Featured

ಕಾಪು: ಕೋರ್ಟ್‌ ವಾರೆಂಟ್‌ ತಂದವರ ಮೇಲೆ ಕಾರು ಚಲಾಯಿಸಿ ಆರೋಪಿ ಪರಾರಿ – Vishwanews24

ಕಾಪು: ಕೋರ್ಟ್‌ ವಾರೆಂಟ್‌ ತಂದವರ ಮೇಲೆ ಕಾರು ಚಲಾಯಿಸಿ ಆರೋಪಿ ಪರಾರಿ

ಕಾಪು: ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ದಸ್ತಗಿರಿ ವಾರಂಟ್‌ ಜಾರಿಯಾಗಿದ್ದ ಆರೋಪಿಯ ಮನೆಗೆ ಕೋರ್ಟ್‌ ವಾರಂಟ್‌ ತಂದವರ ಮೇಲೆ ಕಾರು ಚಲಾಯಿಸಿ ಆರೋಪಿತ ಪರಾರಿಯಾದ ಘಟನೆ ಮಾ. 5ರಂದು ಕಟಪಾಡಿ ಅಚ್ಚಡದಲ್ಲಿ ನಡೆದಿದೆ.

ಕಟಪಾಡಿ ಅಚ್ಚಡ ನಿವಾಸಿ ಸಾದಿಕ್‌ ವಾರಂಟ್‌ ತಂದವರ ಮೇಲೆ ಕಾರು ಚಲಾಯಿಸಿ ಪರಾರಿಯಾದಾತ.

ಉಡುಪಿ ಕೋರ್ಟ್‌ನ ಆದೇಶದಂತೆ ಆರೋಪಿ ಸಾದಿಕ್‌ನನ್ನು ಮಾ. 7ರೊಳಗೆ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರ್ಟ್‌ ಸೂಚಿಸಿದ್ದ ಹಿನ್ನೆಲೆಯಲ್ಲಿ ಉಡುಪಿಯ ಕೌಟುಂಬಿಕ ನ್ಯಾಯಾಲಯದ ಬೈಲಿಫ್‌, ಪ್ರಸ್ತುತ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಸಂಪತ್‌ ಮತ್ತಿತರರು ಆರೋಪಿಯ ಮನೆಗೆ ತೆರಳಿದ್ದರು.

ಆರೋಪಿಗೆ ದಸ್ತಗಿರಿ ವಾರೆಂಟ್‌ನ ವಿಷಯವನ್ನು ತಿಳಿಸಿ ತಮ್ಮೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿದಾಗ, ಆತ ನ್ಯಾಯಾಲಯಕ್ಕೆ ಹಾಜರಾಗಲು ಒಪ್ಪದೆ ತನ್ನ ಕಾರಲ್ಲಿ ಕುಳಿತು ಎದುರಿನಲ್ಲಿದ್ದ ಮೂವರ ಮೈಮೇಲೆ ಕಾರು ಚಲಾಯಿಸಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Vishwa News 24

Recent Posts

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

5 minutes ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

21 minutes ago

ಉಡುಪಿ ನಗರಸಭೆ ವ್ಯಾಪ್ತಿಯ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ಅನುದಾನ ಮಂಜೂರು ಮಾಡುವಂತೆ  ಶಾಸಕ ಯಶ್ ಪಾಲ್ ಮನವಿ – vishwanews24

ಉಡುಪಿ ನಗರಸಭೆ ಮೂಲ ಸೌಕರ್ಯ ಅಭಿವೃದ್ಧಿಗೆ ರೂ. 30 ಕೋಟಿ ವಿಶೇಷ ಅನುದಾನ ಮಂಜೂರು ಮಾಡುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ…

3 hours ago

ಮಂಗಳೂರು: ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆಲ್ಲುವೆ : ಪೂವಮ್ಮ – vishwanews24

ಮಂಗಳೂರು: ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಚಿನ್ನ ಗೆಲ್ಲುವೆ : ಪೂವಮ್ಮ ಮಂಗಳೂರು: ಬದುಕಿನಲ್ಲಿ ಅನೇಕ ಏಳು…

3 hours ago

ಉಡುಪಿ ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟಕ್ಕೆ ಲೈಸನ್ಸ್ : ಅರ್ಜಿ ಸಲ್ಲಿಸಲು ಅ.26 ಕೊನೆಯ ದಿನ – vishwanews24

ಉಡುಪಿ :ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ; ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಸಲು ಅ. 26 ಕೊನೆಯ ದಿನ ಉಡುಪಿ: ದೀಪಾವಳಿ…

3 hours ago

ಉಡುಪಿ : ಯಕ್ಷಗಾನವನ್ನು ‘ಕರ್ನಾಟಕ ರಾಜ್ಯ ಕಲೆ’ ಎಂದು ಘೋಷಿಸಿ : ಮುಖ್ಯಮಂತ್ರಿಗಳಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮನವಿ – vishwanews24

ಉಡುಪಿ : ಯಕ್ಷಗಾನವನ್ನು ‘ಕರ್ನಾಟಕ ರಾಜ್ಯ ಕಲೆ’ ಎಂದು ಘೋಷಿಸಿ : ಮುಖ್ಯಮಂತ್ರಿಗಳಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಮನವಿ ಉಡುಪಿ…

3 hours ago