Featured

ಕಾಪುವಿನ ಸಮಾವೇಶದ ಜನಸ್ತೋಮ ಕಂಡು ಅಸಮಾಧಾನಗೊಂಡರೆ ಬಿಎಸ್ ವೈ ಮತ್ತು ಸಿಎಂ..? ಅಧಿಕೃತ ಮಾಹಿತಿಯ ಪ್ರಕಾರ ಶಾಸಕ ಲಾಲಾಜಿ ಮೆಂಡನ್ ನಾಯಕತ್ವದ ಸಮಾವೇಶಕ್ಕೆ ಸೇರಿದ್ದು ಎರಡರಿಂದ-ಎರಡೂವರೆ ಸಾವಿರ ಮಂದಿ..!! ವಿಶ್ವನ್ಯೂಸ್24 ಪೊಲಿಟಿಕಲ್ ಗ್ರೌಂಡ್ ರಿಪೋರ್ಟ್

ಕಾಪುವಿನ ಸಮಾವೇಶದ ಜನಸ್ತೋಮ ಕಂಡು ಅಸಮಾಧಾನಗೊಂಡರೆ ಬಿಎಸ್ ವೈ ಮತ್ತು ಸಿಎಂ..?

ಅಧಿಕೃತ ಮಾಹಿತಿಯ ಪ್ರಕಾರ ಸಮಾವೇಶಕ್ಕೆ ಸೇರಿದ್ದು ಎರಡರಿಂದ-ಎರಡೂವರೆ ಸಾವಿರ ಮಂದಿ..!!

ಶಾಸಕ ಲಾಲಾಜಿ ಮೆಂಡನ್ ನಾಯಕತ್ವ ಸಮಾವೇಶ ಪ್ಲಾಪ್ ಶೋ‌ ಕಂಡಿತೆ….??

                     Vishwanews24 ಪೊಲಿಟಿಕಲ್                                          ಗ್ರೌಂಡ್  ರಿಪೋರ್ಟ್

ಕಾಪು: ನವೆಂಬರ್ 7ರಂದು ಸೋಮವಾರ ಕಾಪುವಿನ ಪೇಟೆಯಲ್ಲಿ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ಜನ ಸಂಕಲ್ಪ ಸಮಾವೇಶದಲ್ಲಿ ಸೇರಿರುವ ಜನಸ್ತೋಮವನ್ನು ಕಂಡು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಸಮಾಧಾನ ಗೊಂಡ ಬಗ್ಗೆ ಮಾಹಿತಿ ಹೊರ ಬಿದ್ದಿದೆ.


ಜನಸಂಕಲ್ಪ ಸಮಾವೇಶದ ಕರಾವಳಿಯಲ್ಲಿ ಉದ್ಘಾಟನೆ ಎಂಬಂತೆ ಕಾಪುವಿನಲ್ಲಿ ಪ್ರಪ್ರಥಮವಾಗಿ ಈ ಯಾತ್ರೆಯನ್ನ ಆರಂಭಿಸಲಾಗಿದೆ ಆದರೆ ಸಮಾವೇಶದಲ್ಲಿ ಅಧಿಕೃತ ಇಲಾಖೆಯ ಮಾಹಿತಿಯ ಪ್ರಕಾರ ಕೇವಲ 2 ರಿಂದ ಎರಡೂವರೆ ಸಾವಿರ ಜನ ಸೇರಿದ್ದು ಬಿಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿಯ ಅಸಮಾಧಾನ ಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರ ನಾಯಕತ್ವದಲ್ಲಿ ನಡೆದ ಸಮಾವೇಶ ಪ್ಲಾಪ್ ಶೋ ಕಂಡಿದೆ ಎನ್ನಲಾಗುತ್ತಿದೆ.

ಕಾಪುವಿನಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಯಾವುದೇ ಕಾಪುವಿಗೆ ಹೊಸ ಪ್ರಾಜೆಕ್ಟ್ ಘೋಷಣೆ ಮಾಡದಿರುವುದು ಕೂಡ ಒಂದು ರೀತಿಯಲ್ಲಿ ಇದೇ ಕಾರಣ ಎನ್ನಲಾಗುತ್ತಿದೆ.

ಈಗಾಗಲೇ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಜನಬೆಂಬಲ ಕಳೆದುಕೊಂಡಿರುವ ಲಾಲಾಜಿ ಆರ್ ಮೆಂಡನ್ ಅವರು ಈ ಸಮಾವೇಶ ನಡೆಸುವ ಮುಖಾಂತರ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬ ಕನಸನ್ನ ಕಂಡಿದ್ದರು ಆದರೆ ಹೇಳಿಕೆ ಕೊಟ್ಟಷ್ಟು ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಲಿಲ್ಲ.

ಈ ಹಿಂದಿನ ದಿನಗಳಲ್ಲಿ ಕಾಪುವಿನಲ್ಲಿ ಬಿಎಸ್ ವೈ ಉಪಸ್ಥಿತಿಯ ಯಾವುದೇ ಭಾಜಪದ ಸಮಾವೇಶ ನಡೆದರೂ ಕೂಡ 15000 (ಹದಿನೈದು ಸಾವಿರ) ಕ್ಕೂ ಮಿಗಿಲಾದ ಕಾರ್ಯಕರ್ತರು ಭಾಗಿಯಾದ ಐತಿಹ್ಯ ಇದೆ ಆದರೆ ಈ ಸಲದ ಚುನಾವಣೆಯ ಪ್ರಚಾರದ ಮೊದಲ ಸಮಾವೇಶವೇ ಕಾಪುವಿನಲ್ಲಿ ಫ್ಲಾಪ್ ಶೋ ಕಂಡಿದೆ.

ಪಕ್ಷದ ಹಿರಿಯರಾದ ಬಿಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಆಗಮಿಸುವ ಈ ಸಮಾವೇಶದಲ್ಲಿ ಕಡಿಮೆ ಎಂದರು 10,000 ಮಂದಿ ಸೇರುವ ಸಮಾವೇಶ ಆಗಬೇಕಾಗಿತ್ತು ಆದರೆ ಇಂದು ನಡೆದ ಈ ಯಾತ್ರೆಯ ಸಮಾವೇಶದಲ್ಲಿ ಕೇವಲ 2 ರಿಂದ 2500 ಸಾವಿರ ಮಂದಿ ಮಾತ್ರ ಭಾಗವಹಿಸಿದ್ದು ವಿಪರ್ಯಾಸವಾಗಿದೆ.

ಲಾಲಾಜಿ ಆರ್ ಮೆಂಡನ್ ರವರ ನಾಯಕತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಜನಬೆಂಬಲ ಕಳೆದುಕೊಂಡಿರುವ ಬಗ್ಗೆ ಸ್ಪಷ್ಟ ಚಿತ್ರಣ ಹೊರಬಿದ್ದಿದೆ.

ಜೈಕಾರ ಚಪ್ಪಾಳೆ ಹಾಕುವ ಉತ್ಸಾಹ ಕೂಡ ಕಳೆದುಕೊಂಡಂತೆ ಇತ್ತು ಇಂದಿನ ಜನ ಸಂಪರ್ಕ ಕಾಪುವಿನ ಜನಸಂಕಲ್ಪ ಸಮಾವೇಶ.
ಪೊಲಿಟಿಕಲ್ ಬ್ಯರೋ ಗ್ರೌಂಡ್  ರಿಪೋರ್ಟ್ ವಿಶ್ವನ್ಯೂಸ್24

Vishwa News 24

Recent Posts

SSLC ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ – vishwanews24

SSLC ಪರೀಕ್ಷೆ ಫಲಿತಾಂಶ: ದ.ಕ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಬೆಂಗಳೂರು: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು,ಈ…

2 hours ago

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ – vishwanews24

ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ವೆಬ್ ಸೈಟ್ ನಲ್ಲಿ ಪ್ರಕಟ ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB) ನಡೆಸಿದ…

2 hours ago

ಉಡುಪಿ: ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ ಪುನರಾರಂಭ – vishwanews24

ಉಡುಪಿ: ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ ಪುನರಾರಂಭ ಉಡುಪಿ : ಹಲವು ದಿನಗಳಿಂದ ಉಡುಪಿಯಲ್ಲಿ ಸ್ಥಗಿತಗೊಂಡಿದ್ದ ಆಟೋ ಎಲ್‌ಪಿಜಿ ಪೂರೈಕೆ…

3 hours ago

ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ – vishwanews24

ಇನ್ಮುಂದೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ FID ಕಡ್ಡಾಯ ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧದಿಂದ ರಸಗೊಬ್ಬರ  ಕಚ್ಚಾವಸ್ತುಗಳ ಕೊರತೆಯ ಆತಂಕ ಎದುರಾಗಿದೆ. ಈ…

3 hours ago

ನಾಳೆ SSLC ಫಲಿತಾಂಶ  ಪ್ರಕಟ – vishwanews24

ನಾಳೆ SSLC ಫಲಿತಾಂಶ  ಪ್ರಕಟ ಬೆಂಗಳೂರು: ನಾಳೆ ಎಸ್‌ಎಸ್‌ಎಲ್‌ಸಿ ಫಲಿತಾಂಶ  ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.…

19 hours ago

ಕಾಪು : ಸ್ಕೂಟಿ ಹಿಂಬದಿಗೆ ತಡೆರಹಿತ ಬಸ್‌ ಢಿಕ್ಕಿ ; ಬಾಲಕಿ ಸಾವು -vishwanews24

ಕಾಪು : ಸ್ಕೂಟಿ ಹಿಂಬದಿಗೆ ತಡೆರಹಿತ ಬಸ್‌ ಢಿಕ್ಕಿ - ಬಾಲಕಿ ಸಾವು ಕಾಪು : ಸರ್ವಿಸ್‌ ರಸ್ತೆಯಿಂದ ರಾಷ್ಟ್ರೀಯ…

1 day ago