ಕಾಪು : ನಮ್ಮ ದೇಶದಲ್ಲಿ ಬಡ ಜನರಿದ್ದಾರೆ. ಅದೇ ರೀತಿ ಶ್ರೀಮಂತರೂ ಇದ್ದಾರೆ. ಬಡಜನರ ಆಲೋಚನಾ ಕ್ರಮದಂತೆ ಶ್ರೀಮಂತರ ಆಲೋಚನೆ ಮಾಡಿದರೆ ದೇಶದ ಬಡತನ ನಿರ್ಮೂಲನವಾಗಲು ಸಾಧ್ಯ. ಇನ್ನಂಜೆ ರೋಟರಿಯ ಕಾರ್ಯ ಶ್ಲಾಘನೀಯ. ಈ ಕಾರ್ಯಕ್ಕೆ ಕೈಜೋಡಿಸಿದ ದಾನಿಗಳಿಗೂ ಅಭಿನಂದನೆಗಳು ಎಂದು ಮಹಾಲಕ್ಷ್ಮೀ ಕೋ. ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಹೇಳಿದರು.
ಅವರು ಇನ್ನಂಜೆ ರೋಟರಿ ಸಮುದಾಯ ದಳದ ನೇತೃತ್ವದಲ್ಲಿ ಸಂಘ ಸಂಸ್ಥೆಗಳು ಮತ್ತು ದಾನಿಗಳ ಸಹಕಾರದೊಂದಿಗೆ ಸುಮಾರು ೯ ಲಕ್ಷ ರೂಪಾಯಿ ವೆಚ್ಚದಲ್ಲಿ ಇನ್ನಂಜೆ ಕಲ್ಯಾಲುವಿನಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಭ್ರಾಮರಿ ನಿಲಯವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರೋಟರಿ ಸಮುದಾಯದಳದ ಗೌರವ ಸಲಹೆಗಾರ ನವೀನ್ ಅಮೀನ್ ಶಂಕರಪುರ,ಉದ್ಯಮಿ ಶ್ರೀಶ ನಾಯಕ್ ಪೆರ್ಣಂಕಿಲ, ಸಾಮಾಜಿಕ ಕಾರ್ಯಕರ್ತ ಶಶಿಧರ್ ಆಚಾರ್ಯ, ಶಂಕರಪುರ ಜೇಸಿಐ ಅಧ್ಯಕ್ಷ ಜಗದೀಶ್ ಅಮೀನ್, ರೋಟರಿ ಕ್ಲಬ್ ಅಧ್ಯಕ್ಷ ಗ್ಲಾಡ್ಸನ್ ಕುಂದರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೀಜನೆಯ ಮೇಲ್ವಿಚಾರಕಿ ಮಮತಾ, ಇನ್ನಂಜೆ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯ ನಿರ್ವಹಣಾಽಕಾರಿ ಸುಬ್ರಹ್ಮಣ್ಯ ಭಟ್, ಇನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷ ಸದಾಶಿವ ಪೂಜಾರಿ, ಕೃಷ್ಣ ಅಮೀನ್, ಯುವಕ ಮಂಡಲದ ಅಧ್ಯಕ್ಷ ಉಮೇಶ್ ಆಚಾರ್ಯ, ಗ್ರಾ.ಪಂ. ಸದಸ್ಯರಾದ ದಿವೇಶ್ ಶೆಟ್ಟಿ, ಸುರೇಖಾ ಶೆಟ್ಟಿ, ಸವಿತಾ ಶೆಟ್ಟಿ,ವೈ ಎಸ್ ಎಮ್ ಫ್ರೆಂಡ್ಸ್, ಮಡುಂಬು ತಂಡದ ಅಧ್ಯಕ್ಷ ಸುನಿಲ್ ಸಾಲ್ಯಾನ್, ಇಂಜಿನಿಯರ್ ಸುಧಾಕರ್ ಅಂಚನ್, ವಿಕ್ಟರ್ ಮಾರ್ಟಿಸ್, ಚಂದ್ರ ಪೂಜಾರಿ, ಫ್ಲಾವಿಯಾ ಮಿನೇಜಸ್, ಲಕ್ಷ್ಮಣ್ ಪೂಜಾರಿ, ಸಿಲ್ವಿಯಾ ಕೆಸ್ತಲಿನೋ, ಅನಿಲ್ಡಾ ನೊರೋನ್ಹ, ಸಂತೋಷ್ ಕುಮಾರ್, ಪ್ರಶಾಂತ್ ಶೆಟ್ಟಿ ಕಲ್ಲಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಇನ್ನಂಜೆ ರೋಟರಿ ಸಮುದಾಯ ದಳದ ಸಭಾಪತಿ ಮಾಲಿನಿ ಶೆಟ್ಟಿ ಪ್ರಸ್ತಾವನೆಗೈದರು. ಸಮುದಾಯ ದಳದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮನೋಹರ್ ಕಲ್ಲುಗುಡ್ಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ನಾಳೆ ಶಿಕ್ಷೆ ಪ್ರಕಟ ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ…
ಕಾಂಗ್ರೆಸ್‌ನಲ್ಲಿ ಸಂಪುಟ ಸಚಿವ ಸ್ಥಾನಕ್ಕಾಗಿ ಕಸರತ್ತು: 12 ಶಾಸಕರಿಂದ ದೆಹಲಿಯಲ್ಲಿ ಸುರ್ಜೇವಾಲ ಭೇಟಿ ನವದೆಹಲಿ: ಸಚಿವ ಸಂಪುಟ ಪುನಾರಚನೆ ಮಾಡುವಂತೆ…
ಐಎಎಸ್ ಅಧಿಕಾರಿ ಎಂದು ನಂಬಿಸಿ ಕೋಟ್ಯಾಂತರ ರೂ. ವಂಚನೆ : ಆರೋಪಿ ಬಂಧನ ಬೆಂಗಳೂರು :ತಾನು 2023ನೇ ಬ್ಯಾಚ್‌ನ ಐಎಎಸ್…
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ ನವದೆಹಲಿ : ಲೋಕಸಭೆಯಲ್ಲಿ ಗದ್ದಲದ ನಡುವೆಯೇ ಮಹಿಳಾ ಮೀಸಲಾತಿ ಹಾಗೂ…
ಮೇ 1 ರಿಂದ ಶಿವಮೊಗ್ಗ - ಬೆಂಗಳೂರು ವಿಮಾನ ಹಾರಾಟ ಮುಂದುವರೆಸುವಂತೆ ರಾಜ್ಯ ಸರ್ಕಾರಕ್ಕೆ ಸಂಸದ ರಾಘವೇಂದ್ರ ಒತ್ತಾಯ ಶಿವಮೊಗ್ಗ:…
ಬೆಳ್ತಂಗಡಿ: ನಾಯಿ ಅಡ್ಡ ಬಂದು ಆಟೋ ಪಲ್ಟಿ ; ಚಾಲಕ ಸಾವು ಬೆಳ್ತಂಗಡಿ: ನಾಯಿ ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ…