ಕಾಪು: ಇಲ್ಲಿನ ಕಡಲಕಿನಾರೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹೋದರರು ಹಾಗೂ ಆರ್ಟ್ ಆಫ್ ಲೀವಿಂಗ್ ಬಳಗದ ವತಿಯಿಂದ ಆಯೋಜಿಸಲಾದ ಆನಂದ ಲಹರಿ ಕಾರ್ಯಕ್ರಮ ಅದ್ಧೂರಿಯಾಗಿ ಭಕ್ತಿಭಾವದಿಂದ ನಡೆಯಿತು.
ಮೈಸೂರು ಪೇಟ ತೊಡಿಸಿ-ಮಲ್ಲಿಗೆ ಹಾರದಿಂದ ಸ್ವಾಗತಿಸಿ ಸನ್ಮಾನಿಸಿ ಸ್ವಾಗತ ಮಾತುಗಳನ್ನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ “ನನ್ನ ಕ್ಷೇತ್ರದಲ್ಲಿ ಗುರೂಜಿಯ ಸತ್ಸಂಗ ನಡೆಸಿದ್ದು ಜೀವನದ ಸಿರಿಭಾಗ್ಯ,ಸುಮಾರು25-30 ವರ್ಷಗಳ ನಿರಂತರ ನಿಕಟ ನಂಟು ನಮ್ಮ ಸಹೋದರರಿಗೆ ಇದೆ ಗುರೂಜಿಯ ಜತೆಗೆ ಮಾತೃ ಪಿತೃ ಭಾವದ ಬಾಂಧವ್ಯ ಸಿಗುತ್ತಿದೆ ಹಾಗೂ ಈ ದಿನ ಕಾಪುವಿನ ಚರಿತ್ರೆಯಲ್ಲಿ ಇತಿಹಾಸವಾಗುತ್ತೆಂದರು.
ಗುರುದೇವ ಶ್ರೀ ಶ್ರೀ ರವಿಶಂಕರ ಗುರೂಜಿ ಮೊದಲ ಸುತ್ತಿನಲ್ಲಿ ದೇಶದ ಪ್ರವಾಸೋದ್ಯಮ-ಆಯುರ್ವೇದ- ವೈವಿಧ್ಯಮಯ ಆಹಾರ ಖಾಧ್ಯ- ಒಡವೆ ಆಭರಣ- ವಸ್ತ್ರಾಲಂಕಾರ-ಜ್ಞಾನದ ಕುರಿತಾಗಿ ಸವಿಸ್ತಾರವಾದ ಸತ್ಸಂಗ ನಡೆಸಿದರು.
ಮಾನವನ ಶರೀರಕ್ಕೆ ಸಾವಿದ್ದರೂ ಚೈತನ್ಯಕ್ಕೆ ಸಾವಿಲ್ಲ ಅದೂ ನಿರಂತರವಾಗಿ ಹರಿಯುವ ನೀರು ಸಂಘರ್ಷದ ಜೀವನವನ್ನು ಸಂಭ್ರಮದತ್ತ ಜೀವನವನ್ನಾಗಿ ಪರಿವರ್ತಿಸಿಕೊಳ್ಳಬೇಕು ಆ ಸಮಯದಲ್ಲಿ ನಿಜವಾದ ಜೀವನ ಸಿಗುತ್ತದೆಂದರು.
ಈ ಸತ್ಸಂಗವೂ ಕಡಲ ಕಿನಾರೆಯಲ್ಲಿ ನಡೆಯುತ್ತಿದೆ ಬಂದಿರುವ ಎಲ್ಲಾ ಭಕ್ತರ ಕಷ್ಟವನ್ನು ಇಲ್ಲಿಯೇ ಬಿಟ್ಟುಹೋಗಿ ಸಮುದ್ರದೊಡಲು ಸೇರಿಸಿಕೊಂಡು ಹೊಸ ಅಲೆಯ ಮುಖೇನ ನವಚೇತನ ಜೀವನ ಸಿಗುತ್ತದೆಂದರು.
ಈ ಸಂದರ್ಭದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ,ಬಂಜರ ಪ್ರಕಾಶ್ ಶೆಟ್ಟಿ,ವಾಸುದೇವ ಶೆಟ್ಟಿ, ಯೋಗಿಶ್ ಶೆಟ್ಟಿ ಬಾಲಾಜಿ,ಜಯಕರ ಹೆಗ್ಡೆ,ಡಾ ಚಂದ್ರಶೇಖರ್,ಅಜಯ್ ಪಿ ಶೆಟ್ಟಿ, ಗೀತಾಂಜಲಿ ಸುವರ್ಣ, ವೀಣಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ.. ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್…
ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್ ವಾಹನ ಡಿಕ್ಕಿ : ಐವರು ದುರ್ಮರಣ ಕೊಪ್ಪಳ: ಗೂಡ್ಸ್ ವಾಹನವೊಂದು ಡಿವೈಡರ್ ದಾಟಿ ಓಮ್ನಿಗೆ…
ಮಲ್ಪೆ ಪ್ರಕರಣ: ಪ್ರಮೋದ್ ಮಧ್ವರಾಜ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು ಬೆಂಗಳೂರು: ಕಳೆದ ವರ್ಷ ಮಲ್ಪೆ ಬಂದರಿನಲ್ಲಿ ಕಳ್ಳತನ ಮಾಡಿ…
ರಾಮ ಮಂದಿರದಲ್ಲಿ ಅವ್ಯವಹಾರದಂತಹ ಘೋರ ಅಪಚಾರಗಳು ನಡೆಯಬಾರದಿತ್ತು.. ಮಂದಿರದ ಅವ್ಯವಹಾರ ಆರೋಪಗಳು ಸತ್ಯವಾಗಿದ್ದರೆ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು : ಪೇಜಾವರ…
ಪರ್ಕಳ: ಹೆದ್ದಾರಿಯಲ್ಲಿ ಕಂಟೇನರ್ ಲಾರಿ ಪಲ್ಟಿ: ತಪ್ಪಿದ ದುರಂತ ಮಣಿಪಾಲ: ಪರ್ಕಳದ ಕೆಳಪರ್ಕಕಳ ಹೆದ್ದಾರಿಯಲ್ಲಿ ಕೆನರಾ ಬ್ಯಾಂಕಿನ ತಿರುವಿನಲ್ಲಿ ಕಂಟೇನರ್…
ಉಡುಪಿ: ಮೂವರು ರೌಡಿ ಶೀಟರ್‌ಗಳ ಗಡಿಪಾರು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಉಡುಪಿ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್…