Featured

ಕಾಂತಾರ ಅಬ್ಬರದ ನಂತರ ಕರಾವಳಿಯಾದ್ಯಂತ ತುಳು ರಂಗಭೂಮಿಯಲ್ಲಿ ಹೊಸ ಕ್ರಾಂತಿ ಬರೆದ  ಶಿವದೂತೆ ಗುಳಿಗೆ ತುಳು ನಾಟಕ  ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಪ್ರದರ್ಶನಕ್ಕೆ ತಯಾರಿ – Vishwanews24

ಕಾಂತಾರ ಅಬ್ಬರದ ನಂತರ ಕರಾವಳಿಯಾದ್ಯಂತ ತುಳು ರಂಗಭೂಮಿಯಲ್ಲಿ ಹೊಸ ಕ್ರಾಂತಿ ಬರೆದ  ಶಿವದೂತೆ ಗುಳಿಗೆ ತುಳು ನಾಟಕ  ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಪ್ರದರ್ಶನಕ್ಕೆ ತಯಾರಿ

ಹಿಂದಿಯಲ್ಲಿ ಉತ್ತಮ ಫಲಿತಾಂಶ ದೊರೆತರೆ ಮಲಯಾಳ, ಗುಜರಾತಿ ಹಾಗೂ ಮರಾಠಿ ಭಾಷೆಯಲ್ಲಿಯೂ ಗುಳಿಗನ ನಾಟಕ ಪ್ರದರ್ಶನ

ಮಂಗಳೂರು: ತುಳುನಾಡಿನ ದೈವಗಳಾದ ಪಂಜುರ್ಲಿ, ಗುಳಿಗನ ಕಥೆಯಾಧಾರಿತ “ಕಾಂತಾರ’ ಸಿನೆಮಾ ದೇಶ-ವಿದೇಶದಲ್ಲಿ ಮೋಡಿ ಮಾಡುತ್ತಿರುವ ಮಧ್ಯೆಯೇ, ಕರಾವಳಿಯಾದ್ಯಂತ ತುಳು ರಂಗಭೂಮಿಯಲ್ಲಿ ಹೊಸ ಕ್ರಾಂತಿ ಬರೆದ “ಶಿವದೂತೆ ಗುಳಿಗೆ’ ತುಳು ನಾಟಕ ಇದೀಗ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಪ್ರದರ್ಶನಕ್ಕೆ ಅಣಿಯಾಗಿದೆ..

“ಕಾಂತಾರ’ ಸಿನೆಮಾದಲ್ಲಿ 20 ನಿಮಿಷ ತುಳುನಾಡಿನ ಕಾರಣಿಕ ಶಕ್ತಿ ಗುಳಿಗನ ಪ್ರದರ್ಶನವಿದ್ದರೆ, ಶಿವದೂತೆ ಗುಳಿಗೆ ನಾಟಕವು ಪೂರ್ಣ ಗುಳಿಗನ ಕಥೆಯಾಧಾರಿತವಾಗಿದೆ. ವಿಶೇಷವೆಂದರೆ, ಕಾಂತಾರದಲ್ಲಿ “ಗುರುವ’ನಾಗಿ ಮಿಂಚಿರುವ ಕಿರುತೆರೆ ನಟ ಸ್ವರಾಜ್‌ ಶೆಟ್ಟಿ ಅವರೇ ಶಿವದೂತೆ ಗುಳಿಗ ನಾಟಕದಲ್ಲಿ “ಗುಳಿಗ’ನಾಗಿ ಅಭಿನಯಿಸುತ್ತಿದ್ದಾರೆ.

ಕಾಂತಾರ ಸಿನೆಮಾದಲ್ಲಿ ಗುಳಿಗನ ಅಬ್ಬರ ಕಂಡು ಕುತೂಹಲದಿಂದ ದೇಶ ಹಾಗೂ ರಾಜ್ಯದ ವಿವಿಧ ಭಾಗಗಳ ಜನರು ಗುಳಿಗ ದೈವದ ವಿಶೇಷತೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಕರಾವಳಿಯಲ್ಲಿ ಗುಳಿಗನ ಮಹಿಮೆಯನ್ನು ಸಾರುವ ನಾಟಕ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಸಹಿತ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನ ಮಾಡಲು ಆಹ್ವಾನ ಬಂದಿದೆ. ಇದರಂತೆ ತುಳುವಿನಲ್ಲಿರುವ ಶಿವದೂತೆ ಗುಳಿಗೆ ಕನ್ನಡದಲ್ಲಿಯೂ ಪ್ರದರ್ಶನಕ್ಕೆ ರೆಡಿಯಾಗುತ್ತಿದೆ. ಡಬ್ಬಿಂಗ್‌ ಕಾರ್ಯ ಸದ್ಯ ಪ್ರಗತಿಯಲ್ಲಿದೆ.

ಬಂಟ್ವಾಳ: ಕೆಲಸವೊಂದರ ಇಂಟರ್‌ವ್ಯೂ ಇದೆ ಎಂದು ಹೇಳಿ ಮನೆಯಿಂದ ಹೋದ ಯುವತಿ ನಾಪತ್ತೆ – Vishwanews24

ಗುಳಿಗನ ಚರಿತ್ರೆಯ ಪಾಡªನ ತುಳು ಭಾಷೆಯಲ್ಲಿರಲಿದೆ. ಉಳಿದಂತೆ ಹಾಡು ಸಹಿತ ಎಲ್ಲ ಸಂಭಾಷಣೆ ಕನ್ನಡದಲ್ಲಿರಲಿದೆ.

ಹಿಂದಿಯಲ್ಲಿಯೂ ಕಾಂತಾರ ಬಗ್ಗೆ ಕುತೂಹಲ ವ್ಯಕ್ತವಾದ ಹಿನ್ನೆಲೆಯಲ್ಲಿ ಗುಳಿಗ ನಾಟಕವನ್ನು ಹಿಂದಿಯಲ್ಲೂ ಪ್ರದರ್ಶಿಸುವಂತೆ ಬೇಡಿಕೆ ಬಂದಿದೆ.

ಹೀಗಾಗಿ ಹಿಂದಿ ಅವತರಣಿಕೆಯಲ್ಲಿಯೂ ಗುಳಿಗನ ಕಥೆ ನಾಟಕದ ಸ್ವರೂಪದಲ್ಲಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಹಿಂದಿಯಲ್ಲಿ ಉತ್ತಮ ಫಲಿತಾಂಶ ದೊರೆತರೆ ಮಲಯಾಳ, ಗುಜರಾತಿ ಹಾಗೂ ಮರಾಠಿ ಭಾಷೆಯಲ್ಲಿಯೂ ಗುಳಿಗನ ನಾಟಕ ಪ್ರದರ್ಶನಕ್ಕೆ ನಿರ್ದೇಶಕ ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲು ಅವರು ಚಿಂತನೆ ನಡೆಸಿದ್ದಾರೆ.

ಬಿಹಾರ :ಸಾಲಗಾರರ ಕಿರಿ ಕಿರಿ.. ಕುಟುಂಬದ 6 ಮಂದಿ ವಿಷ ಸೇವಿಸಿ ಆತ್ಮಹತ್ಯೆ, ಓರ್ವಳ *ಸ್ಥಿತಿ ಗಂಭೀರ – Vishwanews24

2020ರ ಜ. 2ರಂದು ಮೊದಲ ಪ್ರದರ್ಶನ ಕಂಡ ತುಳುವಿನ “ಶಿವದೂತೆ ಗುಳಿಗೆ’ ಇದೀಗ 300ನೇ ಪ್ರದರ್ಶನವನ್ನು ದಾಟಿ ಮುನ್ನಡೆಯುತ್ತಿದೆ. ರಿಷಬ್‌ ಶೆಟ್ಟಿ ಅವರು ಕಾಂತಾರ ಸಿನೆಮಾ ಮಾಡುವ ಮುನ್ನ ಶಿವದೂತೆ ಗುಳಿಗ ನಾಟಕದ ಬಗ್ಗೆ ವಿವರವಾಗಿ ಅಭ್ಯಸಿಸಿ ಕೊಡಿಯಾಲ್‌ಬೈಲ್‌ ಅವರ ಜತೆಗೆ ಮಾತುಕತೆ ನಡೆಸಿದ್ದರು.

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

10 hours ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

10 hours ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

10 hours ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

11 hours ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

11 hours ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

11 hours ago