Featured

ಕಾಪು: ಗೂಡ್ಸ್ ವಾಹನದಲ್ಲಿ ಮಕ್ಕಳ ಅಪಾಯಕಾರಿ ಪ್ರಯಾಣ ವಿಡಿಯೋ ವೈರಲ್ ; ಪ್ರಕರಣ ದಾಖಲು, ವಾಹನ ವಶಕ್ಕೆ – vishwanews24

ಕಾಪು: ಗೂಡ್ಸ್ ವಾಹನದಲ್ಲಿ ಮಕ್ಕಳ ಅಪಾಯಕಾರಿ ಪ್ರಯಾಣ ವಿಡಿಯೋ ವೈರಲ್ ; ವಾಹನ ವಶಕ್ಕೆ – ಪೊಲೀಸರಿಂದ ಪ್ರಕರಣ ದಾಖಲು

ಕಾಪು: ಪಿಕ್‌ಅಪ್ ವಾಹನದ ಹಿಂಬದಿ ಬಾಡಿಯಲ್ಲಿ ಸುಮಾರು 8ರಿಂದ 10 ಮಕ್ಕಳನ್ನು ನಿಲ್ಲಿಸಿಕೊಂಡು ಮಾನವ ಜೀವಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ವಾಹನ ಚಲಾಯಿಸಿದ ಘಟನೆಗೆ ಸಂಬಂಧಿಸಿ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಸೆ.10ರಂದು ಸಂಜೆ 7.30ರ ಸುಮಾರಿಗೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಅಂಡರ್‌ಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು–ಉಡುಪಿ ರಸ್ತೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ KL-33-B-7463 ನೋಂದಣಿ ಸಂಖ್ಯೆಯ ಪಿಕ್‌ಅಪ್ ವಾಹನದ ಚಾಲಕನು ವಾಹನದ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ, ಸುಮಾರು 8ರಿಂದ 10 ಮಕ್ಕಳನ್ನು ವಾಹನದ ಹಿಂಬದಿಯ ಬಾಡಿಯಲ್ಲಿ ನಿಲ್ಲಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಪ್ರಕರಣ ದಾಖಲು – ವಾಹನ ಜಪ್ತಿ: ವಿಡಿಯೋ ಸುಳಿವು ಆಧರಿಸಿ ತಕ್ಷಣ ಕಾರ್ಯಪ್ರವೃತ್ತರಾದ ಕಾಪು ಪೊಲೀಸ್ ಠಾಣೆಯ ಅಧಿಕಾರಿಗಳು, ಶುಕ್ರವಾರ (ಸೆ. 11) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಲಾದ ಗೂಡ್ಸ್ ವಾಹನವನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿರುವ ಪೊಲೀಸರು, ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Vishwa News 24

Recent Posts

ಪಡುಬಿದ್ರಿ ಕಡಲತೀರದಲ್ಲಿ 5 ವರ್ಷಗಳಿಂದ ತೆರವಾಗದ ಟಗ್ ; ಸ್ಥಳೀಯರು, ಮೀನುಗಾರರಲ್ಲಿ ಆತಂಕ – vishwanews24

ಪಡುಬಿದ್ರಿ ಕಡಲತೀರದಲ್ಲಿ 5 ವರ್ಷಗಳಿಂದ ತೆರವಾಗದ ಟಗ್.. ಸ್ಥಳೀಯರು ಹಾಗೂ ಮೀನುಗಾರರಲ್ಲಿ ಆತಂಕ .. ಟಗ್‌ ಶೀಘ್ರ ತೆರವಿಗೆ ಆಗ್ರಹ…

2 minutes ago

ಉಡುಪಿ :  ಸೆ. 16 ರಂದು ನೇರ ಸಂದರ್ಶನ – vishwanews24

ಉಡುಪಿ :  ಸೆ. 16 ರಂದು ನೇರ ಸಂದರ್ಶನ ಉಡುಪಿ : ನಗರದ ಕಲ್ಸಂಕ ಜಂಕ್ಷನ್ ಬಳಿಯ ಭರತ್ ಪ್ರೆಸ್…

42 minutes ago

ಉಡುಪಿ : ಯುವತಿ ನಾಪತ್ತೆ – vishwanews24

ಉಡುಪಿ : ಯುವತಿ ನಾಪತ್ತೆ ಉಡುಪಿ : ಕಿನ್ನಿಮುಲ್ಕಿ ವೇಗಸ್ ಟೌನ್‌ಶಿಪ್‌ನಲ್ಲಿ ವಾಸವಾಗಿದ್ದ ಪೂಜಾ (18) ಎಂಬ ಯುವತಿಯು ತಾನು…

50 minutes ago

ಉಡುಪಿ : ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಣೆಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ – vishwanews24

ಉಡುಪಿ : ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಣೆಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ಉಡುಪಿ : ಮಣ್ಣಿನಿಂದ…

53 minutes ago

ಗಣೇಶೋತ್ಸವ ಹಿನ್ನೆಲೆ: ಉಡುಪಿ ಜಿಲ್ಲೆಯಲ್ಲಿ ಮೂರು ದಿನ ಮದ್ಯ ಮಾರಾಟ ನಿಷೇಧ – vishwanews24

ಗಣೇಶೋತ್ಸವ ಹಿನ್ನೆಲೆ: ಉಡುಪಿ ಜಿಲ್ಲೆಯಲ್ಲಿ ಸೆ.14, 16 ಮತ್ತು 18ರಂದು ಮೂರು ದಿನ ಮದ್ಯ ಮಾರಾಟ ನಿಷೇಧ ಉಡುಪಿ: ಶಾಂತಿಯುತ…

58 minutes ago

ಗಣೇಶ ಹಬ್ಬದ ಹಿನ್ನೆಲೆ : ಸೆ. 14ರಂದು ಮುಳ್ಳಯ್ಯನಗಿರಿಗೆ ಪ್ರವೇಶ ನಿರ್ಬಂಧ – vishwanews24

ಗೌರಿ - ಗಣೇಶ ಹಬ್ಬದ ಹಿನ್ನೆಲೆ  : ಸೆ.14ರಂದು ಮುಳ್ಳಯ್ಯನಗಿರಿ ಸೇರಿ ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧ ಚಿಕ್ಕಮಗಳೂರು: ಗೌರಿ-ಗಣೇಶ…

1 hour ago