ನವದೆಹಲಿ : ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಯುಪಿಎ ಅವಧಿಯಲ್ಲಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎಕೆ ಆಂಟನಿ ಅವರ ಪುತ್ರ ಅನಿಲ್ ಆಂಟನಿ ಗುರುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಅದರೊಂದಿಗೆ ಕೇರಳ ಬಿಜೆಪಿಗೆ ಅತಿದೊಡ್ಡ ಬಲ ಸಿಕ್ಕಂತಾಗಿದೆ. ಕೇರಳ ಕಾಂಗ್ರೆಸ್‌ನ ಮಾಧ್ಯಮ ಸಂಯೋಜಕರಾಗಿದ್ದ ಅನಿಲ್ ಆಂಟನಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗುಜರಾತ್ ಗಲಭೆಯ ಕುರಿತಾಗಿ ಬಿಬಿಸಿ ಮಾಡಿದ್ದ ಸಾಕ್ಷ್ಯಚಿತ್ರವನ್ನು ಬಲವಾಗಿ ವಿರೋಧಿಸಿದ್ದರು.
ಅದರ ಬೆನ್ನಲ್ಲಿಯೇ ಕಾಂಗ್ರೆಸ್ ಪಕ್ಷದಿಂದಲೇ ಅವರು ಟೀಕೆ ಎದುರಿಸಿದ್ದರು. ಇದರಿಂದಾಗಿ ಬೇಸರಗೊಂಡು ಕಾಂಗ್ರೆಸ್ ಪಕ್ಷದ ಎಲ್ಲಾ ಸ್ಥಾನಕ್ಕೂ ರಾಜೀನಾಮೆ ನೀಡಿ ಹೊರಬಂದಿದ್ದ ಅನಿಲ್ ಆಂಟನಿ ಗುರುವಾರ ನವದೆಹಲಿಯಲ್ಲಿ ಕೇಂದ್ರ ಸಚಿವ ಪೀಯುಷ್ ಗೋಯೆಲ್ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ವೇಳೆ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಕೂಡ ಹಾಜರಿದ್ದರು. ಬಿಬಿಸಿ ಸಾಕ್ಷ್ಯಚಿತ್ರ ವಿರೋಧಿ ಅವರು ಮಾಡಿದ್ದ ಟ್ವೀಟ್‌ಗೆ ಕಾಂಗ್ರೆಸ್ ಕಿಡಿಕಾರಿದ್ದ ಹಿನ್ನಲೆಯಲ್ಲಿ, ಕಳೆದ ಜನವರಿಯಲ್ಲಿ ಅವರು ಕಾಂಗ್ರೆಸ್ ಪಕ್ಷದ ಎಲ್ಲಾ ಹುದ್ದೆಗೆ ರಾಜೀನಾಮೆ ನೀಡಿದ್ದರು.
‘ಕಸದ ಚೀಲ’ದ ಮೂಲಕ ವಿಭಿನ್ನ ಕಥನ – ಉಡುಪಿಯ ಸುಮಂತ್ ಗಾಣಿಗ ಅವರ ಬರವಣಿಗೆಗೆ ಮೆಚ್ಚುಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ…
ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್ "ರಕ್ತ, ಬೆವರು ಹರಿಸಿ ಸೇವೆ ಸಲ್ಲಿಸಿದ್ದೇನೆ" : ಸಾಮಾಜಿಕ ಜಾಲತಾಣದಲ್ಲಿ…
ಉಡುಪಿ: ಅ.8 ರಂದು ನೇರ ಸಂದರ್ಶನ ಉಡುಪಿ: ನಗರದ ಶಾಂತ ಎಲೆಕ್ಟಿçಕಲ್ಸ್ ಪ್ರೆöÊ.ಲಿ., ಆಭರಣ ಜುವೆರ‍್ಸ್ ಹತ್ತಿರ, ಕಾರ್ಪೋರೇಶನ್ ಬ್ಯಾಂಕ್…
ಹಳೆಕೋಟ–ಕಡವಾಡ ಕ್ರಾಸ್ ರಸ್ತೆ ದುರಸ್ತಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕರವೇ ಮನವಿ ಕಾರವಾರ ಇಳಕಲ್ ಕೈಗಾ ರಾಜ್ಯ ರಸ್ತೆಯ ಹಳೆಕೋಟದಿಂದ ಕಡವಾಡ…
ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳ ಸಾಗಾಟ ; ಓರ್ವ ಅರೆಸ್ಟ್, ಇಬ್ಬರು ಪರಾರಿ ಪುತ್ತೂರು: ಯಾವುದೇ ಪರವಾನಿಗೆಯಿಲ್ಲದೆ…
ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…