ಕಾಪು : ಕಾಂಗ್ರೆಸ್ ಮತಾಂತರ ವಿರೋಧಿ ಮಸೂದೆಯನ್ನು ಏಕೆ ವಿರೋಧಿಸುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಶೋಭಾ ಕರಂದ್ಲಾಂಜೆ ಪ್ರಶ್ನಿಸಿದರು.
ಮತಾಂತರ ವಿರೋಧಿ ಮಸೂದೆಗೆ ಕಾಂಗ್ರೆಸ್ ಪಕ್ಷದಿಂದ ವಿರೋಧದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶೋಭಾ, “ಮತಾಂತರ ವಿರೋಧಿ ಕಾನೂನು ಈ ದೇಶದ ಜನರ ಆಶಯವಾಗಿದೆ. ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಮತ ಬ್ಯಾಂಕ್‌ನಲ್ಲಿ ಕೇಂದ್ರೀಕೃತವಾಗಿದೆ. ಲವ್ ಜಿಹಾದ್, ಚಿಕಿತ್ಸೆ , ಬಡತನ ಎಂದು ದುರುಪಯೋಗ ಮಾಡಲಾಗುತ್ತಿದೆ. ಎಷ್ಟೋ ಬಡವರನ್ನು ಮತಾಂತರಿಸಿದ ಉದಾಹರಣೆಗಳಿವೆ. ಮಂಗಳೂರಿನಲ್ಲಿ ಬಲವಂತದ ಮತಾಂತರದಿಂದ ನಾಲ್ವರ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಜೀವಂತ ಉದಾಹಣೆಯಾಗಿದೆ. ಹೀಗಾಗಿ ಸಮಾಜದ ಶಾಂತಿ ಕಾಪಾಡಲು ಈ ಕಾನೂನು ಮುಖ್ಯವಾಗಿದೆ.
ಓಟ್ ಬ್ಯಾಂಕಿಗಾಗಿ ಕಾಂಗ್ರೆಸ್ ಕಾಯ್ದೆ ವಿರೋಧಿಸುತ್ತಿದೆ. ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ನದ್ದು ಅಲ್ಪಸಂಖ್ಯಾತ ಓಟಲ್ಲಿ ಗೆಲ್ಲುವ ಪ್ಲ್ಯಾನ್. ಹಾಗಾದರೆ ನಿಮಗೆ ಬಹು ಸಂಖ್ಯಾತರ ಓಟ್ ಬೇಡವೇ? ಅಲ್ಪಸಂಖ್ಯಾತ ರ ಓಟಲ್ಲಿ ಗೆದ್ದು ಬರ್ತೀರಾ? ಅವರವರು ಅವರ ಧರ್ಮದಲ್ಲಿ ಇದ್ದರೆ ನಿಮಗೆ ಏನು ಸಮಸ್ಯೆ? ಎಂದು ಪ್ರಶ್ನಿಸಿದರು.
ಕರ್ನಾಟಕದ ಜನರು ಕಾಂಗ್ರೆಸ್ ನಾಯಕರ ಶುಭನುಡಿಗಳನ್ನು ಗಮನಿಸುತ್ತಿದ್ದಾರೆ. 2023 ರಲ್ಲಿ ಅಧಿಕಾರಕ್ಕೆ ಬಂದರೆ ಮತಾಂತರ ವಿರೋಧಿ ಮಸೂದೆಯನ್ನು ತೆಗೆದುಹಾಕುತ್ತೇವೆ ಎಂದು ಡಿಕೆಎಸ್ ಹೇಳಿಕೊಂಡಿದ್ದಾರೆ . ಆದರೆ ಕರ್ನಾಟಕದ ಜನತೆ ಅವರಿಗೆ ಅಧಿಕಾರ ನೀಡುತ್ತಾರೋ, ಇಲ್ಲವೋ ಎಂದು ಮೊದಲು ನೋಡಬೇಕು ಎಂದು ಲೇವಡಿ ಮಾಡಿದರು.
ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…