Featured

ಕಾಪು: ಅಪರಿಚಿತ ವ್ಯಕ್ತಿಯೊಬ್ಬ ದಿನಸಿ ಸೇಲ್ಸ್‌ ಮೆನ್‌ ನ ಪರ್ಸ್‌ ಎಗರಿಸಿ ಲಕ್ಷಾಂತರ ರೂ. ದರೋಡೆ – Vishwanews24

ಕಾಪು: ಅಪರಿಚಿತ ವ್ಯಕ್ತಿಯೊಬ್ಬ ದಿನಸಿ ಸೇಲ್ಸ್‌ ಮೆನ್‌ ನ ಪರ್ಸ್‌ ಎಗರಿಸಿ ಲಕ್ಷಾಂತರ ರೂ. ದರೋಡೆ

ಕಾಪು: ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ದಿನಸಿ ಸೇಲ್ಸ್‌ ಮೆನ್‌ ವೃತ್ತಿ ಮಾಡುತ್ತಿದ್ದ ವ್ಯಕ್ತಿಯಲ್ಲಿದ್ದ ಲಕ್ಷಾಂತರ ರೂ. ನಗದನ್ನು ದೋಚಿ ಪರಾರಿಯಾದ ಘಟನೆ ಕಾಪು ಫ್ಲೈ ಓವರ್‌ ಅಡಿಯಲ್ಲಿ  ನಡೆದಿದೆ.

ಉಡುಪಿಯ ಉಮೇಶ್‌ ಪರ್ಸ್‌ ಮತ್ತು ಲಕ್ಷಾಂತರ ರೂ. ಕಳೆದುಕೊಂಡಿರುವ ವ್ಯಕ್ತಿ.ಉಮೇಶ್‌ ಅವರು ನಿಟ್ಟೂರಿನ ಟ್ರೇಡರ್ಸ್‌ವೊಂದರಲ್ಲಿ ಸೇಲ್ಸ್‌ಮೆನ್‌ ಆಗಿ ಕೆಲಸ ಮಾಡಿಕೊಂಡಿದ್ದು ವಾಹನದಲ್ಲಿ ಸಾಮಾಗ್ರಿಗಳನ್ನು ನಿಟ್ಟೂರಿನಿಂದ ಬೈಕಂಪಾಡಿವರೆಗೆ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು.  ಬೆಳಗ್ಗೆ ಸಾಮಗ್ರಿಗಳನ್ನು ತುಂಬಿಸಿಕೊಂಡು ವಿವಿಧ ಕಡೆಗಳಲ್ಲಿ ಲೈನ್‌ ಸೇಲ್‌ ಮಾಡಿ ಹಣ ಸಂಗ್ರಹಿಸಿಕೊಂಡು ಮರಳಿ ನಿಟ್ಟೂರಿನ ಕಡೆ ಹೋಗುತ್ತಿರುವಾಗ ಕಾಪು ಹೊಸ ಮಾರಿಗುಡಿ ಮುಂಭಾಗದ ಅಂಡರ್‌ಪಾಸ್‌ನಲ್ಲಿ ಈ ಘಟನೆ ಸಂಭವಿಸಿದೆ.

ಕಾಪುವಿನ ಜನರಲ್‌ ಸ್ಟೋರ್‌ನ ಮಾಲಕರೊಬ್ಬರು ಕರೆ ಮಾಡಿ ಗೋಧಿ ಕಡಿ ಬೇಕು ಎಂದು ತಿಳಿಸಿದ್ದು, ಅದರಂತೆ ರಾತ್ರಿ 8.45ಕ್ಕೆ ಅಂಗಡಿಗೆ ನೀಡಿ ಹಣವನ್ನು ಪಡೆದು ಅಂಡರ್‌ಪಾಸ್‌ ಕೆಳಕಡೆ ತಲುಪುವಾಗ ಅಪರಿಚಿತ ಬೈಕ್‌ ಸವಾರನೋರ್ವ ಉಮೇಶ್‌ ಬಳಿ ಬೈಕನ್ನು ನಿಲ್ಲಿಸಿ ಅವರಲ್ಲಿದ್ದ ಬ್ಯಾಗನ್ನು ಕಸಿದು ಪರಾರಿಯಾಗಿದ್ದಾನೆ.

ಬ್ಯಾಗಿನಲ್ಲಿ ಲಕ್ಷಾಂತರ ರೂ. ಇತ್ತು ಎಂದು ಉಮೇಶ್‌ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vishwa News 24

Recent Posts

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

31 minutes ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

47 minutes ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

53 minutes ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

1 hour ago

ಉಡುಪಿ ನಗರಸಭೆ ವ್ಯಾಪ್ತಿಯ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ಅನುದಾನ ಮಂಜೂರು ಮಾಡುವಂತೆ  ಶಾಸಕ ಯಶ್ ಪಾಲ್ ಮನವಿ – vishwanews24

ಉಡುಪಿ ನಗರಸಭೆ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ವಿಶೇಷ ಅನುದಾನ ಮಂಜೂರು ಮಾಡುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ…

3 hours ago

ಮಂಗಳೂರು: ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆಲ್ಲುವೆ : ಪೂವಮ್ಮ – vishwanews24

ಮಂಗಳೂರು: ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆಲ್ಲುವೆ : ಪೂವಮ್ಮ ಮಂಗಳೂರು: ಬದುಕಿನಲ್ಲಿ ಅನೇಕ ಏಳು…

4 hours ago