ಕಾಪು : ಇಲ್ಲಿನ ಕಾಂಗ್ರೆಸ್ ಕಚೇರಿ ರಾಜೀವ ಭವನದಲ್ಲಿ ಅಂಬೇಡ್ಕರ್ ಜಯಂತಿಯನ್ನು ಕಾರ್ಯಕರ್ತರ ಸಮ್ಮುಖದಲ್ಲಿ ಆಚರಿಸಲಾಯಿತು.
ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪುಷ್ಪಾರ್ಚನೆಗೈಯುವ ಮುಖಾಂತರ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನವನ್ನು ಕೊಟ್ಟವರು ಅವರು ನೀಡಿರುವ ಸಂವಿಧಾನದಿಂದಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ವಿದ್ಯಾರ್ಥಿ ಜೀವನದಲ್ಲಿ ಶೋಷಣೆಯನ್ನು ಅನುಭವಿಸಿದ ಅಂಬೇಡ್ಕರ್ ಅವರು ಇಂದು ದೇಶದಲ್ಲಿ ಮಹಾನ್ ವ್ಯಕ್ತಿಯಾಗಿದ್ದಾರೆ.
ಸಂವಿಧಾನ ಬದಲಾವಣೆ ಮಾಡಬೇಕೆಂಬ ಕೂಗುತೆಯಲ್ಲಿ ಬರುತ್ತಿದೆ, ಮಹಾತ್ಮ ಗಾಂಧೀಜಿಯನ್ನು ಕೂಡ ಇವತ್ತು ವ್ಯಕ್ತಿತ್ವವನ್ನು ಕೀಲು ಮಾಡುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಸಂವಿಧಾನವನ್ನು ಉಳಿಸುವ ದೃಷ್ಟಿಯಲ್ಲಿ ನಾವೆಲ್ಲರೂ ಪಣತೊಡುವ ಅಗತ್ಯವಾಗಿದೆ.
ಚುನಾವಣೆ ನಡೆಯುವ ಮೊದಲ ಪಟಾಕಿ ಹೊಡೆದರೆ ಸಂಭ್ರಮಿಸುವ ಇಂಥ ಜನರಿಂದ ಸಂವಿಧಾನ ಉಳಿಯಲು ಸಾಧ್ಯವಿದೆಯೇ, ಬಡವರ ಬದುಕನ್ನ ಹಾಳು ಮಾಡಿರುವ ಕಾರಣಕ್ಕಾಗಿ ಪಟಾಕಿ ಹೊಡೆಯುತ್ತಾರೋ, ಅಥವಾ 40% ಕಮಿಷನ್ ಪಡೆದಿರುವುದಕ್ಕೆ ಅವರು ಪಟಾಕಿ ಹೊಡೆಯುತ್ತಾರೋ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅವರು ಹೇಳಿದರು.
ಬಡವರ ರಕ್ಷಣೆ ಮಾಡದ ಬಿಜೆಪಿಯಿಂದ ಯಾವ ರೀತಿಯಲ್ಲಿ ಮತವನ್ನು ಕೇಳುತ್ತದೆ ಎಂಬುದು ಗೊತ್ತಿಲ್ಲ ಕಾಪುವಿನ ಅಭಿವೃದ್ಧಿ ಆಗಿದ್ದರೆ ಅದು ವಿನಯ್ ಕುಮಾರ್ ಸೊರಕೆ ಅವಧಿಯಲ್ಲಿ ಮಾತ್ರ ಎಂಬುದು ಜನರಿಗೆ ಗೊತ್ತಿದೆ ಎಂದರು.
ಈ ಸಂದರ್ಭದಲ್ಲಿ ಬೆಳಪು ದೇವಿ ಪ್ರಸಾದ್ ಶೆಟ್ಟಿ, ಎಂ ಎ ಗಫುರ್ ,ಸುಕುಮಾರ್ ಶೆಟ್ಟಿ ,ನವೀನ್ ಚಂದ್ರ ಶೆಟ್ಟಿ ಶಿವಾಜಿ ಸುವರ್ಣ ಮೂಡುಬೆಳ್ಳೆ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ : ಮಲಬಾರ್ ಗೋಲ್ಡ್‌ನಲ್ಲಿ ‘ನಾಯ್ರಾ’ ನೂತನ ಸಂಗ್ರಹ ಅನಾವರಣ ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ…
ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ : ಕಾಪು ತಾಲೂಕು ಪಡುಬಿದ್ರಿ ಬೇಂಗ್ರೆ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸಮಾಡಿಕೊಂಡಿದ್ದ ಕೂಲಿ…
ಕಾರ್ಕಳದಲ್ಲಿ ಕಾಂಗ್ರೆಸ್ ಪ್ರತಿಭಟನೆ: ಸುನಿಲ್ ಕುಮಾರ್ ರಾಜೀನಾಮೆಗೆ ಆಗ್ರಹ ; ಕಚೇರಿಗೆ ಮುತ್ತಿಗೆ ಯತ್ನ ಕಾರ್ಕಳ: ಸಚಿವ ನಾಗೇಂದ್ರ ರಾಜೀನಾಮೆ…
ಅಯೋಧ್ಯೆ ರಾಮಮಂದಿರದ ಸಿಇಓ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ ಲಕ್ನೋ: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ…
ರಾಹುಲ್ ಗಾಂಧಿಯನ್ನ ರಾಜಕೀಯವಾಗಿ ಮುಗಿಸಲು ಬಿಜೆಪಿ ಸಂಚು ಮಾಡಿದೆ : ಸಿದ್ದರಾಮಯ್ಯ ಬೆಂಗಳೂರು : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ…
ಕುಂದಾಪುರ: ಗಂಗೊಳ್ಳಿಯಲ್ಲಿ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆ; 6 ಮೀನುಗಾರರ ರಕ್ಷಣೆ ಕುಂದಾಪುರ : ಮೀನುಗಾರಿಕೆಗೆ ತೆರಳುತ್ತಿದ್ದ ಮೀನುಗಾರಿಕಾ ಬೋಟ್‌ವೊಂದು…