಮೀಸಲಾತಿಗೆ ವಿರೋಧ ಇಲ್ಲ. 2023 ರಲ್ಲಿ ಸಂಸತ್‌ನಲ್ಲಿ ಬಿಲ್ ಪಾಸ್ ಆಗಿದೆ. ಅದನ್ನ ಅವರು ಜಾರಿ ಮಾಡಬೇಕು. ಮುಂದಿನ ಚುನಾವಣೆಗೆ ಮೀಸಲಾತಿ ಜಾರಿ ಮಾಡಲಿ” ಎಂದರು.

ಇದನ್ನೂ ಓದಿ :

“ಬಿಜೆಪಿ ಅವರು ಸಂವಿಧಾನಕ್ಕೆ ತಿದ್ದುಪಡಿ ತರೋದಕ್ಕೆ ಹೋಗಿದ್ದಕ್ಕೆ ನಿನ್ನೆ ಬಿಲ್ ಬಿದ್ದು ಹೋಯ್ತು. ಮಹಿಳಾ ಮೀಸಲಾತಿಗೆ ಮಾತ್ರ ಸಂವಿಧಾನದ ತಿದ್ದುಪಡಿ ಮಾಡಿದ್ರೆ, ಡಿಲಿಮಿಟೇಷನ್ ಸೇರಿಸದೇ ಅದೊಂದೆ ಮಾಡಿದ್ರೆ ಪಾಸ್ ಆಗ್ತಿತ್ತು. ಅದನ್ನ ಮಿಕ್ಸ್ ಮಾಡಿ ಮಾಡಿದ್ರು. ಅದಕ್ಕೆ ಬಿದ್ದು ಹೋಯ್ತು” ಎಂದು ಹೇಳಿದರು.

“ಬಿಜೆಪಿ ಅವರು ರಾಜಕೀಯ ಮಾಡೋದಕ್ಕಾಗಿಯೇ ಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಷನ್ ಎರಡು ಒಟ್ಟಿಗೆ ತಂದರು. ನಾವು ಡಿಲಿಮಿಟೇಷನ್‌ಗೆ ಮಾತ್ರ ವಿರೋಧ. ನಾವು ಮಹಿಳಾ ಮೀಸಲಾತಿಗೆ ವಿರೋಧ ಇಲ್ಲ” ಎಂದು ತಿಳಿಸಿದರು.

ಇದನ್ನೂ ಓದಿ :

 

Vishwa News 24

Recent Posts

ಪುತ್ತೂರು: ಡಿವೈಡರ್‌ ಗೆ ಬೈಕ್‌ ಡಿಕ್ಕಿ ;  ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು: ಡಿವೈಡರ್‌ ಗೆ ಬೈಕ್‌ ಡಿಕ್ಕಿ ;  ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ನಗರದ ಪಡೀಲ್ ಬಳಿ ಎರಡು ಬೈಕ್‌ಗಳ…

5 hours ago

ಕ್ಯಾನ್ಸರ್‌ನಿಂದ ಮಲಯಾಳಂ ಕಿರುತೆರೆ ನಟ ಸಿದ್ದಾರ್ಥ ವೇಣುಗೋಪಾಲ್ ನಿಧನ – vishwanews24

ಕ್ಯಾನ್ಸರ್‌ನಿಂದ ಮಲಯಾಳಂ ಕಿರುತೆರೆ ನಟ ಸಿದ್ದಾರ್ಥ ವೇಣುಗೋಪಾಲ್ ನಿಧನ ಕೊಚ್ಚಿ : ಮಲಯಾಳಂ ಕಿರುತೆರೆಯ ಜನಪ್ರಿಯ ನಟ ಸಿದ್ದಾರ್ಥ್ ವೇಣುಗೋಪಾಲ್…

5 hours ago

ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ – vishwanews24

ಇಂದು ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾತ್ರಿ 8:30ಕ್ಕೆ ದೇಶವನ್ನುದ್ದೇಶಿಸಿ…

5 hours ago

ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಯುವಕ ಸಾವು – vishwanews24

ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಯುವಕ ಸಾವು ಶಿವಮೊಗ್ಗ: ಹುಟ್ಟುಹಬ್ಬದ ಪಾರ್ಟಿಯಲ್ಲಿ  ಭಾಗವಹಿಸಿದ್ದ ಯುವಕನೊಬ್ಬ ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ…

6 hours ago

ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ ಅನ್ನು ದೇಶದ ಜನ ಕ್ಷಮಿಸುವುದಿಲ್ಲ : ಆರ್. ಅಶೋಕ್  – vishwanews24

ಮಹಿಳೆಯರ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ ಅನ್ನು ದೇಶದ ಜನ ಕ್ಷಮಿಸುವುದಿಲ್ಲ : ಆರ್ ಅಶೋಕ್  ಬೆಂಗಳೂರು:ಮಹಿಳಾ ಮೀಸಲಿಗೆ ತಡೆವೊಡ್ಡಿದ ಕಾಂಗ್ರೆಸ್…

6 hours ago

ಕಾಪು : ಪತಿಯ ಲಾಕರ್‌ ಕೀ ಕಳವು ಮಾಡಿ ಲಕ್ಷಾಂತರ ಮೌಲ್ಯದ ಚಿನ್ನ ದೋಚಿದ ಪತ್ನಿ – vishwanews24

ಕಾಪು: ಪತಿಯ ಲಾಕರ್‌ ಕೀ ಕಳವು ಮಾಡಿ ಲಕ್ಷಾಂತರ ಮೌಲ್ಯದ ಚಿನ್ನ ದೋಚಿದ ಪತ್ನಿ ಉಡುಪಿ: ನಗರದಲ್ಲಿ ವಿಚಿತ್ರ ಕಳ್ಳತನ…

7 hours ago