Featured

ಕಾಪು ಕುಲಾಲ ಯುವ ವೇದಿಕೆ ಹಾಗೂ ಕಾಪು ಕುಲಾಲ ಸಂಘದ ವತಿಯಿಂದ ಗುದದ್ವಾರ ಇಲ್ಲದ ಮಗುವಿನ ಚಿಕಿತ್ಸೆಗೆ ಧನಸಹಾಯ.. -Vishwanews24

ಕಾಪು ಕುಲಾಲ ಯುವ ವೇದಿಕೆ ಹಾಗೂ ಕಾಪು ಕುಲಾಲ ಸಂಘದ ವತಿಯಿಂದ ಗುದದ್ವಾರ ಇಲ್ಲದ ಮಗುವಿನ ಚಿಕಿತ್ಸೆಗೆ ಧನಸಹಾಯ.

ಕಾಪು: ನವಜಾತ ಹೆಣ್ಣು ಮಗುವಿಗೆ ಹುಟ್ಟಿನಿಂದಲೇ ಗುದದ್ವಾರ ಇಲ್ಲದೇ, ನಡೆಸಿರುವ ಶಸ್ತ್ರಚಿಕಿತ್ಸೆಯೂ ಯಶಸ್ವಿಯಾಗದೇ ಬಡ ಕುಟುಂಬವೊಂದು ಕಂಗಾಲಾಗಿದ್ದು ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಕಾಪು ಕುಲಾಲ ಯುವ ವೇದಿಕೆ ಹಾಗೂ ಕಾಪು ಕುಲಾಲ ಸಂಘದ ವತಿಯಿಂದ ಒಟ್ಟಾದ ಹಣವನ್ನು ಇಂದು ನೀಡಲಾಯಿತು…

ಕಾಪು ಕುತ್ಯಾರಿನ ಇರಂದಾಡಿಯಲ್ಲಿ ನೆಲೆಸಿರುವ ರವಿ ಕುಲಾಲ್ – ಶೋಭಾ ಕುಲಾಲ್ ದಂಪತಿಯ 9 ತಿಂಗಳ ಲಕ್ಷ್ಯ ಎಂಬ ಹೆಣ್ಣು ಮಗು ಗುದದ್ವಾರ ಇಲ್ಲದೇ ಜನಿಸಿದೆ. ಅಪರೂಪದ ಪ್ರಕರಣವನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸುವಂತೆ ವೈದ್ಯರು ತಿಳಿಸಿದ್ದರು. ಅದರಂತೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಇದನ್ನು ಶಸ್ತ್ರಕ್ರಿಯೆ ಮೂಲಕ ಸರಿಪಡಿಸುವ ಭರವಸೆ ನೀಡಲಾಗಿತ್ತು. ಅದರಂತೆ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಮೊದಲು ಮೂತ್ರಕೋಶದ ಬಳಿ ರಂಧ್ರ ಮಾಡಲಾಯಿತು. ಅದು ಫಲಕಾರಿಯಾಗಲಿಲ್ಲ. ಬಳಿಕ ಹೊಟ್ಟೆ ಭಾಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದೀಗ ಅದೂ ಯಶಸ್ವಿಯಾಗದೇ ರವಿ ಕುಟುಂಬ ಬಹಳಷ್ಟು ತೊಂದರೆ, ನೋವು ಅನುಭವಿಸಿದೆ.

ಇದೀಗ ಇನ್ನೊಂದು ಶಸ್ತ್ರಚಿಕಿತ್ಸೆ ನಡೆಸಬೇಕಾಗಿದ್ದು, ಅದಕ್ಕಾಗಿ ಮಗುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂದಿನ ಚಿಕಿತ್ಸೆಗೆ ಒಂದು ಲಕ್ಷಕ್ಕೂ ಅಧಿಕ ರೂಪಾಯಿ ವೆಚ್ಚವಾಗಬಹುದೆಂದು ವೈದ್ಯರು ತಿಳಿಸಿದ್ದು, ಬಡ ಕುಟುಂಬಕ್ಕೆ ಇಷ್ಟು ಹಣ ಹೊಂದಿಸುವ ಶಕ್ತಿ ಇಲ್ಲ. ಮೇಸ್ತ್ರಿ ಕೆಲಸ ಮಾಡುವ ರವಿ ಕುಲಾಲ್, ಬೀಡಿ ಕಾರ್ಮಿಕರಾಗಿರುವ ಶೋಭಾ ಅವರ ಮಗುವಿನ ಚಿಕಿತ್ಸೆಗೆ ದಾನಿಗಳಿಂದ ಒಟ್ಟಾದ ರೂ 29,900 ನ್ನು ಮಗುವಿನ ಪೋಷಕರಿಗೆ ಹಸ್ತಾಂತರಿಸಲಾಯಿತು..

ಹಣ ಹಸ್ತಾಂತರ ಸಂದರ್ಭ ಕಾಪು ಕುಲಾಲ ಯುವ ವೇದಿಕೆಯ ಅಧ್ಯಕ್ಷರು ಉದಯ ಕುಲಾಲ್ ಕಳತ್ತೂರು, ವಕೀಲರು ಸುನಿಲ್ ಎಸ್ ಮೂಲ್ಯ, ಶಂಕರ್ ಕುಲಾಲ್ ಇರಂದಾಡಿ, ಕಾಪು ಕುಲಾಲ ಸಂಘದ ಅಧ್ಯಕ್ಷರು ರಾಜೇಶ್ ಕುಲಾಲ್ ಬೊಬ್ಬೆಟ್ಟು,ಉಪಾಧ್ಯಕ್ಷರು ಸಂದೀಪ್ ಬಂಗೇರ ಶಂಕರಪುರ,ಪ್ರಧಾನ ಕಾರ್ಯದರ್ಶಿ ಸುರೇಶ್ ಕುಲಾಲ್ ಕೆಮುಂಡೇಲು , ಸುರೇಶ್ ಡಿ ಕುಲಾಲ್ ಇನ್ನ, ಯೋಗೀಶ್ ಕುಲಾಲ್ ಉಳ್ಳೂರು,ರವಿರಾಜ್ ಆಚಾರ್ಯ ಕುಕ್ಕುಂಜ,ಶಶಿಧರ್ ಕುಲಾಲ್,,ದಿನೇಶ್ ಕುಲಾಲ್ ಮಲಂಗೋಳಿ ಉಪಸ್ಥಿತರಿದ್ದರು..

ಆ ಮಗುವಿಗೆ ನೆರವು ನೀಡುವವರ ಗಮನಕ್ಕೆ.

ಬ್ಯಾಂಕ್ ಮಾಹಿತಿ.
ವಿಜಯ ಬ್ಯಾಂಕ್ ಕಳತ್ತೂರು
ಅಕೌಂಟ್ ನಂಬರ್–110401010003634
IFSC CODE- VIJBOOO21O4
Mobil number -9632298741

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago