Featured

ಕಾಪು ದಂಡತೀರ್ಥ ಕೆರೆಯಲ್ಲಿ ಕೃಷ್ಣಾಪುರದ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಪವಿತ್ರ ಸ್ನಾನ:vishwanews24

ಕಾಪು ದಂಡತೀರ್ಥ ಕೆರೆಯಲ್ಲಿ ಕೃಷ್ಣಾಪುರದ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಪವಿತ್ರ ಸ್ನಾನ:vishwanews24

ಕಾಪು: ಸರ್ವಜ್ಞ ಪೀಠಾರೋಹಣಕ್ಕೆ ಮುನ್ನ ಪರ್ಯಾಯೋತ್ಸವದ ಸಂಪ್ರದಾಯದಂತೆ ಕೃಷ್ಣಾಪುರದ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಗುರುವಾರ ಬೆಳಗ್ಗಿನ ಜಾವ 2.30ಕ್ಕೆ ಕಾಪು ದಂಡತೀರ್ಥ ಮಠದ ದಂಡತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ ನೆರವೇರಿಸಿದರು.
ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರನ್ನು ಕಾಪು ದಂಡತೀರ್ಥ ಮಠದ ತೋಟಂತಿಲ್ಲಾಯ ವಂಶಸ್ಥರಾದ ಡಾ. ಸೀತಾರಾಮ ಭಟ್‌ ನೇತೃತ್ವದಲ್ಲಿ ಅರ್ಚಕ ಶ್ರೀನಿವಾಸ್‌ ಭಟ್‌ ಹಾಗೂ ತೋಟಂತಿಲ್ಲಾಯ ಕುಟುಂಬಸ್ಥರು ಶಂಕರಪುರ ಮಲ್ಲಿಗೆಯ ಹಾರ ಹಾಕಿ ಸ್ವಾಗತಿಸಿ ಮಠಕ್ಕೆ ಬರಮಾಡಿಕೊಂಡರು. ಮಠ ಪ್ರವೇಶಿಸಿದ ಶ್ರೀಗಳು ಕೆಲ ಕ್ಷಣ ವಿಶೇಷ ಸಿಂಹಾಸನದಲ್ಲಿ ಆಸೀನರಾಗಿ ಬಳಿಕ ನಿತ್ಯ ಕರ್ಮಾದಿಗಳನ್ನು ಪೂರೈಸಿ ತಮ್ಮ ಶಿಷ್ಯಗಡಣದೊಂದಿಗೆ ದಂಡತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ, ಜಪತಪಾದಿಗಳನ್ನು ನೆರವೇರಿಸಿದರು.
ಬಳಿಕ ಪಲಿಮಾರು ಮಠದ ಪಟ್ಟದ ದೇವರು ಸಮೇತ ದಂಡತೀರ್ಥ ಮಠದ ದೇವರಾದ ಕುಂಜಿ ಗೋಪಾಲಕೃಷ್ಣ ಹಾಗೂ ರಾಮ, ಕೃಷ್ಣ, ಲಕ್ಷ ್ಮಣ, ಭೂದೇವಿ, ಶ್ರೀದೇವಿ ಮತ್ತು ಹಾಗೂ ಮುಖ್ಯಪ್ರಾಣ ದೇವರಿಗೆ ಏಕ ನೈವೇದ್ಯ ಸಮರ್ಪಿಸಿ ಮಹಾಮಂಗಳಾರತಿ ನೆರವೇರಿಸಿದರು. ನಂತರ ಉಡುಪಿಗೆ ತೆರಳಿ ಸರ್ವಜ್ಞ ಪೀಠಾರೋಹಣಕ್ಕೆ ಪೂರ್ವ ಜೋಡುಕಟ್ಟೆಯಿಂದ ಹೊರಟ ಪರ್ಯಾಯ ಮೆರವಣಿಗೆ ಸೇರಿಕೊಂಡರು. ಸ್ವಾಮೀಜಿಯೊಂದಿಗೆ ಅವರ ಶಿಷ್ಯಗಡಣ, ಭಕ್ತಾದಿಗಳು ಹಾಗೂ ಮಠದ ಕಾರ್ಯಕರ್ತರು ಉಪಸ್ಥಿತರಿದ್ದರು.
ಆಚಾರ್ಯರು ಸೃಷ್ಟಿಸಿದ ಕೆರೆಯಲ್ಲಿ ಸ್ನಾನ
ಆಚಾರ್ಯ ಮಧ್ವರು ತಮ್ಮ ಅವತಾರ ಭೂಮಿಯಾದ ಪಾಜಕದಿಂದ ಪ್ರಾಥಮಿಕ ಶಿಕ್ಷ ಣಕ್ಕಾಗಿ ಕಾಪು ಬಳಿಯ ಉಳಿಯಾರಗೋಳಿಗೆ ಬಂದು ಇಲ್ಲಿನ ತೋಟಂತಿಲ್ಲಾಯರೆನ್ನುವ ಐಗಳ ಬಳಿ ವೇದಾಧ್ಯಯನಾದಿ ವಿದ್ಯಾಭ್ಯಾಸ ನಡೆಸಿದ್ದರು.
ವಿದ್ಯಾಭ್ಯಾಸ ಮುಗಿಸಿ ಹಿಂದಿರುಗುವ ವೇಳೆ ಆಚಾರ್ಯರು ತಮ್ಮ ಗುರುಗಳಿಗೆ ಗುರುದಕ್ಷಿಣೆಯ ರೂಪದಲ್ಲಿ ಗುರುಗಳ ಆಶಯದಂತೆ ಪರಿಸರದ ನೀರಿನ ಸಮಸ್ಯೆ ಹೋಗಲಾಡಿಸುವ ಸಂಕಲ್ಪದಿಂದ ತಮ್ಮ ತಪೋದಂಡದಿಂದ ನೆಲವನ್ನು ಗೀರಿ ಈ ಸ್ಥಳದಲ್ಲಿ ನೀರಿನ ಸೆಲೆ ಉಕ್ಕುವಂತೆ ಮಾಡಿದ್ದರಂತೆ. ಇದರಿಂದಾಗಿ ಇಲ್ಲಿ ಕೆರೆ ನಿರ್ಮಾಣವಾಗಿ ಮುಂದೆ ಇಲ್ಲಿನ ನೀರಿನ ಸಮಸ್ಯೆ ಪರಿಹಾರಗೊಂಡು ಸುತ್ತೆಲ್ಲ ಕೃಷಿ ಭೂಮಿಗಳು ಸಮೃದ್ಧಿ ಪಡೆದುಕೊಂಡವೆಂಬ ಪ್ರತೀತಿಯಿದೆ. ಆಚಾರ್ಯರ ದಂಡದಿಂದ ಉದ್ಭವಿಸಿದ ಕಾರಣಕ್ಕೆ ಈ ಕೆರೆಗೆ ದಂಡತೀರ್ಥವೆಂದು ಹೆಸರಾಯಿತು. ಇಂದಿಗೂ ಈ ಕೆರೆ ವರ್ಷದ 12 ತಿಂಗಳೂ ನೀರಿನ ಸಮೃದ್ಧಿಯನ್ನು ಕಾಯ್ದುಕೊಂಡು ಬರುತ್ತಿದೆ.
ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಅಷ್ಟಮಠಗಳ ಯತಿಗಳು ತಮ್ಮ ತಮ್ಮ ಪರ್ಯಾಯದ ಅವದಿಯಲ್ಲಿ ಸರ್ವಜ್ಞ ಪೀಠಾರಹಣಕ್ಕೆ ಮುನ್ನ ಇಲ್ಲಿನ ಕೆರೆಯಲ್ಲಿ ಜಳಕ ಪೂರೈಸಿ, ಮಠದ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿಯೇ ಮುಂದಿನ ಎರಡು ವರ್ಷಗಳ ಅವಧಿಗೆ ಉಡುಪಿ ಶ್ರೀಕೃಷ್ಣನ ಪೂಜೆಯ ಜವಾಬ್ದಾರಿ ನಿರ್ವಹಿಸಲು ತೆರಳುವುದು ಸಂಪ್ರದಾಯ.
ಆಚಾರ್ಯ ಮಧ್ವರು ತಮ್ಮ ದಂಡದಿಂದ ನಿರ್ಮಿಸಿದ್ದರೆನ್ನುವ ಐತಿಹ್ಯ ಇರುವ ಈ ಕೆರೆಯನ್ನು ಶಾಸಕ ವಿನಯ ಕುಮಾರ್‌ ಸೊರಕೆಯವರ ಮುತುವರ್ಜಿಯಿಂದ ರಾಜ್ಯ ಸರಕಾರದ ಸುಮಾರು 17 ಲಕ್ಷ ರೂ. ಅನುದಾನದಲ್ಲಿ ನವೀಕರಣಗೊಳಿಸಲಾಗಿತ್ತು.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago