ಕಾಪು: ಅನಾರೋಗ್ಯದಿಂದ ಇರುವ ಬಡ ಅಶಕ್ತ ಮಕ್ಕಳ ವೈದ್ಯಕೀಯ ವೆಚ್ಚ ಭರಿಸಲು ಅಷ್ಟಮಿ ಈ ಬಾರಿ ರವಿ ಕಟಪಾಡಿ ಸೀ ಫೋಕ್ ಎಂಬ ಆಂಗ್ಲ ಚಲನಚಿತ್ರದ ವೇಷವನ್ನು ಧರಿಸಿ ಹಣ ಸಂಗ್ರಹಿಸಿದ್ದರು. ಸಮಾಜ ಸೇವಕ ರವಿ ಕಟಪಾಡಿ ತಂಡವು ಕಟಪಾಡಿಯ ಶ್ರೀ ಕ್ಷೇತ್ರ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬುಸ್ವಾಮಿ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ 5 ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಈ ಬಾರಿ 8,22,212 ರೂ. ಸಂಗ್ರಹಿಸಿದ ಮೊತ್ತವನ್ನು ವಿತರಣೆ ಮಾಡಿದ್ದಾರೆ.
ರವಿ ಕಟಪಾಡಿ ಈ ಸಂದರ್ಭ ಮಾತನಾಡಿ, ತಂಡವು ಡಬ್ಬಿಯನ್ನು ಹಿಡಿಯದೆ ಜನರ ಪ್ರೀತಿ, ವಿಶ್ವಾಸ, ನಂಬಿಕೆಯ ಮೇಲೆಗೆ ಸಂಗ್ರಹವಾಗಿರುವ ಹಣವನ್ನು ಈ ಬಾರಿ ಅನಾರೋಗ್ಯದಿಂದಿರುವ ಕಾರ್ಕಳ ಕಣಜಾರು ನಿಶ್ಮಿತಾ ಕೆ. ಅವರಿಗೆ 3ಲಕ್ಷ ರೂ., ಕುಂದಾಪುರ ಕಟ್ ಬೇಲ್ತೂರು ನಾಗೇಂದ್ರಗೆ 2 ಲಕ್ಷ 50ಸಾವಿರ, ಮಾರಣಕಟ್ಟೆ ಇಡೂರು ಸುಶಾಂತ್ ಶೆಟ್ಟಿಗೆ ಮತ್ತು ಋತಿಕ್ ಮೂಡಬಿದ್ರಿಗೆ ತಲಾ 1 ಲಕ್ಷ ರೂ., ಸಸಿಹಿತ್ಲುವಿನ ಪೂರ್ವಿಗೆ 50 ಸಾವಿರ ನೀಡಲಾಗಿದೆ. ಆ ಮೂಲಕ 9 ವರ್ಷಗಳಿಂದ ಅಷ್ಟಮಿಯಂದು ವೇಷ ಧರಿಸಿ ಸಂಗ್ರಹಿಸಲಾದ ಒಟ್ಟು 1ಕೋಟಿ 22ಲಕ್ಷ ರೂವನ್ನು 118ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಿದಂತಾಗಿದೆ ಎಂದರು.
ಶ್ರೀ ಕ್ಷೇತ್ರ ಪೇಟೆಬೆಟ್ಟು ಗುರಿಕಾರರಾದ ಹರಿಶ್ಚಂದ್ರ ಪಿಲಾರು ಮತ್ತು ತುಕಾರಾಮ ಎಸ್. ಉರ್ವ ಶುಭವನ್ನು ಹಾರೈಸಿದರು.
ಈ ಸಂಧರ್ಭ ಮಹೇಶ್ ಶೆಣೈ, ಅರ್ಚಕರಾದ ಜಯಕರ ವಿ., ಪ್ರಮುಖರಾದ ಯಶವಂತ್, ಶಂಕರ್ ಕಟಪಾಡಿ, ರಾಜ್‌ಗೋಪಾಲ್, ಲಕ್ಷ್ಮಣ್, ಉಮೇಶ್ ಹಾಗೂ ರವಿ ಫ್ರೆಂಡ್ಸ್ ಕಟಪಾಡಿ ತಂದ ಸದಸ್ಯರು ಉಪಸ್ಥಿತರಿದ್ದರು.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…