Categories: ಉಡುಪಿ

ಕಾಪುವಿನಲ್ಲಿ ಮತ್ತೆ ಅಬ್ಬರದ ” ಕಾಪು ಪಿಲಿ ಪರ್ಬ- ಸೀಸನ್ -2 “ಹುಲಿ ವೇಷ ಕುಣಿತ ಸ್ಪರ್ಧೆ:vishwanews24

ಕಾಪುವಿನಲ್ಲಿ ಮತ್ತೆ ಅಬ್ಬರದ ” ಕಾಪು ಪಿಲಿ ಪರ್ಬ- ಸೀಸನ್ -2 “ಹುಲಿ ವೇಷ ಕುಣಿತ ಸ್ಪರ್ಧೆ:vishwanews24

ಲಕ್ಷಗಟ್ಟಲೆ ಬಹುಮಾನ-ಅವಿಭಜಿತ ಜಿಲ್ಲೆಯಿಂದ ಹತ್ತಕ್ಕೂ ಅಧಿಕ ತಂಡ ಭಾಗವಹಿಸುವಿಕೆ

ರಕ್ಷಣಾಪುರ ಜವನೆರ‍್ನ ಕೂಟ ಕಾಪು ಇವರಿಂದ ಆಯೋಜನೆ

ಕಾಪು : ರಕ್ಷಣಾಪುರ ಜವನೆರ್ ಕಾಪು ಇವರ ಸಾರಥ್ಯದಲ್ಲಿ ಕಾಪು ಪಿಲಿ ಪರ್ಬ ಹುಲಿ ವೇಷ ಕುಣಿತ ಸ್ಪರ್ಧೆ ಅಕ್ಟೋಬರ್ 11 ರಂದು ಮಧ್ಯಾಹ್ನ 3.30 ಗಂಟೆಗೆ ಕಾಪುವಿನ ಬಂಟರ ಸಂಘದ ಆವರಣದಲ್ಲಿ ಆಯೋಜಿಲಾಗಿದೆಂದು ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಯೋಜನ ತಂಡದ ಅಧ್ಯಕ್ಷ ನವೀನ್ ಎನ್ ಶೆಟ್ಟಿ ತಿಳಿಸಿದರು.

ದಸರಾ ಹಬ್ಬದ ಪ್ರಯುಕ್ತ ರಾಜಕೀಯ ರಹಿತವಾಗಿ “ಕಾಪು ಪಿಲಿ ಪರ್ಬ -೦೨”ನಡೆಯಲಿದ್ದು ಊರು ಪರವೂರಿನ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಝಿ ಕನ್ನಡ ಡ್ರಾಮ ಜೂನಿಯರ್ಸ್ ಸೀಜನ್ 4 ವಿಜೇತೆ ಸಮೃದ್ಧಿ ಮೊಗವೀರ ತಂಡದವರಿಂದ ಯಕ್ಷ ನೃತ್ಯ ರೂಪಕ,ಕಿನ್ನಿಗೊಳಿ ಕ್ರೀವ್ಸ್ ಇನ್ ಕ್ರಿವ್ ಸ್ಟುಡಿಯೋ ಡ್ಯಾನ್ಸ್ ತಂಡದಿಂದ ನೃತ್ಯ ವೈಭವ ,ಕುಣಿತ ಭಜನೆ ನಡೆಯಲಿದೆ.

ಕಾಪುವಿನ ಇತಿಹಾಸದಲ್ಲಿ ರಕ್ಷಣಾಪುರ ಜವನೆರ್ ಕೂಟ ಎರಡನೇ ಬಾರಿ ಆಯೋಜಿಸುತ್ತಿರುವ ಸ್ಪರ್ಧೆಯಾಗಿದ್ದು ವಿಜೇತ ತಂಡಗಳಿಗೆ ಪ್ರಥಮ,ದ್ವಿತೀಯ,ತೃತೀಯ ತಲಾ ಒಂದು ಲಕ್ಷ,ಎಪ್ಪತೈದು ಸಾವಿರ,ಮೂವತ್ತು ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ ಮತ್ತು ವಿಶೇಷ ಕರಿಹುಲಿ,ಅಕ್ಕಿಮುಡಿ ಹಾರಿಸುವುದು,ಅತ್ಯುತ್ತಮ ಹುಲಿ,ವೈಯಕ್ತಿಕ ವೇಷ ಕುಣಿತದಾರ,ಮತ್ತು ಭಾಗವಹಿಸಿದ ಎಲ್ಲಾ ತಂಡಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುತ್ತೆಂದರು.

ವಿಶೇಷ ಆಕರ್ಷಣೆಯಾಗಿ ಕೋಸ್ಟಲ್‌ವುಡ್‌ನ ಸಿನಿ ತಾರೆಯರು,ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದು ಕಾಪುವಿನ ಇತಿಹಾಸ ಪುಟ ಸೇರುವ ರೀತಿಯ ಕಾರ್ಯಕ್ರಮ ಜರುಗಲಿದೆ ಎಂದು ಅವರು ತಿಳಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಉಚಿತ ಪ್ರವೇಶ ನೀಡಿದ್ದು ಸುಮಾರು ಹತ್ತಕ್ಕೂ ಅಧಿಕ ಹುಲಿ ವೇಷ ತಂಡಗಳು ಭಾಗವಹಿಸುವ ನಿರೀಕ್ಷೆ ಇಡಲಾಗಿದೆ ಸಾರ್ವಜನಿಕರಿಗೆ ಮನರಂಜನೆಯ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ ರಕ್ಷಣಾಪುರ ಜವನರ‍್ನ ಕೂಟ ತಂಡದಲ್ಲಿ ನೂರಾರು ಪ್ರಬಲ ಯುವಕರು ಸೇರಿಕೊಂಡು ನಡೆಯುವ ಕಾರ್ಯಕ್ರಮ ಇದಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಲ್ಲಿ ನಡೆಸುವ ಇರಾದೆ ಹೊಂದಿದ್ದು ಸಾರ್ವಜನಿಕರ ಸಹಕಾರ ಅಗತ್ಯವೆಂದು ಅವರು ತಿಳಿಸಿದರು.

ಸಂಘಟಕರಾದ ಗಣೇಶ್ ಕೋಟ್ಯಾನ್, ಕಾರ್ತಿಕ್ ಅಮೀನ್, ರಮೀಜ್ ಹುಸೇನ್, ದೀಪಕ್ ಕುಮಾರ್ ಎರ್ಮಾಳು, ಶಾಂತಲತಾ ಶೆಟ್ಟಿ, ಆಶಾ‌ ಅಂಚನ್, ಅಶ್ವಿನಿ ನವೀನ್, ಅಖಿಲೇಶ್ ಕೋಟ್ಯಾನ್, ದೇವರಾಜ್ ಕೋಟ್ಯಾನ್, ಸುಧೀರ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು – vishwanews24

ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…

2 hours ago

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ – vishwanews24

ರಾಜ್ಯ ಸರ್ಕಾರದಿಂದ  133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …

3 hours ago

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ – vishwanews24

ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…

3 hours ago

ಮುಂಬೈನಲ್ಲಿ ಮುಂಗಾರು: ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳು ಜಲಾವೃತ – vishwanews24

ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…

6 hours ago

ಜೂ.25 ರಂದು ಮಂಗಳೂರಿಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ – vishwanews24

ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…

6 hours ago

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು – vishwanews24

ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…

6 hours ago