Featured

ಕಾಪುವಿನ ಮತದಾರರಿಗೆ ಎಂದಿಗೂ ಅನ್ಯಾಯ ಮಾಡದ ರಾಜಕಾರಣಿ ವಿನಯ್ ಕುಮಾರ್ ಸೊರಕೆ : vishwanews24

ಕಾಪುವಿನ ಮತದಾರರಿಗೆ ಎಂದಿಗೂ ಅನ್ಯಾಯ ಮಾಡದ ರಾಜಕಾರಣಿ ವಿನಯ್ ಕುಮಾರ್ ಸೊರಕೆ

ಕಾಪು: ಕರಾವಳಿಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ಜನರಿಗೆ ಭೂಮಿಯ ಹಕ್ಕನ್ನು ಒದಗಿಸಿಕೊಟ್ಟ ಏಕೈಕ ರಾಜಕಾರಣಿ ಇದ್ದರೆ ಅದು ವಿನಯಕುಮಾರ್ ಸೊರಕೆ , ಮಾತ್ರವಲ್ಲದೆ ಕಾಪುವಿನ ಶಾಸಕರಾದ ನಂತರ ಒಂದು ಕ್ಷಣವು ಬಿಡುವು ಕೊಡದೆ ಕಾಪುವಿನ ಸರ್ವಾಂಗಿನ ಅಭಿವೃದ್ಧಿಗಾಗಿ ಶ್ರಮ ಪಟ್ಟ ಏಕೈಕ ರಾಜಕಾರಣಿ ಇದ್ದರೆ ಅದು ವಿನಯ್ ಕುಮಾರ್ ಸೊರಕೆ ಎಂಬುದು ಜನಸಾಮಾನ್ಯರಿಗೆ ಗೊತ್ತಿದೆ .

ಕಳೆದ ಬಾರಿಯ ಚುನಾವಣೆಯಲ್ಲಿ ಧರ್ಮ ಜಾತಿ ಅಪಪ್ರಚಾರದ ಮೂಲಕ ಸೋಲಿಸಲಾಗಿತ್ತು ಆದರೆ ಈ ಬಾರಿ ಆ ಗಿಮಿಕ್ ಯಾವುದು ನಡೆಯುವುದಿಲ್ಲ ಬಿಜೆಪಿಯವರ ನಕಲಿ ಹಿಂದುತ್ವವಾದಿ ಧೋರಣೆ ನೈಜ ಹಿಂದುಗಳಿಗೆ ಅರ್ಥವಾಗಿದೆ.

ಪ್ರತಿ ದಿನವೂ ದೇವಸ್ಥಾನ ಮಂದಿರ ಚರ್ಚ್ ಮಸೀದಿಗಳ ಭೇಟಿ ನೀಡುವ ವಿನಯ್ ಕುಮಾರ್ ಸೊರಕೆ ಸಮಸ್ತರ ಪರವಾಗಿ ಕೆಲಸ ಮಾಡಿಕೊಂಡು ಬಂದವರು ಅಂತಹ ವ್ಯಕ್ತಿತ್ವ ಉಳ್ಳ ವ್ಯಕ್ತಿ ಸೋತರೆ ಕಾಪುವಿನ ಜನತೆ ಮಾಡುವ ಮೋಸ ಅಲ್ಲವೇ ಹಾಗಾಗಿ ಎಲ್ಲಾ ಮತದಾರ ಬಾಂಧವರು ವಿನಯ್ ಕುಮಾರ್ ಸೊರಕೆ ಅವರನ್ನೇ ಬೆಂಬಲಿಸಬೇಕು ಎಂದು ವಿಧಾನ ಪರಿಷತ್ತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ಒಂದು ಪೈಸೆಯ ಹೋರಾಟ ನಡೆಸದೆ ಕಾಪುವಿನ ತಾಲೂಕು ಕಚೇರಿ ನಿರ್ಮಾಣ ಮಾಡಿದ್ದು ಪುರಸಭೆ ನಿರ್ಮಾಣ ಮಾಡಿದ್ದು ವಿನಯ್ ಕುಮಾರ್ ಸೊರಕೆ ಸ್ವಾರ್ಥಕ್ಕಾಗಿ ಅಲ್ಲ ಬದಲಿಗೆ ಈ ಭಾಗದ ಜನರು ಉನ್ನತ ಮಟ್ಟದ ಜೀವನವನ್ನು ನಡೆಸಬೇಕು ಎಂಬ ಕಾರಣಕ್ಕಾಗಿ ಆದರೆ ಬಿಜೆಪಿ ಅದನ್ನು ಸರಿಯಾಗಿ ಉಪಯೋಗಿಸದೆ ಇದ್ದ ಪರಿಣಾಮವಾಗಿ ಜನಸಾಮಾನ್ಯರಿಗೆ ಕಷ್ಟ ಆಗಿದೆ ವಿನಯ್ ಕುಮಾರ್ ಸೊರಕೆ ಗೆದ್ದು ಬಂದರೆ ಆ ಎಲ್ಲಾ ಸಮಸ್ಯೆಗಳು ಒಂದು ತಿಂಗಳಲ್ಲಿ ಬಗೆಹರಿಯಲಿದೆ ಎಂಬುದು ನಮಗೆ ಗೊತ್ತಿದೆ ನಾವು ಅವರ ಜೊತೆ ಕೆಲಸ ಮಾಡಿದವರು ಎಂದು ಅವರು ತಿಳಿಸಿದರು.

Vishwa News 24

Recent Posts

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ -vishwanews24

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…

3 hours ago

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…

11 hours ago

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ – vishwanews24

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…

11 hours ago

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ – vishwanews24

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…

11 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…

11 hours ago

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ – vishwanews24

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ:  ದಕ್ಷಿಣ ಕನ್ನಡ (ದ.ಕ)…

12 hours ago