ಕಾಪುವಿನಲ್ಲಿ ವಶಕ್ಕೆ ಪಡೆದ ಎಲ್ಲಾ ಗೋವುಗಳು ಗೋಶಾಲೆಗೆ ಸಾಗಿಸುವ ಗೋವುಗಳು: ಜಯಪ್ರಕಾಶ್ ಪ್ರಭು
ಕಾಪು: ಇಂದು ಬೆಳ್ಳಗೆ ಕೆಲ ಹೊತ್ತು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದ್ದ ಸುಮಾರು ಮೂರು ಲಾರಿಗಳಲ್ಲಿ ಸಾಗಿಸುತ್ತಿದ್ದ ಗೋವುಗಳನ್ನು ಕಾಪು ಪೋಲಿಸರು ವಶಕ್ಕೆ ಪಡೆದ ವಿಚಾರಕ್ಕೆ ಕಡೆಗೂ ತೆರೆ ಬಿದ್ದಂತಾಗಿದೆ.
ಈ ಗೋವುಗಳನ್ನ ಕೇರಳದ ವಯನಾಡಿನಿಂದ ಧರ್ಮ ಫೌಂಡೆಶನ್ ಸಂಸ್ಥೆಯ ವತಿಯಿಂದ ಉಡುಪಿ ಜಿಲ್ಲೆಯ ಬಂಟಕಲ್ಲು ಅರಸಿಕಟ್ಟೆಯಲ್ಲಿರುವ ಗೋಶಾಲೆಯಲ್ಲಿ ಸಾಕುವ ಉದ್ದೇಶದಿಂದ ಕೊಂಡಯ್ಯಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಗೋಶಾಲೆಗೆ ಭೇಟಿ ನೀಡಿ ಮತ್ತು ದಾಖಲೆ ಪರೀಶಿಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಯಾವುದೇ ಕಸಾಯಿಖಾನೆಗೆ ಸಾಗುವ ಗೋವುಗಳು ಅಲ್ಲ ಎಂಬ ದಿಟವಾಗಿದೆ.
ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ನ ಪ್ರಖಂಡ ಸಂಚಾಲಕ ಜಯಪ್ರಕಾಶ್ ಪ್ರಭುರ ಹೇಳಿಕೆಯ ಪ್ರಕಾರ ಎಲ್ಲಾ ಗೋವುಗಳು ಸುರಕ್ಷಿತವಾಗಿದೆ ಮತ್ತು ಅಸ್ವಸ್ಥತಗೊಂಡ ಗೋವುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಮತ್ತು ಸದುದ್ದೇಶದಿಂದ ಮತ್ತು ಸಾಕುವ ಉದ್ದೇಶದಿಂದ ಗೋವುಗಳನ್ನು ತರಲಾಗಿತ್ತು ಎಂದರು.
ಧರ್ಮ ಫೌಂಡೇಶನ್ ನ ಅಧ್ಯಕ್ಷರಾಗಿ ಪಂದಳ ರಾಜಕಾರ್ಯನಿರ್ವಹಿಸುತ್ತಿದ್ದು ,ಉಡುಪಿಯ ಜಿಲ್ಲಾ ಅಧ್ಯಕ್ಷರಾಗಿ ಗಿರೀಶ್ ಜಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…