Featured

ಕಾಪು: ಅನೈತಿಕ ಪೊಲೀಸ್ ಗಿರಿ – ಹಿಂದು ಸಂಘಟನೆಯ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲು – vishwanews24

ಕಾಪು: ಅನೈತಿಕ ಪೊಲೀಸ್ ಗಿರಿ – ಹಿಂದು ಸಂಘಟನೆಯ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲು

ಉಡುಪಿ: ಭಿನ್ನ ಕೋಮಿಗೆ ಸೇರಿದ ಯುವಕ ಮತ್ತು ಯುವತಿ ಬೈಕಿನಲ್ಲಿ ತೆರಳುತ್ತಿದ್ದಾಗ ಕೆಲವು ಯುವಕರು ತಡೆದು ನಿಲ್ಲಿಸಿ ಬೆದರಿಸಿದ ಘಟನೆಯ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ತಿಂಗಳ 22 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿರಿಮನೆ ಫಾಲ್ಸ್ ಗೆ ತೆರಳಿದ್ದ ಕಾಪು ಮೂಲದ ಯುವಕ ಮತ್ತು ಯುವತಿ ಹಿಂದಕ್ಕೆ ಬರುವಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಯುವತಿ ತಮ್ಮನ್ನು ಬಿಟ್ಟುಬಿಡುವಂತೆ, ತಮ್ಮ ವಿಡಿಯೋ ಮಾಡದಂತೆ ಯುವಕರಲ್ಲಿ ವಿನಂತಿ ಮಾಡಿದ್ದರೂ ಬಿಡದೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಬಳಿಕ ಯುವಕ ಮತ್ತು ಯವತಿಯ ಕುಟುಂಬದ ಸದಸ್ಯರ ಸಮ್ಮುಖ ಮಾತುಕತೆ ನಡೆದು ಎರಡು ಕುಟುಂಬದವರು ಪರಿಚಯಸ್ಥರಾಗಿರುವ ಕಾರಣ ನಮಗೆ ಯಾವುದೇ ರೀತಿಯ ಅನುಮಾನ ಯುವಕನ ಮೇಲೆ ಇಲ್ಲ ಎಂದು ಪ್ರಕರಣ ದಾಖಲಿಸಿದೆ ವಾಪಾಸಾಗಿದ್ದರು.

ಘಟನೆಯ ವೇಳೆ ಸಂಘಟನೆಯ ಯುವಕರು ವೀಡಿಯೋ ಮಾಡಿಕೊಂಡಿದ್ದು ಅದನ್ನು ಪೊಲೀಸರು ಆ ವೇಳೆ ಡಿಲಿಟ್ ಮಾಡಿರಲಿಲ್ಲ ಎನ್ನಲಾಗಿದೆ.

ಬಳಿಕ ಆ ವೀಡಿಯೋಗಳು ಯಶೋಧರ ಯಾನೆ ಯಶು ಮತ್ತು ಹಿಂದೂ ಧರ್ಮ 006 ಎಂಬ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಇನ್ ಸ್ಟಾ ಗ್ರಾಂ ಖಾತೆಯಲ್ಲಿ ವೈರಲ್ ಮಾಡಲಾಗಿದ್ದು ಈ ಘಟನೆಗೆ ಸಂಬಂಧಿಸಿದಂತೆ ಯುವತಿಯ ಸಹೋದರ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ 8-10 ಮಂದಿ ಸಂಘಟನೆಯ ಯುವಕರ ಮೇಲೆ ಪ್ರಕರಣ ದಾಖಲಾಗಿದೆ.

ಆರೋಪಿಗಳ ವಿರುದ್ದ ಅಕ್ರಮಕೂಟ, ಗಲಭೆಗೆ ಯತ್ನ, ಅನಪೇಕ್ಷಿತ ನಿರ್ಬಂಧದಂತಹ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದ್ದು ಕಾನೂನಿನಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ,.ಅರುಣ್ ಕುಮಾರ್ ತಿಳಿಸಿದ್ದಾರೆ.

 

Vishwa News 24

Recent Posts

ಹಿಂದಿ ಕಿರುತೆರೆ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ – vishwanews24

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಲೆ…

42 seconds ago

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್.ಡಿ. ಕುಮಾರಸ್ವಾಮಿ- vishwanews24

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಯಾತ್ರೆ ಕೈಗೊಂಡ ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಶಬರಿಮಲೆ  ಯಾತ್ರೆ ಕೈಗೊಂಡಿದ್ದಾರೆ.…

59 minutes ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಆತಂಕಬೇಡ :ಸಿಎಂ ಡಿಕೆಶಿ ಭರವಸೆ  – vishwanews24

ಎಲ್ಲಾ ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಯಲಿವೆ : ಸಿಎಂ ಡಿಕೆಶಿ ಸ್ಪಷ್ಟನೆ ಬೆಂಗಳೂರು :ಫಲಾನುಭವಿಗಳು ಯಾವುದೇ ಆತಂಕಪಡಬೇಕಾದ ಅಗತ್ಯವಿಲ್ಲ, ಎಲ್ಲಾ…

1 hour ago

ಉಡುಪಿ: ಪೆರ್ಡೂರು ಸಂಜೀವಿನಿ ಒಕ್ಕೂಟಕ್ಕೆ ಲಕ್ಷಾಂತರ ರೂ.ವಂಚನೆ ; ದೂರು ದಾಖಲು – vishwanews24

ಉಡುಪಿ: ಪೆರ್ಡೂರು ಸಂಜೀವಿನಿ ಒಕ್ಕೂಟಕ್ಕೆ ಲಕ್ಷಾಂತರ ರೂ.ವಂಚನೆ ; ದೂರು ದಾಖಲು ಹಿರಿಯಡ್ಕ: ಪೆರ್ಡೂರು ಪದ್ಮ ಕಮಲ ಸಂಜೀವಿನಿ ಗ್ರಾಮ…

1 hour ago

ಹಿರಿಯ ಲೇಖಕಿ ಇಂದಿರಾ ಲಂಕೇಶ್ ನಿಧನ – vishwanews24

ಹಿರಿಯ ಲೇಖಕಿ ಇಂದಿರಾ ಲಂಕೇಶ್ ನಿಧನ ಬೆಂಗಳೂರು: ಹಿರಿಯ ಲೇಖಕಿ ಹಾಗೂ ಖ್ಯಾತ ಪತ್ರಕರ್ತ ದಿವಂಗತ ಪಿ. ಲಂಕೇಶ್ ಅವರ…

2 hours ago

ಕೇರಳದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ‘ಪ್ರಿಯದರ್ಶಿನಿ’ ಯೋಜನೆಗೆ ಸಿಎಂ ಚಾಲನೆ – vishwanews24

ಕೇರಳದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ‘ಪ್ರಿಯದರ್ಶಿನಿ’ ಯೋಜನೆಗೆ ಸಿಎಂ ಚಾಲನೆ ತಿರುವನಂತಪುರಂ: ಮಹಿಳೆಯರು ಮತ್ತು ತೃತೀಯಲಿಂಗಿಗಳಿಗೆ ಉಚಿತ…

2 hours ago