Featured

ಕಾಪು: ಅ. 15 – 24ವರೆಗೆ 2ನೇ ವರ್ಷದ ಉಚ್ಚಿಲ ದಸರಾ ವೈಭವ – Vishwanews24

ಕಾಪು: ಅ. 15 – 24ವರೆಗೆ 2ನೇ ವರ್ಷದ ಉಚ್ಚಿಲ ದಸರಾ ವೈಭವ

ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಎರಡನೇ ವರ್ಷದ ದಸರಾ ಮಹೋತ್ಸವವು ಅ. 15ರಿಂದ ಅ. 24ರ ವರೆಗೆ ವೈಭವದಿಂದ ಜರಗಲಿದೆ.

ಪ್ರತೀ ದಿನ ಭಜನೆ, ಚಂಡಿಕಾಯಾಗ, ಸಹಸ್ರ ಕುಂಕುಮಾರ್ಚನೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಸಹಿತವಾಗಿ ನವರಾತ್ರಿ ಮತ್ತು ದಸರಾ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ| ಜಿ. ಶಂಕರ್‌ ಹೇಳಿದರು.

ಉಚ್ಚಿಲ ದೇಗುಲದಲ್ಲಿ ರವಿವಾರ ದಸರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿ, ಪ್ರತೀ ದಿನ ನಡೆಯುವ ಅನ್ನಸಂತರ್ಪಣೆಯಲ್ಲಿ ಭುವನೇಂದ್ರ ಕಿದಿಯೂರು ಹಾಲು ಪಾಯಸ ಸೇವೆ ನೀಡಲಿದ್ದಾರೆ. ಉಚ್ಚಿಲ – ಎರ್ಮಾಳು – ಕಾಪು ನಡುವಿನ 14 ಕಿಮೀ. ದೂರದವರೆಗೆ ಕಾಲ್ನಡಿಗೆ ಶೋಭಾಯಾತ್ರೆ ಯಲ್ಲಿ ತೆರಳಿ ಅ. 24ರಂದು ಜಲಸ್ತಂಭನ ನೆರವೇರಿಸಲಾಗುವುದು. ಈ ಬಾರಿಯೂ ಜಲಸ್ತಂಭನವು ಗಂಗಾರತಿ ಸಹಿತ ವಿಶೇಷ ಆಕರ್ಷಣೆಯೊಂದಿಗೆ ನಡೆಯಲಿದೆ ಎಂದರು.

ಸಮಸ್ತ ಮೊಗವೀರ ಸಮಾಜ, ಸರ್ವಭಕ್ತರ ಶ್ರೇಯೋಭಿವೃದ್ಧಿ ಮತ್ತು ಲೋಕ ಕಲ್ಯಾಣದ ಉದ್ದೇಶದೊಂದಿಗೆ ನವರಾತ್ರಿ ಮತ್ತು ದಸರಾ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದರು.

ಇದನ್ನೂ ಓದಿ:

ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಅವರು ಧಾರ್ಮಿಕ ವಿಧಿ ನೇರವೇರಿಸಿದರು. ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಜೀರ್ಣೋದ್ಧಾರಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್‌, ಪ್ರಮುಖರಾದ ಭುವನೇಂದ್ರ ಕಿದಿಯೂರು, ಸುಭಾಸ್‌ಚಂದ್ರ ಕಾಂಚನ್‌ ಬೋಳಾರ್‌, ಹರಿಯಪ್ಪ ಕೋಟ್ಯಾನ್‌, ದಯಾನಂದ ಕೆ. ಸುವರ್ಣ ಮಲ್ಪೆ, ಸುಧಾಕರ ಕುಂದರ್‌ ಬಂಕೇರಕಟ್ಟ, ಸುಜಿತ್‌ ಎಸ್‌. ಸಾಲ್ಯಾನ್‌ ಮುಲ್ಕಿ, ನಾರಾಯಣ ಸಿ. ಕರ್ಕೆರ ಕಾಡಿಪಟ್ಣ, ಕೇಶವ ಎಂ. ಕೋಟ್ಯಾನ್‌ ಕುತ್ಪಾಡಿ, ಸಂಜೀವ ಮೆಂಡನ್‌ ಕೊಪ್ಪಲ, ರವೀಂದ್ರ ಶ್ರೀಯಾನ್‌ ಹಿರಿಯಡ್ಕ, ಶಂಕರ್‌ ಸಾಲ್ಯಾನ್‌ ಬಾರಕೂರು , ಬಡಾ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್‌ ಎರ್ಮಾಳು,ದಿನೇಶ್‌ ಕೋಟ್ಯಾನ್‌ ಮೂಳೂರು, ಮನೋಜ್‌ ಕಾಂಚನ್‌ ಎರ್ಮಾಳ್‌, ಉಷಾರಾಣಿ ಬೋಳೂರು, ಸುಗುಣ ಕರ್ಕೆರ ಮೂಳೂರು, ಮೋಹನ್‌ ಬಂಗೇರ ಕಾಪು, ಸುಕುಮಾರ್‌ ಶ್ರೀಯಾನ್‌, ಸದಾಶಿವ ಕೋಟ್ಯಾನ್‌, ರಾಜೇಂದ್ರ ಸುವರ್ಣ ಹಿರಿಯಡ್ಕ, ಶ್ರೀಪತಿ ಭಟ್‌ ಉಚ್ಚಿಲ, ಸಂತೋಷ್‌ ಸಾಲ್ಯಾನ್‌ ಕೋಳ, ದೇಗುಲದ ವ್ಯವಸ್ಥಾಪಕ ಸತೀಶ್‌ ಅಮೀನ್‌ ಪಡುಕೆರೆ ಉಪಸ್ಥಿತರಿದ್ದರು.

ಇದನ್ನೂ ಓದಿ:

Vishwa News 24

Recent Posts

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

2 hours ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 hours ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 hours ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

6 hours ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

6 hours ago

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ – vishwanews24

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…

6 hours ago