ಕಾಪು: ರಾಜ್ಯದ ಹಲವೆಡೆ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತಿರುವ ಸುದ್ದಿ ಕೇಳಿ ಬರುತ್ತಿರುವ ಬೆನ್ನಲ್ಲೇ ಉಡುಪಿ ಜಿಲ್ಲೆಯ ಕಾಪು ತಾಲೂಕು ಕೋಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಟ್ಟು ವಾರ್ಡಿನ ಪರಿಶಿಷ್ಟ ಪಂಗಡ ಗೊಡ್ಡ ಸಮುದಾಯದವರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮತದಾನ ಬಹಿಷ್ಕಾರದ ಕೂಗು ಕೇಳಿಬರುತ್ತಿದೆ.
ತಮ್ಮ ಆರಾಧ್ಯ ದೈವ ಸುಮಾರು 300 ವರ್ಷಗಳ ಇತಿಹಾಸ ಇರುವ ಮಟ್ಟು ಶ್ರೀ ಬ್ರಹ್ಮ್ಮ ಮುಗ್ಗೆರ್ಕಳ ದೈವಸ್ಥಾನ 2018ರಲ್ಲಿ ಊರ ಹಾಗೂ ಪರವೂರ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರಗೊಂಡಿದ್ದು , ಕೇವಲ ಕೇವಲ ಗರ್ಭಗುಡಿ ಹಾಗೂ ಮುಖಮಂಟಪದ ಕಾಮಗಾರಿ ಮಾತ್ರ ಪೂರ್ಣಗೊಂಡಿರುತ್ತದೆ . ಅಗ್ರ ಸಭೆ ಹಾಗೂ ಆವರಣಗೋಡೆ ಕಾಮಗಾರಿ ಬಾಕಿ ಇರುತ್ತದೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪರಿಶಿಷ್ಟರಾದ ನಮಗೆ ಕಷ್ಟ ಸಾದ್ಯ ಆದ್ದರಿಂದ ನಾವು ಸರ್ಕಾರದ ಜನಪ್ರತಿನಿಧಿಗಳಿಗೆ ಹಾಗೂ ಮುಜರಾಯಿ ಇಲಾಖೆಗೆ ಸರಕಾರಿ ಅನುದಾನಕ್ಕೆ ಮನವಿ ಸಲ್ಲಿಸಿರುತ್ತೇವರ ಆದರೆ ಎರಡು ವರ್ಷ ಕಳೆದರೂ ಯಾವುದೇ ಸೂಕ್ತ ಸರಕಾರಿ ಅನುದಾನ ನಮಗೆ ಸಿಕ್ಕಿರುವುದಿಲ್ಲ ಎಂದು ಗುರುರಾಜ್ ಅವರು ಆಕ್ರೋಶ ಹೊರ ಹಾಕಿದರು. ಅಲ್ಲದೇ ನಮ್ಮ ವಾರ್ಡ್ನಲ್ಲಿ 3-4 ದಿವಸಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದ್ದು ಅದಕ್ಕೂ ಪರಿಶಿಷ್ಟರಾದ ನಮ್ಮಿಂದ ಪಂಚಾಯತ್ ನೀರಿನ ಬಿಲ್ಲುನ್ನು ಪ್ರತಿ ತಿಂಗಳು ಪಡೆಯುತ್ತಾರೆ.ಸುಮಾರು 50 ಪರಿಶಿಷ್ಟ ಕುಟುಂಬಗಳು ಈ ಭಾಗದಲ್ಲಿ ವಾಸಿಸುತ್ತಿದ್ದು ಕೆಲವು ಕುಟುಂಬಗಳಿಗೆ ಸೂಕ್ತ ಜಾಗ ಹಾಗೂ ಮನೆಯ ವ್ಯವಸ್ಥೆ ಇರುವುದಿಲ್ಲ ಅದರಿಂದ ನಮಗೆ ಸೂಕ್ತ ಸರಕಾರಿ ಜಾಗವನ್ನು ನೀಡಲು ಆಗ್ರಹಿಸುತ್ತೇವೆ .ಅಲ್ಲದೆ ನಮ್ಮಲ್ಲಿರುವ ವಿದ್ಯಾವಂತ ಯುವಕ ಯುವತಿಯರಿಗೆ ಕೋಟೆ ಪಂಚಾಯತ್ ನಲ್ಲಿ ಉದ್ಯೋಗ ನೀಡುವಂತೆ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡುತ್ತಿದ್ದೇವೆ ಎಂದರು.
ಈ ಬಾರಿಯೂ ಬೇಡಿಕೆ ಈಡೇರಿಸದೆ ಇದ್ದಲ್ಲಿ ತಾ.ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕೂಡ ಮತದಾನ ಬಹಿಷ್ಕಾರ ಮಾಡುವ ನಿಲುವಾಗಿದೆ ಎಂದರು.
ಈ ಸಂಧರ್ಭದಲ್ಲಿ ಪ್ರಮುಖರಾದ ನಾಗರಾಜ, ದಿನೇಶ್,ಪ್ರದೀಪ್,ರಾಘು,ಧನಂಜಯ ಮೊದಲಾದವರು ಉಪಸ್ಥಿತಿತರಿದ್ದರು.
ಬ್ಯೂರೋ ರಿಪೋರ್ಟ್
ವಿಶ್ವ ನ್ಯೂಸ್24 ಉಡುಪಿ
ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…
ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…
ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…
ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…
ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…
180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…