ಕಾಪು: ಮಾಜಿ ಸಚಿವ ವಿನಯ ಕುಮಾರ್ ಸೊರಕೆಯ ಶಿಫಾರಸ್ಸಿನಡಿಯಲ್ಲಿ ನಿರ್ಮಾಣಗೊಂಡ ಹತ್ತು ಕೋಟಿ ವೆಚ್ಚದ ಕಾಪು ತಾಲೂಕು ಆಡಳಿತ ಸೌಧದ ಉದ್ಘಾಟನೆಯ ಭಾಗ್ಯ ಶಾಸಕ ಲಾಲಾಜಿ ಆರ್ ಮೆಂಡನ್ ಅವರಿಗೆ ಒದಗಿಬಂದಿದ್ದರೂ ಕೂಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೇರಿದ್ದು ಕೇವಲ ಬೆರಳೆಣಿಕೆಯ 350 ಮಂದಿ ಎಂಬುದು ವಿಪರ್ಯಾಸ.
ಕಂದಾಯ ಸಚಿವರಿಂದ ಉದ್ಘಾಟನೆಯಾಗಬೇಕಿದ್ದ ಸೌಧ ಶಾಸಕರ ಸಂವಹನ ಕೊರತೆಯಿಂದ ಸಚಿವರು ಸಮಯ ಒದಗಿಸಿಲ್ಲ ಎಂಬ ಮಾಹಿತಿ ಹೊರಬಿದ್ದಿದ್ದು ಸದ್ಯ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಅಂಗಾರ ಕಟ್ಟಡ ಉದ್ಘಾಟಿಸುವ ಕುರಿತಾಗಿ ಆಮಂತ್ರಣ ಪತ್ರಿಕೆ ಮುದ್ರಣವಾಗಿತ್ತು ಆದರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದದೂ ಕೂಡ ಕಾರ್ಯಕ್ರಮದಲ್ಲಿ ಗೈರಾಗಿದ್ದರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಕಟ್ಟಡ ಮತ್ತು ಕಾರ್ಯಕ್ರಮ ಉದ್ಘಾಟಿಸಿದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ಬೆರಳೆಣಿಕೆಯ 300 ಮಂದಿ
ಕಾಪುವಿಗೆ ಹೊಸ ಮೆರಗು ಕೊಡುವಂತಹ ತಾಲೂಕು ಆಡಳಿತ ಕಚೇರಿಯ ಉದ್ಘಾಟನೆ ಹಬ್ಬದ ಸಂಭ್ರಮವಾಗಬೇಕಿತ್ತು ಮತ್ತು ಜನ ಸಾಮಾನ್ಯರಿಗಾದರೂ ಮಾಹಿತಿ ನೀಡುವ ಕೆಲಸ ಆಗಬೇಕಿತ್ತು ಆದರೆ ಯಾವುದೇ ಪ್ರಚಾರ ನೀಡದೆ ತುರ್ತಾಗಿ ಉದ್ಘಾಟನೆ ಮಾಡುವ ಉದ್ದೇಶವೇನಿತ್ತು ಎಂಬುದು ಪ್ರಶ್ನೆ.
2000 ಮಂದಿಯ ಊಟ-700 ಟಿಫಿನ್ ವೇಸ್ಟ್
ಕಾಪು ತಾಲೂಕು ಆಡಳಿತ ಕಚೇರಿ ಉದ್ಘಾಟನೆಗೆ ಆಗಮಿಸುವ ಸಾರ್ವಜನಿಕರಿಗಾಗಿ ಬೆಳಿಗ್ಗೆ 700 ಟಿಫಿನ್ ಮತ್ತು ಮಧ್ಯಾಹ್ನ2000 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಆದರೇ ಕಾರ್ಯಕ್ರಮಲ್ಲಿ ಸೇರಿದ್ದು ಕೇವಲ 350 ಮಂದಿ ಅದರಲ್ಲೂ 100ಮಂದಿ ಅಧಿಕಾರಿಗಳು ಹಾಗೂ ಫಲಾನುಭವಿಗಳು ಸದ್ಯ ದಾನಿಗಳಿಂದ ಸಂಗ್ರಹಿಸಿ ವ್ಯವಸ್ಥೆ ಮಾಡಿದ್ದ ಊಟ ಕೂಡ ವೇಸ್ಟ್ ಆಗಿದೆ ಎಂಬುದು ಬೇಸರದ ಸಂಗತಿ.
ಬ್ಯುರೋ ರಿಪೋರ್ಟ್ ವಿಶ್ವನ್ಯೂಸ್24 ಕಾಪು
ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು…
ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ ; ನನ್ನ ಹೇಳಿಕೆ ತಿರುಚಲಾಗಿದೆ : ಸಿಎಂ ಬೆಂಗಳೂರು: ನನಗೆ ಮದ…
ಎಂಆರ್‌ಪಿಎಲ್ ಜೀವಂತ ಜ್ವಾಲಾಮುಖಿಯಾಗದಂತೆ ಎಚ್ಚರ ವಹಿಸಿ: ಸತ್ಯಜಿತ್ ಸುರತ್ಕಲ್ ಮಂಗಳೂರು: ಎಂಆರ್‌ಪಿಎಲ್‌ನಂತಹ ಸಂಸ್ಥೆ ಕರಾವಳಿಯಲ್ಲಿರುವುದು ಹೆಮ್ಮೆಯ ವಿಚಾರವಾದರೂ, ಆಡಳಿತ ವರ್ಗ…
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ…
ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…
ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…